ಬಂಡಾಯದ ಬಿರುಗಾಳಿಯಿಂದ TMC ಚಿದ್ರ; 20 ಎಂಪಿಗಳಿಂದ ಅಚ್ಚರಿ ನಿರ್ಧಾರ, ಮಮತಾ ಬ್ಯಾನರ್ಜಿಗೆ ಭಾರೀ ಆಘಾತ
ನವದೆಹಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ ತಡ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದಿದಿ)ಅವರಿಗೆ ಏಟಿನ ಮೇಲೆ ಏಟು ಬೀಳುತ್ತಿವೆ. ಇದೀಗ ಟಿಎಂಸಿಯ ರೆಬಲ್ ಸಂಸದರ ಬೃಹತ್ ಗುಂಪು ಎನ್‌ಡಿಗೆ ಸೇರ್ಪಡೆಯಾಗಲು ನಿರ್ಧರಿಸುವ ಮೂಲಕ ಆಘಾತ ನೀಡಿದೆ. ಟಿಸಿಎಂ ಶಾಸಕರ ಬಂಡಾಯ ಬೆನ್ನಲ್ಲೆ, 20 ಸಂಸದರು ಬಂಡಾಯ ಏಳುವ ಮೂಲಕ ಟಿಎಂಸಿ ಚಿದ್ರ ಚಿದ್ರವಾಗಲಿದೆ ಎಂಬ ಮುನ್ಸೂಚನೆ ಸಿಕ್ಕಂತಾಗಿದೆ.
ಸದಾ ಕಾಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಕಿಡಿ ಕಾರುವ ಹಾಗೂ ದೆಹಲಿಯಲ್ಲಿ ಮೋದಿಯನ್ನು ಸೋಲಿಸುವುದಾಗಿ ಗುಡುಗಿದ್ದ ದಿದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುಣಿಸಿತ್ತು. ಅದರ ಬೆನ್ನಲ್ಲೆ ಶಾಸಕರು ಬಂಡಾಯವೆದ್ದು, ದಿದಿಯ ನಿದ್ದೆಗೆಡಿಸಿದ್ದರು. ಇದೀಗ ಟಿಎಂಸಿಯ 20 ಸಂಸದರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಇದರಿಂದ ಬಿಜೆಪಿ ಸಂಸದರ ಸಂಖ್ಯೆ 300 ದಾಟಲಿದೆ. ಟಿಎಂಸಿಗೆ ರಾಜಕೀಯವಾಗಿ ದೊಡ್ಡ ಹೊಡೆತ, ಹಿನ್ನಡೆ ಇದು ಎಂದು ವಿಶ್ಲೇಷಿಸಲಾಗಿದೆ.

ಟಿಎಂಸಿ ಬಂಡಾಯ ಸಂಸದರು ಸಭಾಪತಿ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. 20 ಮಂದಿ ಟಿಎಂಸಿಯ ಸಂಸದರ ಸೇರ್ಪಡೆಯಿಂದ ಎನ್‌ಡಿಎ ಹಾಲಿ ಒಟ್ಟು ಸಂಸದರ ಸಂಖ್ಯೆ 292ರಿಂದ 312ಕ್ಕೆ ಏರಿಕೆ ಆಗಲಿದೆ. ಬಿಜೆಪಿ ವಿರುದ್ಧ ಸೋತ ಮಮತಾ ಬ್ಯಾನರ್ಜಿಗೆ ಮೇಲಿಂದ ಮೇಲೆ ಆಘಾತ ಉಂಟಾಗುತ್ತಿದೆ. ಸ್ವಪಕ್ಷ ನಾಯಕರೇ ದಿದಿಗೆ ತಲೆನೋವಾಗಿದ್ದು, ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.
