• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲವಾರು ರಾಜ್ಯಗಳಲ್ಲಿ ಹಿರಿಯರಿಗಾಗಿ ಉಚಿತ ಸಹಾಯವಾಣಿ ಎಲ್ಡರ್ ಲೈನ್

|
Google Oneindia Kannada News

ನವದೆಹಲಿ, ಮೇ 18: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿರಿಯರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ಸಾಮಾಜಿಕ ನ್ಯಾಯ ಸಚಿವಾಲಯವು ಎಲ್ಡರ್ ಲೈನ್ ಯೋಜನೆಯಡಿ ಪ್ರಮುಖ ರಾಜ್ಯಗಳಲ್ಲಿ ರಾಜ್ಯವಾರು ಕಾಲ್‌ಸೆಂಟರ್‌ಗಳನ್ನು ಪ್ರಾರಂಭಿಸಿದೆ.

ಈ ಸೌಲಭ್ಯವನ್ನು ಈಗಾಗಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳು ನಾಡು ಮತ್ತು ಕರ್ನಾಟಕದ 5 ಪ್ರಮುಖ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ತೆಲಂಗಾಣದಲ್ಲಿ, ಈ ಸೌಲಭ್ಯವು ಒಂದು ವರ್ಷದ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ. 2021 ರ ಮೇ ಅಂತ್ಯದ ವೇಳೆಗೆ ಎಲ್ಲಾ ರಾಜ್ಯಗಳಲ್ಲಿಯೂ ಅವುಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.

ಉಚಿತ ಸಹಾಯವಾಣಿ ಸಂಖ್ಯೆ 14567 ಮೂಲಕ ಈ ಸಹಾಯ ಕೇಂದ್ರ (ಕಾಲ್ ಸೆಂಟರ್) ಗಳಿಗೆ ಕರೆ ಮಾಡಬಹುದು. ಎಲ್ಲಾ ಹಿರಿಯರಿಗೆ ಈ ಸೌಲಭ್ಯವನ್ನು ಬಳಸಲು ಸೂಚಿಸಬಹುದು. ಎಲ್ಡರ್ ಲೈನ್ ಟಾಟಾ ಟ್ರಸ್ಟ್ ಮತ್ತು ಎನ್ ಎಸ್ ಇ ಫೌಂಡೇಶನ್ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನವು ಜನವರಿ 16ರಿಂದ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1ರಿಂದ ಎರಡನೇ ಹಂತದ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದು, ಏಪ್ರಿಲ್ 2ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ.

ಮೇ 1ರಿಂದ ವಿವಿಧೆಡೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭಗೊಂಡರೂ ಸಮರ್ಪಕವಾಗಿ ಜಾರಿಗೊಳಿಸಲು ಆಗಿಲ್ಲ. ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ 2ನೇ ಡೋಸ್ ನೀಡಲಾಗುತ್ತಿದೆ.

English summary
Toll Free Helpline for elderly persons ELDERLINE (14567) becomes operational in several states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X