ಸುಧಾರಿತ ಸ್ಫೋಟಕ ಸಾಧನ ತಜ್ಞ, ಪ್ರಮುಖ ಮಾವೋವಾದಿ ನಾಯಕನ ಎನ್‌ಕೌಂಟರ್

ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರು ಮಾಡಿ ಪ್ಲಾಂಟ್ ಮಾಡಿ ಹಲವು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾಗಿದ್ದ ಮಾವೋವಾದಿ 36 ವರ್ಷ ಮಹೇಶ್ ಕೊರ್ಸಾ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ. ಕಳೆದ ವಾರ ನಡೆದ ಎನ್‌ಕೌಂಟರ್ ನಲ್ಲಿ ಹತ್ಯೆ ಮಾಡಿರುವ 3 ಮಾವೋವಾದಿಗಳಲ್ಲಿ ಮಹೇಶ್ ಕೊರ್ಸಾ ಕೂಡ ಒಬ್ಬರು ಎನ್ನುವ ಸಂಗತಿಯನ್ನು ಪೊಲೀಸರು ತಿಳಿಸಿದ್ದಾರೆ.

2017ರಲ್ಲಿ ನಡೆದ ಸ್ಫೋಟದಲ್ಲಿ 25 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ದಾಳಿಯಲ್ಲಿ ಕೊರ್ಸಾ ಪ್ರಮುಖ ಪಾತ್ರ ವಹಿಸಿದ್ದರು. 2020 ರಲ್ಲಿ ಸುಧಾರಿತ ಸ್ಫೋಟಕ ಬಳಿಕ 17 ಮಂದಿ ಭದ್ರತಾ ಸಿಬ್ಬಂದಿ ಮತ್ತು 2021ರಲ್ಲಿ 22 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರಲ್ಲಿ ಕೂಡ ಮಹೇಶ್ ಕೊರ್ಸಾ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗಿದೆ.

top maoist ied expert mahesh korsa killed in encounter

ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ಯ ಸಶಸ್ತ್ರ ವಿಭಾಗ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯಲ್ಲಿ ಉಪ ಪ್ಲಟೂನ್ ಕಮಾಂಡರ್ ಆಗಿದ್ದರು. ಈ ಮೊದಲು ಆತ ಪಿಎಲ್‌ಜಿಎ ಬೆಟಾಲಿಯನ್ 1ರ ಭಾಗವಾಗಿದ್ದರು. ಇದು ಮಾವೋವಾದಿಗಳಲ್ಲೇ ಅತ್ಯಂತ ಅಪಾಯಕಾರಿ ಗುಂಪು ಎಂದು ಪರಿಗಣಿಸಲಾಗಿದೆ.

ಮೂರು ಬಾರಿ ತಪ್ಪಿಸಿಕೊಂಡಿದ್ದ

ಮಹೇಶ್ ಕೊರ್ಸಾನನ್ನು ಹತ್ಯೆಗೈಯ್ಯಲು ಭದ್ರತಾ ಸಿಬ್ಬಂದಿ ಈ ಮೊದಲು ಪ್ರಯತ್ನ ಮಾಡಿದ್ದರು. ಕನಿಷ್ಠ ಮೂರು ಸಂದರ್ಭಗಳಲ್ಲಿ ನ್ಸಾಸ್ ರೈಫಲ್ ಬಳಸಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಕ್ಮಾ ಪೊಲೀಸರ ದಾಖಲೆಗಳ ಪ್ರಕಾರ, 2015 ರಲ್ಲಿ ಚಿಂಟಗುಫಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ನಲ್ಲಿ ಮಹೇಶ್ ಕೊರ್ಸಾ ಹೆಸರು ಮೊದಲು ಕಾಣಿಸಿಕೊಂಡಿದೆ. ಆ ಎನ್‌ಕೌಂಟರ್ ನಲ್ಲಿ ಏಳು ಎಸ್‌ಟಿಎಫ್‌ ಸಿಬ್ಬಂದಿ ಮೃತಪಟ್ಟು 10 ಜನ ಗಾಯಗೊಂಡಿದ್ದರು.

2017ರಲ್ಲಿ ಬುರ್ಕಾಪಾಲ್‌ನಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಿ ನಡೆಸಿದ ವಿಧ್ವಂಸದಲ್ಲಿ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಏಳು ಜನ ಗಾಯಗೊಂಡಿದ್ದರು. 2020ರಲ್ಲಿ ನಡೆದ ಎನ್‌ಕೌಂಟರ್ ನಲ್ಲಿ 17 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದರು.

2021 ರಲ್ಲಿ ಸುಕ್ಮಾದ ಟೆಕಲ್‌ಗುಡೆಮ್‌ನಲ್ಲಿ 22 ಜವಾನರ ಸಾವಿಗೆ ಕಾರಣವಾದ ಎನ್‌ಕೌಂಟರ್‌ನಲ್ಲಿ ಮತ್ತು 2023 ರಲ್ಲಿ ಸಿಂಗ್ರಾಮ್ ರಸ್ತೆಯಲ್ಲಿ ಮೂರು ಜವಾನರು ಸಾವನ್ನಪ್ಪಿದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮಹೇಶ್ ಕೊರ್ಸಾ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+