ಚಿತ್ರಸುದ್ದಿ : ನಮ್ಮ ಮೆಟ್ರೋದಲ್ಲಿ 'ನೋ ಪ್ಯಾಂಟ್ಸ್' ರೈಡ್
ಬೆಂಗಳೂರು, ಜ.13: ಫ್ಯಾಷನ್ ರಾಜಧಾನಿ ಪಟ್ಟಕ್ಕಾಗಿ ನ್ಯೂಯಾರ್ಕ್ ಜತೆ ಪೈಪೋಟಿ ನಡೆಸಿರುವ ಉದ್ಯಾನ ನಗರಿ ಬೆಂಗಳೂರು ಈಗ ಅಲ್ಲಿನ ಸಂಸ್ಕೃತಿ, ಆಚರಣೆಯನ್ನು ಅನುಕರಣೆ ಮಾಡತೊಡಗಿದೆ. ಬೆಂಗಳೂರು ಕಾಸ್ಮೋಪಾಲಿಟನ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ನಗರ, ಇಲ್ಲಿನ ಪ್ರತಿಭಟನೆಗಳು, ಪ್ರದರ್ಶನಗಳು ಎಲ್ಲವೂ ವಿಶೇಷ, ವಿಶಿಷ್ಟ ಎನ್ನಬಹುದು.
ನ್ಯೂಯಾರ್ಕ್ ನಲ್ಲಿ ನಡೆದ ಸ್ಲಟ್ ವಾಕ್ ಮುಂದೆ ಮುಂಬೈಗೆ ಬಂದು ನಂತರ ಬೆಂಗಳೂರಿನಲ್ಲೂ ಸ್ಲಟ್ ವಾಕ್ ನಡೆದಾಡಿತ್ತು. ಪೆಟಾ ಪ್ರಾಣಿ ಸಂರಕ್ಷಕರು ವಿನೂತನವಾಗಿ ಮೆರವಣಿಗೆ ನಡೆಸುತ್ತಾರೆ, ಸೃಜನಶೀಲ ಪ್ರತಿಭಟನೆಗಳ ಮೂಲಕ ಖ್ಯಾತರಾಗಿರುವ ವಾಟಾಳ್ ನಾಗರಾಜ್ ಅವರಿಗೂ ಈ ಎಲ್ಲಾ ಪ್ರತಿಭಟನೆ, ಪ್ರದರ್ಶನಗಳು ಹೊಸ ದಾರಿ ತೋರಿಸಿಕೊಡಬಹುದೇನೋ!
'ನೋ ಪ್ಯಾಂಟ್ಸ್ ಸಬ್ ವೇ ಡೇ' ಆರಂಭವಾದುದ್ದು ನ್ಯೂಯಾರ್ಕ್‌ನಲ್ಲಿ. ಅಲ್ಲಿನ ಪುಂಡು ಹುಡುಗರ ತಂಡವೊಂದು ಸಬ್ ವೇ ರೈಲಿನಲ್ಲಿ ಪ್ಯಾಂಟಿಲ್ಲದೇ ಕಾಣಿಸಿಕೊಂಡು ಪ್ರಯಾಣಿಕರನ್ನು ಕಕ್ಕಾಬಿಕ್ಕಿಯಾಗಿಸಿತ್ತು. ತಮಗೆ ಪರಸ್ಪರ ಪರಿಚಯವೇ ಇಲ್ಲ ಎಂಬಂತೆ ಈ ತಂಡದ ಸದಸ್ಯರು ನಟಿಸಿದ್ದರು. ನಂತರ ಪ್ರತಿ ವರ್ಷ ಜನವರಿಯ ಮೊದಲ ವಾರ ಜಗತ್ತಿನ ಹಲವು ನಗರಗಳಲ್ಲಿ ಈ ಆಚರಣೆ ಸಾಮಾನ್ಯವಾಯಿತು. ಈ ವರ್ಷ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ. 2012 ನಮ್ಮ ಮೆಟೋದಲ್ಲಿ 'ನೋ ಪ್ಯಾಂಟ್ಸ್' ರೈಡ್ ಆಚರಣೆ ದೃಶ್ಯಾವಳಿ
ಟ್ವಿಟರ್ ಮತ್ತು ಫೇಸ್ ಬುಕ್ ಮೂಲಕ ಯುವಕ. ಯುವತಿಯರಿಗೆ ಈ ಆಚರಣೆ ಬಗ್ಗೆ ಮಾಹಿತಿ ನೀಡಲಾಗಿದೆ.ಬಾಕ್ಸರ್ ಚಡ್ಡಿಗಳಲ್ಲಿ ಕಾಣಿಸಿಕೊಂಡ ಯುವಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಏರಿ ಪ್ರಯಾಣಿಸಿದರು.ಅಂದಹಾಗೆ ಇದು ಇದು ನೋ ಪ್ಯಾಂಟ್ಸ್ ಡೇ ಅಲ್ಲ. ಮೇ ತಿಂಗಳಿನಲ್ಲಿ ನೋ ಪ್ಯಾಂಟ್ಸ್ ಡೇ ಆಚರಿಸಲಾಗುತ್ತದೆ ಇದು ನೋ ಪ್ಯಾಂಟ್ಸ್ ಸಬ್ ವೇ ರೈಡ್.

ನಮ್ಮ ಮೆಟ್ರೋದಲ್ಲಿ 'ನೋ ಪ್ಯಾಂಟ್ಸ್' ರೈಡ್ ಆಚರಣೆ
ಇದು ನೋ ಪ್ಯಾಂಟ್ಸ್ ಡೇ ಅಲ್ಲ. ಮೇ ತಿಂಗಳಿನಲ್ಲಿ ನೋ ಪ್ಯಾಂಟ್ಸ್ ಡೇ ಆಚರಿಸಲಾಗುತ್ತದೆ ಇದು ನೋ ಪ್ಯಾಂಟ್ಸ್ ಸಬ್ ವೇ ರೈಡ್

ಕೋಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದ ಸ್ಮರಣೆ
ಕೋಲ್ಕತ್ತಾದಲ್ಲಿ ಜ.12ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ರಾಮಕೃಷ್ಣ ಮಿಷನ್ ಶಾಲೆ ಇನ್ನಿತರ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಸಲಾಯಿತು.

ಸಲ್ಮಾನ್ ಬೇಕಾ ಸಲ್ಮಾನ್ ತಗೋ ತಿನ್ನು
ಇಂದೋರ್: ಜೈಹೋ ಚಿತ್ರದ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ಆಗಮಿಸಿದ ಸಲ್ಮಾನ್ ಖಾನ್ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಜೈಪುರದಲ್ಲಿ ಹೇಮಮಾಲಿನಿ ನೃತ್ಯ ಪ್ರದರ್ಶನ
ಬಾಲಿವುಡ್ ನಟಿ ಹೇಮ ಮಾಲಿನಿ ಹಾಗೂ ಅವರ ತಂಡದಿಂದ ನೃತ್ಯ ಪ್ರದರ್ಶನ

ಅಮೃತಸರದಲ್ಲಿ ಲೋಹ್ರಿ ಹಬ್ಬದ ಆಚರಣೆ
ಅಮೃತಸರ್ : ಕಾಲೇಜು ವಿದ್ಯಾರ್ಥಿನಿಯರು ಸಾಂಪ್ರಾದಾಯಿಕ ಪಂಜಾಬಿ ಉಡುಗೆ ತೊಟ್ಟು ಲೊಹ್ರಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.












Click it and Unblock the Notifications