ವಿವಾದಿತ ಕೂಡಂಕುಳಂ ಬಳಿ ನಿಗೂಢ ಸ್ಫೋಟ

ಕೂಡಂಕುಳಂ(ತಮಿಳುನಾಡು), ನ.27: ವಿವಾದಿತ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದಿಂದ ಕೆಲವೇ ಕಿ.ಮೀ.ಗಳಷ್ಟು ದೂರವಿರುವ ಇಡಿಂಥಕರೈ ಗ್ರಾಮದ ಸುನಾಮಿ ಕಾಲೋನಿಯಲ್ಲಿ ಕಳೆದ ರಾತ್ರಿ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದು, ಮನೆಯೊಂದರಲ್ಲಿ ನಾಡಬಾಂಬ್ ತಯಾರಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸ್ಫೋಟದಿಂದಾಗಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಕಳೆದ ರಾತ್ರಿ ಸಮುದ್ರ ತೀರದ ಮರಳು ಕುರಿತಂತೆ ಉಂಟಾದ ಗದ್ದಲ ನೋಡಲು ಎರಡೂ ಮನೆಯ ಹಿರಿಯರು ಹೊರ ಬಂದ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಹೆಣ್ಣುಮಕ್ಕಳು ಸೇರಿದಂತೆ 6 ಮಂದಿ ಬಲಿಯಾಗಿದ್ದಾರೆ.

ಈ ಭಾಗದ ಬಹುತೇಕ ಗ್ರಾಮಗಳಲ್ಲಿ ಅತ್ಯಂತ ಅಪಾಯಕಾರಿಯಾದ ನಾಡಬಾಂಬ್‌ಗಳನ್ನು ತಯಾರಿಸುವ ಕಸುಬು ಹಿಂದಿನಿಂದಲೂ ರೂಢಿಗತವಾಗಿದೆ. ಸಾಮಾನ್ಯವಾಗಿ ಎರಡು ಗುಂಪುಗಳ ನಡುವೆ ಸಣ್ಣಪುಟ್ಟ ಜಗಳ ನಡೆದಾಗ ಇಂತಹ ಬಾಂಬ್‌ಗಳನ್ನು ಎಸೆದು ಅನಾಹುತ ಸೃಷ್ಟಿಸುವ ಘಟನೆಗಳು ನಡೆಯುತ್ತಿದ್ದು, ನಿನ್ನೆಯೂ ಇಂಥದ್ದೇ ಘಟನೆ ಜರುಗಿರಬಹುದು ಎಂದು ಶಂಕಿಸಲಾಗಿದೆ.

ಕೂಡಂಕುಳಂ ಅಣುಸ್ಥಾವರ ವಿರೋಧಿಸಿ ನಡೆದ ಬೃಹತ್ ಹೋರಾಟದಲ್ಲಿ ಇಡಿಂಥಕರೈ ಗ್ರಾಮದ ಪಾತ್ರ ಹೆಚ್ಚಿತ್ತು. ಇಡೀ ಊರಿಗೆ ಊರೇ ಎರಡು ವರ್ಷಗಳಿಂದ ಉಗ್ರ ಪ್ರತಿಭಟನೆ ನಡೆಸಿತ್ತು. ಇದೀಗ ಆ ಗ್ರಾಮದಲ್ಲೇ ನಾಡಬಾಂಬ್‌ಗಳ ಸ್ಫೋಟ ಸಂಭವಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಉಳಿದಂತೆ ಚಿತ್ರಗಳಲ್ಲಿ ಇನ್ನಷ್ಟು ಸುದ್ದಿಗಳನ್ನು ಓದಿ...

ಬಲಿಯಾದವರು ಯಾರು?

ಬಲಿಯಾದವರು ಯಾರು?

ಸ್ಫೋಟದಲ್ಲಿ ಬಲಿಯಾದವರು ಕೂಡಂಕುಳಂ ಅಣುಸ್ಥಾವರ ವಿರೋಧಿಸಿ ಪ್ರತಿಭಟನೆ ನಡೆಸಿದವರ ಸೇರಿದ್ದು, ಅವರನ್ನು ಕ್ರಿಮಿನಲ್ ಗಳು ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಣು ಸ್ಥಾವರ ಸಮೀಪದಲ್ಲಿದ್ದರು ಇಡಿಂಥಕರೈ ಗ್ರಾಮದಲ್ಲಿ ನಾಡಬಾಂಬ್ ತಯಾರಿಕೆ ನಿಲ್ಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ

ಪಣಜಿ ಚಿತ್ರೋತ್ಸವ

ಪಣಜಿ ಚಿತ್ರೋತ್ಸವ

ಪಣಜಿಯಲ್ಲಿನ 44ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI-2013) ಸಮಾರಂಭದಲ್ಲಿ ಭಾಗವಹಿಸಿರುವ ಮರಾಠಿ ನಿರ್ದೇಶಕಿ ಸುಮಿತ್ರಾ ಭಾವೆ, ಸುನಿಲ್ ಸುಖ್ತಾಂಕರ್, ಕನ್ನಡ ನಿರ್ದೇಶಕ ಪಿ.ಶೇಷಾದ್ರಿ, ಬೆಂಗಾಳಿ ನಟಿ ಪಯೋಲಿ ದಾಮ್

ಮುಂಬೈನಲ್ಲಿ ಜಗನ್

ಮುಂಬೈನಲ್ಲಿ ಜಗನ್

ಮುಂಬೈ ಪ್ರವಾಸದಲ್ಲಿದ್ದಾಗ ಶಿವಸೇನೆ ಮುಖಂಡರನ್ನು ಭೇಟಿ ಮಾಡಿದರು. ಮಾತೋಶ್ರಿ ನಿವಾಸದಲ್ಲಿ ಉದ್ಧವ್ ಠಾಕ್ರೆ ಜತೆ ವೈಎಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ

ನೆಲ್ಸನ್ ಮಂಡೇಲಾ ಚಿತ್ರ

ನೆಲ್ಸನ್ ಮಂಡೇಲಾ ಚಿತ್ರ

ನೆಲ್ಸನ್ ಮಂಡೇಲಾ ಪಾತ್ರದಲ್ಲಿ ಇದ್ರಿಸ್ ಎಲ್ಬಾ ಹಾಗೂ ನಯೋಮಿ ಹ್ಯಾರಿಸ್ ವಿನ್ನಿ ಮಂಡೇಲಾ ಪಾತ್ರದಲ್ಲಿ Mandela: Long walk to Freedom ಚಿತ್ರದ ದೃಶ್ಯ

ನ್ಯೂಜೆರ್ಸಿನಿಂದ

ನ್ಯೂಜೆರ್ಸಿನಿಂದ

ಮೋನಿಕಾ ಗಿಲ್ ಅವರು ಮಿಸ್ ಇಂಡಿಯಾ ಯುಎಸ್ ಎ 2013 ಕಿರೀಟ ಧರಿಸಿದ್ದಾರೆ. ಎಡ ಭಾಗದಲ್ಲಿ 2012ರ ವಿಜೇತೆ ಪ್ರಿಯನ್ ಭಾರ್ಗವ ಹಾಗೂ ಮತ್ತೊಬ್ಬ ಸ್ಪರ್ಧಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+