ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಇದುವರೆಗೂ 15 ಕೋಟಿ ಜನರಿಗೆ ಕೊರೊನಾ ಲಸಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 29: ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಜನವರಿ 16ರಿಂದ ಬೃಹತ್ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಇದುವರೆಗೂ 15 ಕೋಟಿ ಡೋಸ್‌ಗಳ ಲಸಿಕೆ ನೀಡಲಾಗಿದೆ.

ಬುಧವಾರ ರಾತ್ರಿ 8 ಗಂಟೆವರೆಗೆ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಒಟ್ಟು ಸಂಖ್ಯೆ 14,98,77,121 ತಲುಪಿದೆ.

ಕೇಂದ್ರದಿಂದ ಲಸಿಕೆ ಬಂದ ಬಳಿಕ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಚುರುಕುಕೇಂದ್ರದಿಂದ ಲಸಿಕೆ ಬಂದ ಬಳಿಕ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಚುರುಕು

ಇದರಲ್ಲಿ 93,66,239 ಆರೋಗ್ಯ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 61,45,854 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,23,09,507 ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 65,99,492 ಎಫ್ ಎಲ್ ಡಬ್ಲ್ಯೂಗಳು (2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 5,09,75,753 (1ನೇ ಡೋಸ್) ಹಾಗೂ 45 ರಿಂದ 60 ವರ್ಷದೊಳಗಿನ (2ನೇ ಡೋಸ್) 31,42,239, 60 ವರ್ಷ ಮೇಲ್ಪಟ್ಟ 5,14,70,903 (1ನೇ ಡೋಸ್) ಮತ್ತು 60 ವರ್ಷ ಮೇಲ್ಪಟ್ಟ 98,67,134 ಮಂದಿ(2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.

Total Vaccination Across India Come Near 15 Crore Mark

ಒಟ್ಟು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ 103ನೇ ದಿನವಾದ ಬುಧವಾರ ರಾತ್ರಿ 8 ಗಂಟೆಯವರೆಗೆ 20,49,754 ಲಸಿಕೆ ಡೋಸ್ ಗಳನ್ನು ನೀಡಲಾಗುತ್ತದೆ. ಪ್ರಾಥಮಿಕ ವರದಿಗಳ ಪ್ರಕಾರ, ಆ ಪೈಕಿ 11,92,934 ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 8,57,360 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
English summary
The total vaccination across the country has come near to 15 Cr mark. Also, the country has administered more than 20 lakh vaccine doses till 8 pm wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X