Tirupati Laddu Row ಲಡ್ಡು ವಿವಾದ: ಪ್ರಕಾಶ್‌ರಾಜ್‌ಗೆ ಟಾಂಗ್ ಕೊಟ್ಟ ತೆಲುಗು ಪ್ರಮುಖ ನಟ
ತಿರುಪತಿ ಲಡ್ಡು ವಿಚಾರವಾಗಿ ನಟ ಪ್ರಕಾಶ್ ರಾಜ್ ಮಾತನಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ತೆಲುಗಿನ ಪ್ರಮುಖ ನಟ ಟಾಂಗ್ ಕೊಟ್ಟಿದ್ದಾರೆ. ಇದು ತುಂಬಾ ಪವಿತ್ರವಾದ ವಿಷಯ. ತಿರುಪತಿ ತಿರುಮಲದಲ್ಲಿ ಪ್ರಸಾದವಾಗಿ ನೀಡುವ ಲಡ್ಡು ಕೇವಲ ಲಡ್ಡು ಅಲ್ಲ ಅದರೊಂದಿಗೆ ಹಿಂದೂ ಧರ್ಮೀಯರ ಭಾವನಾತ್ಮಕ ಸಂಬಂಧವೂ ಇದೆ ಎಂದು ತೆಲುಗಿನ ನಟ ಹೇಳಿದ್ದಾರೆ. ಲಡ್ಡು ಪ್ರಸಾದಕ್ಕೆ ಸಂಬಂಧಿಸಿದಂತೆ ಈಚೆಗಷ್ಟೇ ನಟ ಪ್ರಕಾಶ್ ರಾಜ್ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಇದು ಅದರ ಮುಂದುವರಿದ ಭಾಗವಾಗಿದೆ.
ತೆಲುಗಿನ ಪ್ರಮುಖ ನಟ ಹಾಗೂ ನಿರ್ಮಾಪಕ ವಿಷ್ಣು ಮಂಚು ಅವರು ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್ ರಾಜ್ ಹಾಗೂ ಪವನ್ ಕಲ್ಯಾಣ್ ಅವರ ಟ್ವೀಟ್‌ವಾರ್‌ನ ನಡುವೆ ಪ್ರವೇಶಿಸಿರುವ ನಟ ವಿಷ್ಣು, ಪ್ರಕಾಶ್‌ರಾಜ್ ಸರ್ ಸ್ವಲ್ಪ ಸಮಾಧಾನಿತರಾಗಿ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದಾಗಿ ನೀಡುವ ಲಡ್ಡು ಕೇವಲ ಪ್ರಸಾದ ಮಾತ್ರವಲ್ಲ. ಇದು ನನ್ನಂತಹ ಲಕ್ಷಾಂತರ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಈ ರೀತಿ ಕೋಟ್ಯಾಂತ ಭಕ್ತರ ನಂಬಿಕೆ, ಪವಿತ್ರ ಸಂಪ್ರದಾಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪವನ್ ಅವರು ಸಂಪೂರ್ಣ ತನಿಖೆ ಮತ್ತು ಸರಿಯಾಗಿಯೇ ಹೇಳಿದ್ದಾರೆ. ಇದರಲ್ಲಿ ಕೋಮು ಬಣ್ಣವನ್ನು ಎಲ್ಲಿ ಸೇರಿಸಲಾಗುತ್ತಿದೆ ಎಂದೂ ಅವರು ಕೇಳಿದ್ದಾರೆ.

😂😂😂😂 Ok sivayyyyyaaaaa .. i have my perception .. you have yours … Noted #justasking https://t.co/MmGUiXv5mN
— Prakash Raj (@prakashraaj) September 21, 2024
ನಗುತ್ತಲ್ಲೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್
ಇದಕ್ಕೆ ಪ್ರಕಾಶ್ ರಾಜ್ ಅವರು ನಗುತ್ತಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಸರಿ ಶಿವಯ್ಯ, ನನ್ನ ಅಭಿಪ್ರಾಯ ಭಿನ್ನವಾಗಿದೆ. ನಿಮ್ಮ ನಿಲುವು ಬೇರೆ ಇದೆ. ನೋಟೆಡ್ ಎಂದಿದ್ದಾರೆ. ಈ ಟ್ವೀಟ್‌ನ ಪ್ರಾರಂಭಿಕ ಸಾಲುಗಳಲ್ಲಿ ನಗುವ ಇಮೋಜ್‌ಗಳನ್ನು ಬಳಸಲಾಗಿದೆ.
ಟ್ವೀಟ್ ಚರ್ಚೆ ಪ್ರಾರಂಭವಾಗಿದ್ದು ಹೇಗೆ ?
ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಕೊಬ್ಬು ಬಳಸಲಾಗಿದೆ ಎನ್ನುವ ಆರೋಪದ ಬಗ್ಗೆ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪ್ರತಿಕ್ರಿಯಿಸಿದ್ದರು. ಅದಕ್ಕೆ ನಟ ಪ್ರಕಾಶ್ ರಾಜ್ ಅವರು ಪ್ರತಿಕ್ರಿಯಿಸಿದ್ದರು. ಅದರ ಮುಂದುವರಿದ ಭಾಗ ಇದಾಗಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಪ್ರಸಾದ ರೂಪದಲ್ಲಿ ನೀಡುವ ಲಡ್ಡು ತಯಾರಿಕೆಗೆ ತುಪ್ಪದಲ್ಲಿ ಹಸುವಿನ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗುತ್ತಿದೆ ಎನ್ನುವಂತಹ ಗಂಭೀರ ಆರೋಪ ಕೇಳಿ ಬಂದಿದ್ದು. ಇದಕ್ಕೆ ಸಂಬಂಧಿಸಿಂತೆ ಟ್ವಿಟ್ಟರ್‌ನಲ್ಲಿ ಪ್ರಕಾಶ್ ರಾಜ್ ಹಾಗೂ ಪವನ್ ಕಲ್ಯಾಣ್ ಇಬ್ಬರೂ ಟ್ವೀಟ್ ಮಾಡಿದ್ದರು.
ಪವನ್ ಕಲ್ಯಾಣ್ ಅವರನ್ನು ಉದ್ದೇಶಿಸಿ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್‌ಗೆ ಈಗ ತೆಲುಗು ನಟ ವಿಷ್ಣು ಪ್ರತಿಕ್ರಿಯೆ ನೀಡಿದ್ದಾರೆ. ಪವನ್ ಕಲ್ಯಾಣ್ ಅವರೇ, ಈ ಪ್ರಕರಣವು (ತಿರುಪತಿ ಲಡ್ಡು ವಿವಾದ) ನೀವು ಉಪ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿಯೇ (ಆಂಧ್ರಪ್ರದೇಶದಲ್ಲೇ) ಸಂಭವಿಸಿದೆ. ಅಪರಾಧಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದರು. ಮುಂದುವರಿದು ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮುಸೂಕ್ಷ್ಮ ವಿಚಾರಗಳಿವೆ. ಕೇಂದ್ರದಲ್ಲಿ ಇರುವ ನಿಮ್ಮ ಸ್ನೇಹಿತರಿಗೆ ಥ್ಯಾಂಕ್ಸ್ ಎಂದು ಹೇಳುವ ಮೂಲಕ ಬಿಜೆಪಿಗೂ ಟಾಂಗ್ ಕೊಟ್ಟಿದ್ದರು.












Click it and Unblock the Notifications