Tirupati Tirumala: ತಿರುಪತಿಯಲ್ಲಿ ಇನ್ಮುಂದೆ ಕೈಗೆಟಕುವ ದರದಲ್ಲಿ ರುಚಿಕರ ಊಟ..
ತಿರುಪತಿಗೆ ನಾನಾ ಕಾರಣಗಳಿಗಾಗಿ ಭಕ್ತರು ಆಗಮಿಸುತ್ತಾರೆ. ಹೀಗೆ ತಿರುಪತಿಗೆ ಆಗಮಿಸಿದ ಜನರಿಗೆ ಉತ್ತಮ ಆಹಾರ ನೀಡಲು ಹೋಟೆಲ್‌ಗಳ ಮಾಲೀಕರೊಂದಿಗೆ ಸಭೆಯನ್ನು ನಡೆಸಲಾಯಿತು.
ತಿರುಪತಿಗೆ ಬರುವ ಜನರಿಗೆ ಉತ್ತಮ ಆಹಾರ ವಿತರಿಸುವ ನಿಟ್ಟಿನಲ್ಲಿ ಹೋಟೆಲ್‌ಗಳು ಕಾರ್ಯ ನಿರ್ವಹಿಸುವಂತೆ ಟಿಟಿಡಿ ಸೂಚನೆ ನೀಡಿದೆ. ತಿರುಮಲವನ್ನು ಶುದ್ಧೀಕರಿಸುವತ್ತ ತಿರುಮಲ ತಿರುಪತಿ ದೇವಸ್ಥಾನದ ನೂತನ ಇಒ ಜೆ. ಶ್ಯಾಮಲಾ ರಾವ್ ಹೆಜ್ಜೆ ಇಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ತಿರುಮಲದಲ್ಲಿ ಟಿಟಿಡಿ ಇಒ ಹೋಟೆಲ್‌ಗಳ ಪರಿಶೀಲನಾ ಸಭೆ ನಡೆಸಿದರು. ಟಿಟಿಡಿ ಇಒ ಮತ್ತು ಜೆಇಒ ವೀರಬ್ರಹ್ಮ ಅವರು ಗೋಕುಲಂ ರೆಸ್ಟ್ ಹೌಸ್‌ನಲ್ಲಿ ತಿರುಮಲದ ಹೋಟೆಲ್‌ಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಟಿಟಿಡಿ ಇಒ ಮಾತನಾಡಿ, ತಿರುಮಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ರುಚಿಕರವಾದ, ಗುಣಮಟ್ಟದ ಹಾಗೂ ಶುಚಿಯಾದ ಆಹಾರವನ್ನು ಕೈಗೆಟಕುವ ದರದಲ್ಲಿ ನೀಡಲು ಶ್ರಮಿಸುವಂತೆ ಸೂಚನೆ ನೀಡಿದರು.
ಈ ಉದ್ದೇಶಕ್ಕಾಗಿ ಜನಪ್ರಿಯ ಹೋಟೆಲ್‌ಗಳನ್ನು ಆಯ್ಕೆ ಮಾಡಿ ಮತ್ತು ಪಟ್ಟಿ ಮಾಡಿ ಎಂದು ಇಒ ಶ್ಯಾಮಲಾ ತಿಳಿಸಿದ್ದಾರೆ. ಭಾರತೀಯ ಪಾಕಶಾಲೆಯ ಅಧ್ಯಾಪಕರಾದ ಚಲೇಶ್ವರ ರಾವ್ ಮತ್ತು ತಾಜ್ ಹೊಟೇಲ್ ಜಿಎಂ ಚೌಧರಿ ಅವರು ಸಲಹೆಗಳನ್ನು ಆಹ್ವಾನಿಸಿದ್ದಾರೆ. ಇದಾದ ಬಳಿಕ ಸಂಜೆ ಟಿಟಿಡಿ ಇಒ ವೆಂಗಮಾಂಬ ಅನ್ನಪ್ರಸಾದ ಭವನಕ್ಕೆ ಭೇಟಿ ನೀಡಿ ಯಾತ್ರಾರ್ಥಿಗಳಿಗೆ ನೀಡುವ ರುಚಿಕರ ಖಾದ್ಯಗಳನ್ನು ಖುದ್ದು ಪರಿಶೀಲಿಸಿದರು.

ಊಟದಲ್ಲಿ ಜರಿ ಪತ್ತೆ
ಕೆಲ ದಿನಗಳ ಹಿಂದೆ ತಿರುಪತಿಯ ಹೋಟೇಲ್ ಒಂದರಲ್ಲಿ ಸತ್ತ ಜರಿ ಹುಳ ಪತ್ತೆಯಾಗಿತ್ತು. ಇದರಿಂದ ಕೋಪಗೊಂಡು ಗ್ರಾಹಕರು ಹೋಟೆಲ್ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದರು. ಆದರೆ ಹೋಟೆಲ್ ಸಿಬ್ಬಂದಿ ಗ್ರಾಹಕರಿಗೆ ಎದುರು ಉತ್ತರ ಕೊಟ್ಟಿದ್ದರಿಂದ ಗ್ರಾಹಕರು ಕೋಪಗೊಂಡು ದೂರು ನೀಡಿದ್ದಾರೆ.
ಇದರಿಂದಾಗಿ ಆಹಾರ ಇಲಾಖೆ ಸಿಬ್ಬಂದಿಗಳು ಹೋಟೆಲ್‌ಗೆ ಆಗಮಿಸಿ ಪರಿಶೀಲನೆ ಮಾಡಿದರು. ಈ ವೇಳೆ ಗುಣಮಟ್ಟವಲ್ಲದ ಪದಾರ್ಥಗಳನ್ನು ಅಡುಗೆಗೆ ಬಳಸುವುದು ಗೊತ್ತಾಗಿದೆ. ಅಲ್ಲದೆ ಅಡುಗೆ ಮನೆ ಸ್ವಚ್ಚವಾಗಿ ಇಲ್ಲದೇ ಇರುವುದು ಗೊತ್ತಾಗಿದೆ. ಇದರಿಂದ ಇನ್ನುಳಿದ ಗ್ರಾಹಕರು ಗಲಾಟೆ ಮಾಡಲು ಶುರು ಮಾಡಿದ್ದಾರೆ.
ಕೂಡಲೇ ಆಹಾರ ಸುರಕ್ಷತಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಜನ ಸುಮ್ಮನಾಗಿದ್ದಾರೆ.
ಇಂತಹ ದೂರುಗಳ ನಡುವೆ ಟಿಟಿಡಿ ತಿರುಪತಿ ಇಒ ಹೋಟೆಲ್‌ಗಳಲ್ಲಿ ಜನರಿಗೆ ನೀಡುವ ಆಹಾರದ ಬಗ್ಗೆ ಪರಿಶೀಲನಾ ಸಭೆ ಮಾಡಿದರು. ಸಭೆಯಲ್ಲಿ ಗುಣಮಟ್ಟದ ಆಹಾರ ವಿತರಣೆಗೆ ಮನವಿ ಮಾಡಿದ್ದಾರೆ.












Click it and Unblock the Notifications