Tomato Price: ಟೊಮೆಟೊ ಬೆಲೆ ಅಡ್ಡಡ್ಡ.. ಉದ್ದುದ್ದ.. ರೈತ ಕಂಗಾಲು

ಟೊಮೆಟೊ ಬೆಳೆದವರ ಬಾಳು ಬಂಗಾರವಾಯ್ತು.. ಅರೆ ಈ ಮಾತು ಇವತ್ತಿನದ್ದು ಅಲ್ಲ. ಕೆಲವು ತಿಂಗಳ ಹಿಂದೆ ಇಂತಹ ಮಾತು ಚಾಲ್ತಿಯಲ್ಲಿ ಇತ್ತು. ಆದರೆ ಇವತ್ತು ಟೊಮೆಟೊ ಬೆಳೆದವರ ಬಾಳು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂಪಾಯಿ ಲಾಭ ತಂದುಕೊಟ್ಟಿದ್ದ ಇದೇ ಟೊಮೆಟೊ ಇದೀಗ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದೆ. ಬೆವರು ಹರಿಸಿ ಬೆಳೆ ಬೆಳೆದಿದ್ದ ರೈತರಿಗೆ ಸಿಗುತ್ತಿರುವುದು ಮಾತ್ರ ಪುಡಿಗಾಸು.

ಉತ್ತರ ಭಾರತ ಹಾಗೂ ಆಂಧ್ರ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ಟೊಮೆಟೊ ಬೇಡಿಕೆ ಕುಸಿದಿದೆ. ಬೇರೆ ಬೇರೆ ರಾಜ್ಯದಿಂದ ಟೊಮೆಟೊ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆ ಕಡೆಗೆ ಹೆಜ್ಜೆ ಹಾಕಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಹಿಡಿತಕ್ಕೆ ತರಲು ಕೇಂದ್ರ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲದರ ಪರಿಣಾಮ ಈಗ ಟೊಮೆಟೊ ಬೆಲೆ ಹಿಡಿತಕ್ಕೆ ಸಿಕ್ಕಿದೆ. ಆದರೆ ಹಿಡಿತಕ್ಕೆ ಮಾತ್ರವಲ್ಲ, ಕಷ್ಟಪಟ್ಟು ಟೊಮೆಟೊ ಬೆಳೆದ ರೈತನ ಕಣ್ಣಲ್ಲಿ ರಕ್ತ ಬರುವಂತಾಗಿದೆ. ಹಾಗಾದರೆ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಎಷ್ಟಿದೆ? ಮುಂದೆ ಓದಿ.

tomato-price-hits-lower-circuit-level

ಟೊಮೆಟೊ ಬೆಲೆ ₹200 ಅಲ್ಲ ₹15!

ಹೌದು, ಟೊಮೆಟೊ ಬೆಲೆ ಅದು ಯಾವ ರೇಂಜ್‌ಗೆ ಕುಸಿತ ಕಂಡಿದೆ ಅಂದ್ರೆ ನೆಲಕ್ಕೆ ಅಲ್ಲ ಪಾತಾಳಕ್ಕೆ ಸೇರಿದೆ. ಹೀಗಾಗಿ ಲಕ್ಷ ಲಕ್ಷ ಸಾಲ ಮಾಡಿ ತಂದು ಸುರಿದು ಬೆಳೆ ಬೆಳದಿರುವ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಒಂದೆರಡು ತಿಂಗಳ ಹಿಂದಷ್ಟೇ ಟೊಮೆಟೊ ಪ್ರತಿ ಕೆಜಿಗೆ ಬರೋಬ್ಬರಿ ₹200 ರೂಪಾಯಿ ಗಡಿಯನ್ನು ದಾಟಿತ್ತು. ಹೀಗೆ ಇನ್ನೇನು 300 ರೂಪಾಯಿ ಮುಟ್ಟುತ್ತೆ ಅಂತಾ ಅಂದುಕೊಳ್ಳಲಾಗಿತ್ತು. ಆದರೆ ದಿಢೀರ್ ಕುಸಿಯಲು ಶುರು ಮಾಡಿದ ಟೊಮೆಟೊ ರೇಟ್, ಈಗ ಕೇವಲ ₹15 ರೂಪಾಯಿಗೆ ಕುಸಿತ ಕಂಡಿದೆ. ಹೌದು, ಟೊಮೆಟೊ ಪ್ರತಿ ಕೆಜಿಗೆ ಈಗ 200 ರೂಪಾಯಿಯಿಂದ 15 ರೂಪಾಯಿಗೆ ಸಿಗುವಂತಾಗಿದೆ.

ದೇವರೆ.. ಏನಿದು ಟೊಮೆಟೊ ಬರೆ?

