Tomato price: ಟೊಮೆಟೊ ಬೆಲೆ ಏರಿಕೆ ನಡುವೆ 2 ಕೋಟಿಗೂ ಹೆಚ್ಚು ಲಾಭ ಗಳಿಸಿದ ಪುಣೆ ರೈತ!
ಮುಂಬೈ, ಜುಲೈ. 18: ಟೊಮೆಟೊ ಬೆಲೆಯಲ್ಲಿ ಎಂಟು ಪಟ್ಟು ಹೆಚ್ಚಳ ಕಂಡಿದ್ದು, ಇದು ಕೆಲವು ರೈತರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ. ಆದರೂ ಮುಂಬರುವ ವಾರಗಳಲ್ಲಿ ಪೂರೈಕೆಯಲ್ಲಿ ಏರಿಕೆಯಾಗುವ ಸಾಧ್ಯತೆಯ ಕಾರಣದಿಂದಾಗಿ ಅವರ ಈ ಲಾಭಗಳು ಅಲ್ಪಕಾಲಿಕವಾಗಿರಬಹುದು. ಒಂದಷ್ಟು ರೈತರು ಕೋಟಿ ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ರೈತರೊಬ್ಬರು 2 ಕೋಟಿ ರೂಪಾಯಿಗೂ ಹೆಚ್ಚು ಲಾಭ ಗಳಿಸಿದ್ದಾರೆ.
ಭಾನುವಾರದಂದು ದೆಹಲಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆಗಳು ಒಂದು ಕಿಲೋಗ್ರಾಂಗೆ 178 ರೂಪಾಯಿಗಳಾಗಿದ್ದು, ಜನವರಿ 1 ರಿಂದ 700% ಕ್ಕಿಂತ ಹೆಚ್ಚು ದರ ಹೆಚ್ಚಳವಾಗಿದೆ ಎಂದು ಆಹಾರ ಸಚಿವಾಲಯವು ಸಂಗ್ರಹಿಸಿದ ಮಾಹಿತಿ ನೀಡಿದೆ. ಆ ದಿನ ರಾಷ್ಟ್ರೀಯ ಸರಾಸರಿ ಸುಮಾರು 120 ರೂಪಾಯಿ ಆಗಿತ್ತು.

ಟೊಮೆಟೋ ಪೂರೈಕೆಯನ್ನು ಭಾರೀ ಮಳೆ ಅಡ್ಡಿಪಡಿಸಿದ ಕಾರಣ ಬೆಲೆಯಲ್ಲಿ ದಿಢೀರ್ ಏರಿಕೆ ಉಂಟಾಗಿತ್ತು. ಇದರ ಬೆನ್ನಲ್ಲೇ ಅನೇಕ ಕುಟುಂಬಗಳು ತಾತ್ಕಾಲಿಕವಾಗಿ ಟೊಮೆಟೊಗಳನ್ನು ಬಳಸುವುದನ್ನು ತ್ಯಜಿಸಿದ್ದಾರೆ. ಆದರೆ ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಹರ್ಷಗೊಂಡಿದ್ದಾರೆ. ಈವರೆಗೆ ಟೊಮೆಟೊ ಬೆಲೆ ಯಾವಾಗಲೂ ಇಳಿಕೆ ಕಾಣುತ್ತಿತ್ತು.
ಮಹಾರಾಷ್ಟ್ರದ ಜುನ್ನಾರ್ ಬಳಿ 12 ಎಕರೆ (4.9 ಹೆಕ್ಟೇರ್) ಭೂಮಿಯಲ್ಲಿ ಟೊಮ್ಯಾಟೊ ಬೆಳೆದಿರುವ ಈಶ್ವರ್ ಗೇಕರ್ ಮತ್ತು ಅವರ ಪತ್ನಿ ಸೋನಾಲಿ ಪ್ರಸಕ್ತ ಋತುವಿನಲ್ಲಿ ಇದುವರೆಗೆ ಸುಮಾರು 24 ಮಿಲಿಯನ್ ರೂಪಾಯಿಗಳ ಲಾಭವನ್ನು ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.5 ಮಿಲಿಯನ್ ಹೆಚ್ಚು ಎಂದಿದ್ದಾರೆ.
ಟೊಮೆಟೋ ಹೊಲಗಳನ್ನು ನಿರ್ವಹಿಸಲು 60 ರಿಂದ 70 ದೈನಂದಿನ ಕೆಲಸಗಾರರನ್ನು ನೇಮಿಸಿಕೊಳ್ಳುವ ದಂಪತಿ ಈ ಪ್ರದೇಶದಲ್ಲಿ ಟೊಮೆಟೊಗಳ ಅತಿದೊಡ್ಡ ಪೂರೈಕೆದಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ಸಂದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದರಿಂದ ರೈತ ಈಶ್ವರ್ ಗೇಕರ್ ಸೆಲೆಬ್ರಿಟಿ ಸ್ಥಾನಮಾನ ಪಡೆದುಕೊಂಡಿದ್ದಾರೆ.

