ಚಿತ್ರಗಳಲ್ಲಿ: ಭೂಕಂಪದಿಂದ ಹೊಸ ದ್ವೀಪ ಸೃಷ್ಟಿ
ಬೆಂಗಳೂರು, ಸೆ.25 : ಪಾಕಿಸ್ತಾನದ ನೈರುತ್ಯ ಭಾಗದಲ್ಲಿ ಮಂಗಳವಾರ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ 208ಕ್ಕೂ ಮಂದಿ ಸಾವಿಗೀಡಾಗಿದ್ದಾರೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಅನೇಕ ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಇದೆ. ಈ ನಡುವೆ ಭೂಕಂಪದಿಂದಾಗಿ ಹೊಸ ದ್ವೀಪ ಸೃಷ್ಟಿಯಾಗಿದ್ದು ಗ್ವಾದರ್ ಕರಾವಳಿ ಎಂದು ಹೆಸರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
'ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯ ಅವರನ್ ಪ್ರದೇಶದಲ್ಲಿ 45 ಜನರು ಅಸುನೀಗಿದ್ದಾರೆ. ಹಲವು ಮನೆಗಳು, ಅಂಗಡಿಗಳು ಧ್ವಂಸಗೊಂಡಿವೆ' ಎಂದು ಭೂಕಂಪನ ಪುನರ್ ನಿರ್ಮಾಣ ಮತ್ತು ಪುನರ್ ವಸತಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರಾಚಿ, ಹೈದರಾಬಾದ್, ಲರ್ಕಾನಾ ಮತ್ತು ಸಿಂಧ್ ಪ್ರಾಂತ್ಯದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಭೂಕಂಪನದ ಅನುಭವವಾಗಿದೆ. ಬಲೂಚಿಸ್ತಾನದಿಂದ ಸಾಕಷ್ಟು ದೂರದಲ್ಲಿರುವ ಲಾಹೋರ್, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಗರಗಳಲ್ಲೂ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ. ಉಳಿದಂತೆ, ಶ್ರೀನಗರ, ವಿಶ್ವಸಂಸ್ಥೆ, ಹೈದರಾಬಾದ್, ಪುರುಲಿಯಾ, ನೈರೋಬಿ ಸೇರಿದಂತೆ ಉಳಿದೆಡೆಗಳಿಂದ ಚಿತ್ರಗಳನ್ನು ನೋಡಿ...

ಕರಾಚಿಯಲ್ಲಿ
ಬಲೂಚಿಸ್ತಾನದ ಭೂಕಂಪದಿಂದಾಗಿ ಕಚೇರಿಯಲ್ಲಿದ್ದ ಜನರು ಹೊರಕ್ಕೆ ಓಡಿ ಬಂದ ಗಾಬರಿಗೊಂಡು ನಿಂತ ದೃಶ್ಯ

ಬಿಜಾಪುರದಲ್ಲಿ ರಾಷ್ಟ್ರಪತಿ
ಬಿಜಾಪುರ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಲ್ಲಿನ ಸೈನಿಕ ಶಾಲೆಯ ಚಿನ್ನದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಿರಿಯ ಶಿಕ್ಷಕ ಜಿ.ಡಿ ಕಾಳೆ ಅವರನ್ನು ಸನ್ಮಾನಿಸಿದರು.

ಚೆನ್ನೈನಲ್ಲಿ
ಗೊಂದಲಗಳಲ್ಲೆ ಮುಕ್ತಾಯವಾದ ಭಾರತೀಯ ಸಿನಿಮಾ 100 ಕಾರ್ಯಕ್ರಮದ ಕೊನೆ ಹಂತದಲ್ಲಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸನ್ಮಾನ ಮಾಡಿದರು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಗೂ ರಾಜ್ಯಪಾಲ ರೋಶಯ್ಯ ಅವರನ್ನು ಚಿತ್ರದಲ್ಲಿ ಕಾಣಬಹುದು.

ಪುರೂಲಿಯಾ
ಪುರೂಲಿಯಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಿಲ್ಲೆಯ ಬಾಗ್ಮುಡಿ ಭಾಗದಲ್ಲಿ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡ ದೃಶ್ಯ

ವಿಶ್ವಸಂಸ್ಥೆಯಲ್ಲಿ ಒಬಾಮಾ
ವಿಶ್ವಸಂಸ್ಥೆಯ 68ನೇ ಪ್ರಧಾನ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅಮೆರಿಕಾಧ್ಯಕ್ಷ ಒಬಾಮಾ ಅವರು ಸಿರಿಯಾದಲ್ಲಿ ಕೆಮಿಕಲ್ ಅಸ್ತ್ರ ಬಳಕೆಯನ್ನು ಖಂಡಿಸಿ, ಮತ್ತೆ ಬಳಸದಂತೆ ನಿಷೇಧ ಹೇರಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾಬ್ ಕಿ ಮೂನ್ ಗೆ ಮನವಿ ಮಾಡಿದರು.

ಶ್ರೀನಗರದಿಂದ
ಶ್ರೀನಗರ: ಕಾಶ್ಮೀರದ ಸಾಂಪ್ರದಾಯಿಕ ಚಹಾ ಕಿಂಡಿ ಸಮಾವಾರ್ ಬುತ್ತಿಯಲ್ಲಿಟ್ಟುಕೊಂಡು ಹೊತ್ತು ತಿರುಗುತ್ತಿರುವ ಮಹಿಳೆ












Click it and Unblock the Notifications