Get Updates
Get notified of breaking news, exclusive insights, and must-see stories!

Tomato Price: ಟೊಮೆಟೊ ಹಾರದ ಜೊತೆ ರಾಜ್ಯಸಭೆಗೆ ಸಂಸದನ ಎಂಟ್ರಿ!

ದೇಶದಲ್ಲಿ ಎಲ್ಲಿ ಕೇಳಿದರೂ ಬರೀ ಟೊಮೆಟೊ ಸುದ್ದಿ, ಬರೀ ಟೊಮೆಟೊ ಬಗ್ಗೆ ಮಾತು. ಬೆಲೆ ಬಿದ್ದಾಗ ರಸ್ತೆಗೆ ಬೀಳುವ ಟೊಮೆಟೊ ದಿಢೀರ್ ಉಪ್ಪರಿಗೆ ಮೇಲೆ ಕೂತಿದೆ. ಅದ್ರಲ್ಲೂ ಕೆಲ ಭಾಗಗಳಲ್ಲಿ ಸೇಬು ರೇಟ್‌ನ ಮೀರಿಸಿ ಟೊಮೆಟೊ ಸೇಲ್ ಆಗ್ತಿದೆ. ಆದರೆ ಇದೇ ವೇಳೆ ಸಂಸದರೊಬ್ಬರು ಟೊಮೆಟೊ ಹಾರ ಹಾಕಿಕೊಂಡು ರಾಜ್ಯಸಭೆಗೆ ಎಂಟ್ರಿ ಕೊಟ್ಟಿದ್ದರು. ಈ ಅವತಾರ ನೋಡಿ ಸದನದಲ್ಲಿ ಅಲ್ಲೋಲ, ಕಲ್ಲೋಲವೇ ಉಂಟಾಗಿತ್ತು.

ದಿಢೀರ್ ಟೊಮೆಟೊ ಬೆಲೆ ಡಬಲ್ ಸೆಂಚ್ಯುರಿ ಭಾರಿಸಿದ್ದೇ ಭಾರಿಸಿದ್ದು ದೇಶದಲ್ಲಿ ಆಕ್ರೋಶ ಮೊಳಗಿತ್ತು. ಅದರಲ್ಲೂ ಬೆಲೆ ಏರಿಕೆಯನ್ನೇ ಅಸ್ತ್ರ ಮಾಡಿಕೊಂಡು ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರಕ್ಕೆ ಚಳಿ ಬಿಡಿಸುತ್ತಿದ್ದಾರೆ. ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ರಾಜ್ಯಸಭೆಗೆ ಟೊಮೆಟೊ & ಶುಂಠಿಯ ಹಾರ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದರು. ಇದನ್ನ ಕಂಡ ತಕ್ಷಣ ಸದನದಲ್ಲಿ ತಿಕ್ಕಾಟವೂ ಜೊರಾಗಿತ್ತು. ಅದರಲ್ಲೂ ರಾಜ್ಯಸಭೆ ಸಭಾಧ್ಯಕ್ಷರು ಆಪ್ ಸಂಸದನ ಈ ಅವತಾರ ನೋಡಿ ಏನಂದ್ರು ಗೊತ್ತಾ? ಮುಂದೆ ಓದಿ.

Tomato and Ginger garland found in AAP MP neck at Rajya Sabha

ಟೊಮೆಟೊ ಹಾರ ನೋಡಿ ಬೇಸರ!

ಹೌದು, ಟೊಮೆಟೊ ನೋಡಿದರೆ ಫುಲ್ ಖುಷ್ ಆಗೋ ಜನರು ಇರುವಾಗ ಇವತ್ತು ಮಾತ್ರ ಟೊಮೆಟೊ ಬೇಸರ ತರಿಸಿದೆ. ಅದರಲ್ಲೂ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ರಾಜ್ಯಸಭೆಗೆ ಟೊಮೆಟೊ & ಶುಂಠಿಯ ಹಾರ ಹಾಕಿಕೊಂಡು ಬಂದಿದ್ದಕ್ಕೆ ಆಕ್ರೋಶವೂ ವ್ಯಕ್ತವಾಗಿದೆ. ಆಪ್ ಸಂಸದನ ವಿರುದ್ಧ ಸಭಾಧ್ಯಕ್ಷ ಜಗದೀಪ್‌ ಧನಕರ್‌ ಆಕ್ಷೇಪ ವ್ಯಕ್ತಡಿಸಿದ್ದು, ಇದರಿಂದ ಭಾರಿ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tomato and Ginger garland found in AAP MP neck at Rajya Sabha

