ಚಿತ್ರಗಳಲ್ಲಿ: ಭಾರತೀಯರಿಗೆ ಸಿಂಗಪುರವೇ ಇಷ್ಟವಂತೆ
ಬೆಂಗಳೂರು, ಸೆ.12: ಭಾರತೀಯರಿಗೆ ಮುಂಬೈಗಿಂತ ಸಿಂಗಪುರವೇ ಇಷ್ಟವಂತೆ. ಇವೆರಡು ನಗರಗಳನ್ನು ಬಿಟ್ಟರೆ ನ್ಯೂಯಾರ್ಕ್, ಲಂಡನ್ ಓಕೆ ಎನ್ನುತ್ತಾರೆ ಎಂದು ಇತ್ತೀಚಿನ ಸಮೀಕ್ಷೆವೊಂದು ಹೇಳಿದೆ.
ಪ್ರತಿ ನಗರದ ಹವಾಮಾನ, ಜನಜೀವನ ಗುಣಮಟ್ಟ, ಉದ್ಯಮಕ್ಕೆ ಅವಕಾಶ, ನಗರಕ್ಕೆ ಬಂದು ಹೋಗುವ ಜನರ ಸರಾಸತಿ ಆಧಾರದ ಮೇಲೆ ನಡೆಸಲಾದ ಸಮೀಕ್ಷೆ ಪ್ರಕಾರ ಶೇ 83 ರಷ್ಟು ಭಾರತೀಯರು ಸಿಂಗಪುರ ಎಲ್ಲಾ ರೀತಿಯಿಂದಲೂ ಬೆಸ್ಟ್ ಎಂದಿದ್ದಾರಂತೆ.
ಎರಡನೇ ಸ್ಥಾನದಲ್ಲಿರುವ ಮುಂಬೈಗೆ ಶೇ 80ರಷ್ಟು ಜನ ಓಕೆ ಎಂದಿದ್ದಾರೆ. ವಿಶ್ವದ ಎಲ್ಲಾ ನಗರಗಳ ಪೈಕಿ ಜ್ಯೂರಿಚ್ ಗೆ ಶೇ 30 ರಷ್ಟು ಮತ ಬಿದ್ದಿದೆ. ಆದರೆ, ಭಾರತದ ಬೇರೆ ಯಾವುದೇ ನಗರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಪೂರ್ಣ ಪಟ್ಟಿ ಹಾಗೂ ವಿಶ್ವದ ಟಾಪ್ ನಗರಗಳ ಪಟ್ಟಿಯನ್ನು ಚಿತ್ರದಲ್ಲಿ ನೋಡಿ
ಉಳಿದಂತೆ ಇಂದಿನ ಚಿತ್ರಗಳಲ್ಲಿ 9/11 ದಾಳಿಯಲ್ಲಿನ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡಿರುವ ಜರ್ಮನಿ, ರೈಲು ಅಪಘಾತ, ಬಾಬಾ ರಾಮದೇವ್ ಜತೆ ನರೇಂದ್ರಮೋದಿ, ಮುಝಾಫರ್ ನಗರದ ಸದ್ಯದ ಚಿತ್ರ, ಬಿಗ್ ಬಾಸ್ 7 ಸಲ್ಮಾನ್ ಡ್ಯಾನ್ಸ್ ಮುಂತಾದ ಚಿತ್ರಗಳಿವೆ... ಚಿತ್ರಗಳು: ಪಿಟಿಐ

ವಿಶ್ವದ ಟಾಪ್ ನಗರಗಳ ಪಟ್ಟಿ
ಭಾರತೀಯರಿಗೆ ಮುಂಬೈಗಿಂತ ಸಿಂಗಪುರವೇ ಇಷ್ಟವಂತೆ. ಇವೆರಡು ನಗರಗಳನ್ನು ಬಿಟ್ಟರೆ ನ್ಯೂಯಾರ್ಕ್, ಲಂಡನ್ ಓಕೆ ಎನ್ನುತ್ತಾರೆ ಎಂದು ಇತ್ತೀಚಿನ ಸಮೀಕ್ಷೆವೊಂದು ಹೇಳಿದೆ.