* ಎನ್‌ಡಿಎ- 292 (ಹಾಲಿ ಸಂಸದರು)
* ಟಿಎಂಸಿ 20 (ಬಿಜೆಪಿಗೆ ಸೇರಲಿರುವ ಟಿಎಂಸಿ ಸಂಸದರು)
* ಒಟ್ಟು 312 (ಸೇರ್ಪಡೆ ಬಳಿಕ ಬಿಜೆಪಿ ಎಂಪಿಗಳ ಸಂಖ್ಯೆ)
ಓಂ ಬಿರ್ಲಾಗೆ ಟಿಎಂಸಿ ರೆಬಲ್ ಸಂಸದರ ಪತ್ರ
28 ಸಂಸದರನ್ನು ಹೊಂದಿದ್ದ ಟಿಎಂಸಿ ಪಕ್ಷದ 20 ಬಂಡಾಯ ಸಂಸದರು ಲೋಕಸಭೆಯಲ್ಲಿ ಆಡಳಿರೂಢ ಎನ್‌ಎಡಿ ಮೈತ್ರಿಕೂಟ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಸಭಾಪತಿ ಓಂ ಬಿರ್ಲಾಗೆ ಅವರಿಗೆ ಬಂಡಾಯ ಸಂಸದರು ಪತ್ರ ಬರೆದಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದಂತೆ ಮನವಿ ಮಾಡಿಕೊಂಡಿದ್ದಾರೆಂದುದು ತಿಳಿದು ಬಂದಿದೆ.
ರಾಜಕೀಯದಲ್ಲಿ ದಿದಿ ಪತನ?
ಬಂಡಾಯ ಸಂಸದರ ಈ ನಿರ್ಧಾರದಿಂದ ಪಕ್ಷ ಸಂಘಟನೆ, ಮತ್ತೆ ಅಧಿಕಾರ ಹಿಡಿಯುವ ಆಸೆ, ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುವ ದಿದಿ ಹುಮ್ಮಸ್ಸಿಗೆ ತಣ್ಣೀರೆರಚಿದಂತಾಗಿದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಸೋಲಿಸುವುದಾಗಿ ಗುಡುಗಿದ್ದ ಮಮತಾ ಬ್ಯಾನರ್ಜಿಗೆ ಸದ್ಯ ಪಕ್ಷದ ಹೋಳಾಗುವುದನ್ನು ತಡೆಯಲು ಹೆಣಗಾಡುವಂತಾಗಿದೆ. ಇದೆಲ್ಲ ನೋಡಿದರೆ ರಾಜಕೀಯವಾಗಿ ದಿದಿ ಸಂಪೂರ್ಣವಾಗಿ ಅಧಃಪತನದತ್ತ ಸಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಹೊರಗಿನಿಂದ ಬಂದವರಿಗೆ ಕುಮ್ಮಕ್ಕು, ವ್ಯಾಪಕ ಭ್ರಷ್ಟಾಚಾರಕ್ಕೆ, ಅಧಿಕಾರ ದುರ್ಬಳಕೆಯಂತಹ ದಿದಿ ವರ್ತನೆಯಿಂದ ಕಂಗೆಟ್ಟಿದ್ದ ರಾಜ್ಯದ ಜನರು 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರು. ಈ ಮೂಲಕ ದಿದಿಗೆ ತಕ್ಕ ಉತ್ತರ ನೀಡಿ ಟಿಎಂಸಿ ಆಡಳಿತ ಕೊನೆಗಾಣಿಸಿದರು. ಸ್ವಪಕ್ಷದವರು ಸಹ ದಿದಿ ಆಡಳಿತವನ್ನು ವಿರೋಧಿಸಿದ್ದು, ಅದರ ಬೆನ್ನಲ್ಲೆ ಬಂಡಾವೆದ್ದ ನಾಯಕರು ಎನ್‌ಡಿಎ ತೆಕ್ಕೆಗೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.
ಬಿಜೆಪಿ ಸೇರಲಿರುವ ಟಿಎಂಸಿ ಸಂಸದರು ಲೋಕಸಭೆಯಲ್ಲಿ ಪೂರ್ಣವಾಗಿ ಗುರುತಿಸಿಕೊಳ್ಳದೇ, ಪ್ರತ್ಯೇಕ 20 ಸಂಸದರ ಗುಂಪಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇಂದಿನ ಬೆಳವಣಿಗೆಯಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಡಳಿತ ಜೊತೆ ಜೊತೆಗೆ ಪಕ್ಷವು ಅಂತ್ಯ ಕಾಣುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.













Click it and Unblock the Notifications