"ಸುಮಾರು ಒಂದೂವರೆ ತಿಂಗಳ ಹಿಂದೆ, ಟೊಮೆಟೊಗಳು ಕಿಲೋಗ್ರಾಂಗೆ ಕೇವಲ 25 ರೂಪಾಯಿಗಳನ್ನು ಪಡೆಯುತ್ತಿದ್ದವು" ಎಂದು 2021 ರ ಅದೇ ಋತುವಿನಲ್ಲಿ ಸುಮಾರು 2 ಮಿಲಿಯನ್ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದನ್ನು ರೈತ ಈಶ್ವರ್ ಗೇಕರ್ ಹೇಳಿದ್ದಾರೆ. ಇದರ ಜೊತೆಗೆ ಸರಬರಾಜು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ" ಎಂದಿದ್ದಾರೆ.
ಕೃಷಿಕ ದಂಪತಿ ಇತ್ತೀಚಿನ ವಾರಗಳಲ್ಲಿ ಸುಮಾರು 350 ಟನ್‌ಗಳನ್ನು ಪೂರೈಸಿದ್ದಾರೆ ಮತ್ತು ಹವಾಮಾನ ಪರಿಸ್ಥಿತಿಯು ಹದಗೆಡದಿದ್ದಲ್ಲಿ ಶೀಘ್ರದಲ್ಲೇ ಇನ್ನೂ 150 ಟನ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆಯಿದೆ. ಇವರು ಪ್ರತಿ ವರ್ಷ ಮೂರು ಫಸಲುಗಳನ್ನು ಕೊಯ್ಯುತ್ತಾರ. ಪ್ರಸ್ತುತ ಬೆಳೆ 120 ರಿಂದ 140 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಭಾರೀ ಮಾನ್ಸೂನ್ ಮಳೆ ಮತ್ತು ಪ್ರವಾಹದ ನಂತರ ಸಾರಿಗೆ ಅಡೆತಡೆಗಳಿಂದ ಸರಬರಾಜು ಹಾನಿಗೊಳಗಾಗಿವೆ ಮತ್ತು ಇತರ ತರಕಾರಿಗಳು ಸಹ ದುಬಾರಿಯಾಗಿರುವುದರಿಂದ ಹಣದುಬ್ಬರವು ಹೆಚ್ಚಾಗುತ್ತದೆ. ಈ ವಿಚಾರ ಮುಖಪುಟದ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಈ ಪರಿಸ್ಥಿತಿಗೆ ಗ್ರಾಹಕರು ವರುಣ ಹಾಗೂ ಅಧಿಕಾರಿಗಳನ್ನೇ ದೂರುತ್ತಿದ್ದಾರೆ.
ಮೊಬೈಲ್ ವ್ಯಾನ್‌ಗಳನ್ನು ನಿಯೋಜಿಸುವ ಮೂಲಕ ಸರ್ಕಾರವು ಅನೇಕ ಸ್ಥಳಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಇದು ಸ್ವಲ್ಪ ಪ್ರಭಾವವನ್ನು ತೋರಿಸುತ್ತಿದೆ. ಆದರೆ 1.4 ಬಿಲಿಯನ್ ಜನರಿರುವ ದೇಶದಲ್ಲಿ ಗ್ರಾಹಕರಿಗೆ ಈ ಟೊಮೆಟೋ ಬೆಲೆಗಳು ಹೆಚ್ಚು. ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಗಾಲದ ತಿಂಗಳುಗಳಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ ಹೆಚ್ಚಾಗುತ್ತವೆ.












Click it and Unblock the Notifications