Tomato Price: ಮುಂದಿನ ದಿನಗಳಲ್ಲಿ 300 ರೂಪಾಯಿ ದಾಟಲಿದೆ ಟೊಮೆಟೊ ಬೆಲೆ!

ಸದ್ಯದ ಟೊಮೆಟೊ ಬೆಲೆ ನೋಡಿ ಶಾಕ್ ಆಗಿರುವವರಿಗೆ ಮತ್ತೊಂದು ದೊಡ್ಡ ಆಘಾತ ಕಾದಿದೆ. ಹೌದು, ಪರಿಸ್ಥಿತಿ ಹೀಗೆ ಮುಂದುವರೆದರೆ ಟೊಮೆಟೊ ಬೆಲೆ ಪ್ರತಿ ಕೆ.ಜಿಗೆ 300 ರೂಪಾಯಿ ದಾಟಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಟೊಮೆಟೊ ಮಾತ್ರವಲ್ಲ ಇತರೆ ತರಕಾರಿಗಳ ಬೆಲೆ ಕೂಡ ಗಗನಕ್ಕೇರಲಿದೆ ಎಂದು ಹೇಳಲಾಗಿದೆ.

ದೆಹಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ಕೌಶಿಕ್ ಮಾತನಾಡಿ, ಟೊಮೇಟೊ, ಕ್ಯಾಪ್ಸಿಕಂ, ಇತರೆ ಹಂಗಾಮಿನ ತರಕಾರಿಗಳ ಮಾರಾಟ ಗಣನೀಯವಾಗಿ ಕುಸಿದಿರುವುದರಿಂದ ತರಕಾರಿ ಸಗಟು ವ್ಯಾಪಾರಿಗಳು ನಷ್ಟ ಎದುರಿಸುತ್ತಿದ್ದಾರೆ ಎಂದು ಪಿಟಿಐಗೆ ಹೇಳಿದ್ದಾರೆ.

tomato-prices-in-could-surge

ಸಗಟು ಮಾರುಕಟ್ಟೆಯಲ್ಲಿ ಕಿಲೋಗೆ 160 ರೂಪಾಯಿ ಇದ್ದ ಟೊಮೇಟೊ ಬೆಲೆ 220 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಬೆಲೆಯೂ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಿದ್ದಾರೆ.

ಮದರ್ ಡೈರಿಯು ತನ್ನ ಸಫಲ್ ರೀಟೇಲ್ ಸ್ಟೋರ್‌ಗಳ ಮೂಲಕ ಬುಧವಾರ ಟೊಮ್ಯಾಟೊವನ್ನು ಕೆಜಿಗೆ 259 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಕಾರಣ ಟೊಮೆಟೊ ಬೆಲೆಗಳು ಈಗ ಒಂದು ತಿಂಗಳಿನಿಂದ ಭಾರಿ ಏರಿಕೆಯಾಗಿದೆ.

300 ರೂಪಾಯಿ ತಲುಪುವ ಸಾಧ್ಯತೆ

"ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ತರಕಾರಿ ಸಾಗಣೆಗೆ ತುಂಬಾ ತೊಂದರೆಯಾಗಿದೆ. ಬೆಳೆಗಾರರು ತಾವು ಬೆಳೆದ ತರಕಾರಿಗಳನ್ನು ದೆಹಲಿಗೆ ತಲುಪಿಸಲು 6 ರಿಂದ 8 ಗಂಟೆ ತೆಗೆದುಕೊಳ್ಳುತ್ತದೆ. ಸಾಗಾಣಿಕ ವೆಚ್ಚ ಹೆಚ್ಚಾಗಲಿರುವ ಕಾರಣ, ಟೊಮೆಟೋ ಬೆಲೆ ಕೆಜಿಗೆ 300 ರೂಪಾಯಿ ತಲುಪಬಹುದು" ಎಂದು ಆಜಾದ್‌ಪುರ ಮಂಡಿ ಸಗಟು ವ್ಯಾಪಾರಿ ಸಂಜಯ್ ಭಗತ್ ಹೇಳಿದ್ದಾರೆ

ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ರಫ್ತು ಮಾಡುವ ಟೊಮೆಟೊ ಮತ್ತು ಇತರ ತರಕಾರಿಗಳ ಗುಣಮಟ್ಟ ಕುಸಿದಿದೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ, ಮಳೆಯಿಂದಾಗಿ ಟೊಮೆಟೊ ಗುಣಮಟ್ಟ ಕುಸಿತವಾಗಿದೆ.

ಕರ್ನಾಟಕದಲ್ಲೂ ಗಗನಕ್ಕೇರಿದ ಟೊಮೆಟೊ

ರಾಜ್ಯದಲ್ಲಿ ಕೂಡ ಟೊಮೆಟೊ ದರ ಭಾರಿ ಹೆಚ್ಚಳವಾಗಿದ್ದು ಹಲವು ಜಿಲ್ಲೆಗಳಲ್ಲಿ 200 ರೂಪಾಯಿಯಂತೆ ಮಾರಾಟವಾಗುತ್ತಿದೆ. ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಮಾರುಕಟ್ಟೆಗಳಿಗೆ ಟೊಮೆಟೊ ಆವಕ ಕಡಿಮೆಯಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದು ಪೂರೈಕೆ ಮತ್ತಷ್ಟು ಕಡಿಮೆಯಾಗಲು ಕಾರಣವಾಗಿದೆ.

ಸದ್ಯ ಬೆಂಗಳೂರಿನಲ್ಲಿ ಟೊಮೆಟೊ ದರ 150-160 ರೂಪಾಯಿ ತಲುಪಿದ್ದು ಪೂರೈಕೆ ಕಡಿಮೆಯಾದರೆ 200 ರೂಪಾಯಿ ತಲುಪುವ ಸಾಧ್ಯತೆ ಇದೆ. ಇನ್ನೂ ಒಂದು ತಿಂಗಳ ಕಾಲ ಟೊಮೆಟೊ ದರ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+