ಇನ್ನು ರಾಜ್ಯಸಭೆಗೆ ಶುಂಟಿ ಮತ್ತು ಟೊಮೆಟೊ ಇದ್ದ ಹಾರ ಹಾಕಿಕೊಂಡ ಎಎಪಿ ಸಂಸದ ಎಂಟ್ರಿ ಕೊಟ್ಟ ಸಮಯ ಕೂಡ ಸಾಕಷ್ಟು ಗಮನ ಸೆಳೆಯಿತು. ರಾಜ್ಯಸಭೆಯಲ್ಲಿ ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲ ಭಾರಿ ಗದ್ದಲದ ನಡುವೆ ಟೊಮೆಟೊ ಹಾಗೂ ಶುಂಠಿಯ ಹಾರ ಹಾಕಿಕೊಂಡಿದ್ದ ಸಂಸದ ಸುಶೀಲ್ ಕುಮಾರ್‌ ಗುಪ್ತಾ ಸಿಕ್ಕಿಹಾಕಿಕೊಂಡಿದ್ದು ಹೇಗೆ? ಮುಂದೆ ಓದಿ.

ಗದ್ದಲದ ನಡುವೆ ಕಂಡಿದ್ದು ಟೊಮೆಟೊ!

ಇನ್ನು ಕಲಾಪದ ವೇಳೆ ಕ್ವಿಟ್‌ ಇಂಡಿಯಾ ಚಳವಳಿ ಉಲ್ಲೇಖಿಸಿದ ಜಗದೀಪ್ ಧನಕರ್‌ ಎರಡು ನಿಮಿಷ ಮೌನಾಚರಣೆ ಮಾಡಲು ಸೂಚಿಸಿದರು. ಇದಾದ ನಂತರ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು. ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ನೀವು ಕ್ವಿಟ್ ಇಂಡಿಯಾ ಚಳವಳಿ ಉಲ್ಲೇಖಿಸಿದ್ದೀರಿ. ನಾವು ಎರಡು ನಿಮಿಷ ಮೌನಾಚರಣೆ ಮಾಡಿದೆವು. ಆದರೆ ತುಷಾರ್ ಗಾಂಧಿಯನ್ನು ಇಂದು ಬಂಧಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಟಾಪಟಿ ನಡೆಯುವಾಗ ಸಂಸದ ಗುಪ್ತಾ ಅವರ ಕತ್ತಿನಲ್ಲಿದ್ದ ಟೊಮೆಟೊ ಹಾರ ಗಮನಿಸಿದ ಧನಕರ್‌ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Tomato and Ginger garland found in AAP MP neck at Rajya Sabha

ಖಡಕ್ ಎಚ್ಚರಿಕೆ ನೀಡಿದ ಸಭಾಧ್ಯಕ್ಷರು!

ಆಪ್ ಸಂಸದ ಗುಪ್ತಾ ಅವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಭಾಧ್ಯಕ್ಷ ಧನಕರ್‌ ಅವರು, 'ನಮ್ಮ ನಡವಳಿಕೆಗೆ ನಾವೇ ಗೆರೆ ಹಾಕಿಕೊಳ್ಳಬೇಕು. ಸುಶೀಲ್ ಗುಪ್ತಾ ಅವರು ಸಭೆಗೆ ಬಂದ ರೀತಿ ಸಭೆಯ ಅಧ್ಯಕ್ಷನಾಗಿ ನನಗೆ ಬೇಸರ ತರಿಸಿದೆ. ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ನಾಯರ ಜತೆ ಚರ್ಚೆ ಮಾಡುತ್ತೇನೆ' ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ನಂತರ ಮಧ್ಯಾಹ್ನ 2ಕ್ಕೆ ಕಲಾಪವನ್ನ ಮುಂದೂಡಿದ್ರು. ಆದರೆ ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆಮ್‌ ಆದ್ಮಿ ಪಾರ್ಟಿ, 'ಮೋದಿ ಹಣದುಬ್ಬರ ಜನರ ರಕ್ತ ಹೀರುತ್ತಿದೆ. ಮೋದಿ ಸರ್ಕಾರದ ಗಮನ ಸೆಳೆಯಲು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸಂಸದರು ಸದನಕ್ಕೆ ಆಗಮಿಸಿದರು' ಎಂದು ಬರೆದುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+