11 ದಾಳಿಯಲ್ಲಿನ ಮೃತರಿಗೆ ಶ್ರದ್ಧಾಂಜಲಿ
ವಾಷಿಂಗ್ಟನ್: ಅಧ್ಯಕ್ಷ ಬರಾಕ್ ಒಬಾಮಾ, ಪ್ರಥಮ ಮಹಿಳೆ ಮಿಚೆಲ್ ಒಬಾಮಾ, ಉಪಾಧ್ಯಕ್ಷ ಜೋ ಬಿಡೆನ್ ಹಾಗೂ ಜಿಲ್ ಬಿಡೆನ್ ಅವರು ಶ್ವೇತ ಭವನದ ದಕ್ಷಿಣಭಾಗದ ಹುಲ್ಲುಹಾಸಿನ ಮೇಲೆ ನಿಂತು 9/11 ದಾಳಿಯಲ್ಲಿ 12 ನೇ ವರ್ಷದ ಕಹಿ ನೆನಪನ್ನು ಸ್ಮರಿಸಿದರು.

ಪೆಂಟಗಾನ್ ಬಳಿ
ವಾಷಿಂಗ್ಟನ್: ಅಧ್ಯಕ್ಷ ಬರಾಕ್ ಒಬಾಮಾ ಅವರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಜಲಂಧರ್ ಬಳಿ
ಜಲಂಧರ್ : ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಿಂದಾಗಿ ರೈಲು ಹಾಗೂ ಕಾರು ಡಿಕ್ಕಿ ಹೊಡೆದಿದೆ. ಪೊಲೀಸರು ಪರಿಶೀಲಿನೆಯಲ್ಲಿ ತೊಡಗಿದ್ದಾರೆ.

ಗಾಂಧಿನಗರದಲ್ಲಿ ಬಾಬಾ
ಗುಜರಾತಿನ ಗಾಂಧಿನಗರಕ್ಕೆ ಆಗಮಿಸಿದ್ದ ಯೋಗಗುರು ಬಾಬಾ ರಾಮದೇವ್ ಜತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು.

ಸಿರಿಯಾ ಸಂತ್ರಸ್ತರು
ಸಿರಿಯಾದಲ್ಲಿ ಯುದ್ಧ ಭೀತಿ ಎದುರಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ವಿವಿಧ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಬುಧವಾರ 101 ವಲಸಿಗರು ಜರ್ಮನಿಯ ಹಾನ್ನೊವರ್ ಗೆ ಕಾಲಿಟ್ಟಿದ್ದಾರೆ. ಸುಮಾರು 5000 ನಿರಾಶ್ರಿತರಿಗೆ ಜರ್ಮನಿ ಆಶ್ರಮ ನೀಡುತ್ತಿದೆ.

ಮುಝಾಫರ್ ನಗರ
ಮುಜಾಫರ್ ನಗರದ ಕುಡ್ಬಾ ಗ್ರಾಮದಲ್ಲಿ ಶಾಂತಿ ಕಾಯುತ್ತಿರುವ ಭದ್ರತಾ ಸಿಬ್ಬಂದಿ

ಬಿಗ್ ಬಾಸ್ ಸಲ್ಮಾನ್
ಭಾರಿ ಕುತೂಹಲ ಕೆರಳಿಸಿರುವ ಬಿಗ್ ಬಾಸ್ ನ 7ನೇ ಆವೃತ್ತಿಯ ಪ್ರಚಾರ ಕಾರ್ಯದಲ್ಲಿ ಸಲ್ಮಾನ್ ಖಾನ್ ನಿರತರಾಗಿದ್ದಾರೆ.

ಇಂದಿರಾಗಾಂಧಿ ಶಾಂತಿ ಪುರಸ್ಕಾರ
ರಿಪಬ್ಲಿಕ್ ಆಫ್ ಲಿಬೆರಿಯಾದ ಅಧ್ಯಕ್ಷೆ ಎಲ್ಲೆನ್ ಜಾನ್ಸನ್ ಸರ್ ಲೀಫ್ ಅವರಿಗೆ ಇಂದಿರಾಗಾಂಧಿ ಶಾಂತಿ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೀಡಿ ಗೌರವಿಸಿದ್ದಾರೆ. ಗುರುವಾರ(ಸೆ.12) ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಂಡಿದ್ದರು.












Click it and Unblock the Notifications