ಅಷ್ಟಕ್ಕು ಕಳೆದ 3 ತಿಂಗಳು ನಿರಂತವಾಗಿ ಗಗನಕ್ಕೇರಿದ್ದ ಟೊಮೆಟೊ ಈಗ ಕೇಳುವವರೆ ದಿಕ್ಕಿಲ್ಲ ಎಂಬಂತಾಗಿದೆ. ಇತ್ತೀಚಿಗೆ ಟೊಮೆಟೊ ಬೆಲೆ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಿರಂತರ ಬೆಲೆ ಏರಿಕೆಯಿಂದ ದಾಖಲೆ ಬರೆದಿದ್ದ ಟೊಮೆಟೊ ಈಗ ಅಷ್ಟೇ ವೇಗವಾಗಿ ಪಾತಾಳ ಸೇರಿದೆ. ಜುಲೈ ಕೊನೆಯಲ್ಲಿ ಹದಿನೈದು ಕೆಜಿ ಬಾಕ್ಸ್​ ಟೊಮೆಟೋ 2,700 ರೂಪಾಯಿ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಈಗ ಕೇವಲ 100 ರಿಂದ 230 ರೂಪಾಯಿಗೆ 15 ಕೆಜಿಯ ಬಾಕ್ಸ್ ಹರಾಜಾಗಿದೆ. ಅಂದರೆ ಪ್ರತಿ ಕೆಜಿಗೆ ಕೇವಲ‌ 12 ರಿಂದ 15 ರೂಪಾಯಿ ಬೆಲೆ. ಇದು ರೈತರ ಎದೆಯಲ್ಲಿ ನೋವು ಆವರಿಸುವಂತೆ ಮಾಡಿದೆ. ಕಷ್ಟಪಟ್ಟು ಬೆಳೆ ಬೆಳೆದರೂ ಬೆಲೆ ಸಿಗ್ತಿಲ್ಲ.

tomato-price-hits-lower-circuit-level

ಲಾರಿ ಲಾರಿ ಟೊಮೆಟೊ ಎಂಟ್ರಿ

ಎರಡು ತಿಂಗಳ ಹಿಂದೆ ಕೋಲಾರ ಟೊಮೆಟೊ ಮಾರುಕಟ್ಟೆಗೆ ಪ್ರತಿ ದಿನ 60ರಿಂದ 70 ಸಾವಿರ ಬಾಕ್ಸ್ ಟೊಮೆಟೊ ಬರುತ್ತಿತ್ತು. ಆದರೆ ಈಗ 1 ಲಕ್ಷಕ್ಕೂ ಹೆಚ್ಚು ಟೊಮೆಟೊ ಬಾಕ್ಸ್ ಬಂದು ಸೇರುತ್ತಿವೆ. ಈ ಕಾರಣಕ್ಕೆ ಪ್ರತಿ ಕ್ರೇಟ್ ಟೊಮೆಟೊಗೆ ಬರೀ 100ರಿಂದ 240 ರೂಪಾಯಿ ಬೆಲೆ ಸಿಗುತ್ತಿದೆ ಎನ್ನಲಾಗುತ್ತಿದೆ. ಇದು ಕೃಷಿಕರಿಗೆ ಮಾತ್ರವಲ್ಲ ಗ್ರಾಹಕರಿಗೂ ಶಾಕ್ ಕೊಡುತ್ತಿದೆ. ಬೆಲೆ ಬಂದರೆ ಬೆಳೆ ಇರಲ್ಲ, ಬೆಳೆ ಇದ್ರೆ ಬೆಲೆ ಬರಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಟೊಮೆಟೊ ಬೆಲೆ ಕಾಲಚಕ್ರ ನೆನಪಿಸುತ್ತಿದೆ, ಇದರ ಜೊತೆ ಭಾರತದ ಕೃಷಿ ಮಾರುಕಟ್ಟೆಯ ಅನಿಶ್ಚಿತ ವಾತಾವರಣದ ಬಗ್ಗೆಯೂ ತಿಳಿಸುತ್ತಿದೆ. ಅದರಲ್ಲೂ ಲಕ್ಷಾಂತರ ರೂಪಾಯಿ ಬೆಳೆ ಬೆಳೆದು ಪುಡಿಗಾಸಿಗೆ ಅದನ್ನ ಮಾರುತ್ತಿರುವ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆ ಸೇರುವ ಟೊಮೆಟೊಗೆ ಸಿಗುತ್ತಿರುವ ದುಡ್ಡು, ಗಾಡಿ ಬಾಡಿಗೆಗು ಕೂಡ ಸಾಲುತ್ತಿಲ್ಲ ಅಂತಾ ಟೊಮೆಟೊ ಬೆಳೆಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಟೊಮೆಟೊಗೆ ಸೂಕ್ತ ಬೆಲೆ ನಿರ್ಧಾರ ಮಾಡುವಂತೆ ಆಗ್ರಹ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+