ಚಿತ್ರಸುದ್ದಿ: ಅಮೇಥಿಯಲ್ಲಿ ರಾಹುಲ್ ಗೆ ಹಿತ ಸ್ಪರ್ಶ
ಬೆಂಗಳೂರು,
ಫೆ.20: ತೆಲಂಗಾಣ ವಿಷಯವಾಗಿ ರಾಜ್ಯಸಭೆಯಲ್ಲಿ ಗದ್ದಲ ಮುಂದುವರೆದಿದೆ. ತೆಲಂಗಾಣದಲ್ಲಿ ಬಂದ್ ನಿಂದಾಗಿ ಬಿಕೋ ಎನ್ನುವ ರಸ್ತೆಗಳು, ಬಸ್ ನಿಲ್ದಾನಗಳು, ಜಮ್ಮು ಅಸೆಂಬ್ಲಿಯಲ್ಲೂ ಗದ್ದಲವಾದ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ. id="toptextpromo"> id='are-slot-1' class='oiad oi-axt oiadv'>ಸ್ವಕ್ಷೇತ್ರ
ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಚಾರ, ಮುಂಬೈನಲ್ಲಿ ಆಮ್ ಆದ್ಮಿ ಪಕ್ಷದವರ ಜತೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಓಡಾಟ, ವಾರಣಾಸಿಯಲ್ಲಿ ಮಹಾಶಿವರಾತ್ರಿ ಆಚರಣೆಗೆ ನೂರಾರು ಜನ ಸಾಧುಗಳು ಆಗಮನ, ವಾರಣಾಸಿ ಸಮೀಪದ ಸಾರನಾಥದಲ್ಲಿ ಬೌದ್ಧ ಬಿಕ್ಷುಗಳ ಬೀಡು, ಅಫ್ಘಾನಿಸ್ತಾನದಲ್ಲಿ ಕೊರೆಯುವ ಚಳಿಯಲ್ಲಿ ಭಿಕ್ಷೆ ಬೇಡುವ ಮಹಿಳೆ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ... id='are-slot-2' class='oiad oi-axt oiadv'>
ಅಮೇಥಿಯಲ್ಲಿ ರಾಹುಲ್ ಗೆ ಹಿತ ಸ್ಪರ್ಶ
ಉತ್ತರಪ್ರದೇಶದ ಸ್ವಕ್ಷೇತ್ರ ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವೃದ್ಧೆಯೊಬ್ಬರ ಹಿತ ಸ್ಪರ್ಶದಿಂದ ಪುಳಕಿತರಾಗಿದ್ದಾರೆ. ಅಮೇಥಿಯ ಗೌರಿ ಗಂಜ್ ನಲ್ಲಿ ರೈಲ್ ನೀರ್ ಪ್ಲಾಂಟ್ ಉದ್ಘಾಟನೆಗೆ ಬಂದಿದ್ದ ರಾಹುಲ್ ಅವರು ವೃದ್ಧೆಯ ಬಳಿ ನಿಂತು ಆಕೆಯ ಸಮಸ್ಯೆ ಆಲಿಸಿದರು.

ರಾಯಲಸೀಮೆಯಲ್ಲಿ ಬಂದ್ ಸಮಯದ ಚಿತ್ರ
ಹೈದರಾಬಾದ್ : ಚಿತ್ತೂರಿನ ಹಳೆ ಬಸ್ ನಿಲ್ದಾಣ ಬುಧವಾರ ಬಿಕೋ ಎನ್ನುತ್ತಿತ್ತು. ತೆಲಂಗಾಣ ರಚನೆ ವಿರೋಧಿಸಿ ವೈಎಸ್ಸಾರ್ ಕಾಂಗ್ರೆಸ್ ಹಾಗೂ ಟಿಡಿಪಿ ಕರೆ ನೀಡಿದ್ದ ಬಂದ್ ಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಆಮ್ ಆದ್ಮಿ ಪಕ್ಷದವರ ಜತೆ ಮೇಧಾ ಪಾಟ್ಕರ್
ಮುಂಬೈನಲ್ಲಿ ಆಮ್ ಆದ್ಮಿ ಪಕ್ಷದವರ ಜತೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಓಡಾಟ. ಯೋಗೇಂದ್ರ ಯಾದವ್, ಅಂಜಲಿ ದಮಾನಿಯಾ ಅವರ ಸಾಥ್. PTI Photo

ಬಜೆಟ್ ನಂತರ ಕಾರುಗಳ ಬೆಲೆ ಏನಾಗಲಿದೆ?
ಕೇಂದ್ರ ದಬಜೆಟ್ ನಂತರ ಕಾರುಗಳ ಬೆಲೆ ಏನಾಗಲಿದೆ? ಯಾವ ಕಾರಿನ ಬೆಲೆ ಎಷ್ಟು ಇಳಿಕೆಯಾಗಿದೆ ಪಿಟಿಐ ಗ್ರಾಫಿಕ್ಸ್ ನೋಡಿ

ಜಮ್ಮು ಅಸೆಂಬ್ಲಿಯಲ್ಲೂ ಗದ್ದಲ
ಜಮ್ಮು ಅಸೆಂಬ್ಲಿಯಲ್ಲೂ ಗದ್ದಲ: ಪಿಡಿಪಿ ಶಾಸಕರು ಬುಧವಾರ ಪ್ರತಿಭಟನೆ ನಡೆಸಿದ್ದು ಹೀಗೆ

ಕೊರೆಯುವ ಚಳಿಯಲ್ಲಿ ಭಿಕ್ಷೆ ಬೇಡುವ ಮಹಿಳೆ
ಅಫ್ಘಾನಿಸ್ತಾನದ ಕಾಬೂಲಿನಲ್ಲಿ ಕೊರೆಯುವ ಚಳಿಯಲ್ಲಿ ಭಿಕ್ಷೆ ಬೇಡುತ್ತಿರುವ ಮಹಿಳೆ. (Xinhua/Farid/IANS)

ಸಾರನಾಥದಲ್ಲಿ ಬೌದ್ಧ ಬಿಕ್ಷುಗಳು
ವಾರಣಾಸಿ ಸಮೀಪದ ಸಾರನಾಥದಲ್ಲಿ ಬೌದ್ಧ ಬಿಕ್ಷುಗಳು ಇತ್ತೀಚೆಗೆ ಕಾಣಿಸಿಕೊಂಡಿದ್ದು ಹೀಗೆ (Photo: IANS)

ಮಹಾ ಶಿವರಾತ್ರಿಗೆ ತಯಾರಾದ ಸಾಧುಗಳು
ವಾರಣಾಸಿಯಲ್ಲಿ ಮಹಾಶಿವರಾತ್ರಿ ಆಚರಣೆಗೆ ನೂರಾರು ಜನ ಸಾಧುಗಳು ಆಗಮನ (Photo: IANS)


Click it and Unblock the Notifications
