Tirupati Tirumala: ತಿರುಮಲ ಬೆಟ್ಟ ಏರುವ ಭಕ್ತರು ಈಗ ಕೋಲು ಹಿಡಿದು ಹೋಗಬೇಕು- ಯಾಕೆ ಗೊತ್ತಾ?
ಹೈದರಾಬಾದ್, ಆಗಸ್ಟ್ 16: ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ತೆರಳುವ ಭಕ್ತರು ಈಗ ತಮ್ಮ ಜೊತೆಗೆ ಹೆಚ್ಚುವರಿ ವಸ್ತುವೊಂದನ್ನು ಕೊಂಡೊಯ್ಯಬೇಕಿದೆ. ತಿರುಮಲ ಬೆಟ್ಟದಲ್ಲಿ ಕಾಡುಪ್ರಾಣಿಗಳು ಹಾವಳಿ ಹೆಚ್ಚುತ್ತಿರುವುದರಿಂದ ಭಕ್ತರು ತಮ್ಮ ಜೊತೆಯಲ್ಲಿ ಮರದ ಕೋಲನ್ನು ತೆಗೆದುಕೊಂಡು ತಿರುಪತಿ ಭದ್ರತಾ ಸಿಬ್ಬಂದಿ ಸೂಚನೆ ನೀಡಿದ್ದಾರೆ.
ಕಳೆದ ವಾರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ 6 ವರ್ಷದ ಬಾಲಕಿಯನ್ನು ಚಿರತೆ ಕೊಂದಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಿರುಮಲ ತಿರುಪತಿ ದೇವಸ್ಥಾನ ( ಟಿಟಿಡಿ ) ಹಲವು ಕ್ರಮಗಳನ್ನು ಕೈಗೊಂಡಿದೆ. ದೇವಾಲಯಕ್ಕೆ ಪಾದಚಾರಿ ಮಾರ್ಗದಲ್ಲಿ ತೆರಳುವ ಭಕ್ತರು ನೂರು ಜನರ ಗುಂಪುಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಹೋಗಬೇಕಾಗುತ್ತದೆ.

ಕಾಡು ಪ್ರಾಣಿಗಳ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಭಕ್ತರಿಗೆ ಮರದ ಕೋಲನ್ನು ಸಹ ನೀಡಲಾಗುತ್ತದೆ.
'ಎಷ್ಟೇ ಅಗತ್ಯವಿದ್ದರೂ ನಾವು ಎಲ್ಲರಿಗೂ ಕೋಲು ನೀಡುತ್ತೇವೆ' ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ಬಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.
ಕಾಡು ಪ್ರಾಣಿಗಳನ್ನು ರೋಡಿಗೆ ಬರದಂತೆ ಭಕ್ತರು ನೋಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರು ತೆರಳುವ ಮಾರ್ಗದಲ್ಲಿ ಆಹಾರ ಹಾಗೂ ಕಸ ಹಾಕದಂತೆ ಸೂಚಿಸಲಾಗಿದೆ. ಕೋತಿಗಳಿಗೆ ಆಹಾರ ನೀಡದಂತೆ ಭಕ್ತರಿಗೆ ತಿಳಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವಾಲಯವು ಮೀಸಲು ಅರಣ್ಯ ಪ್ರದೇಶದಲ್ಲಿದೆ. ಈ ಹಿನ್ನೆಲೆಯಲ್ಲಿ ಪಾದಚಾರಿ ಪ್ರದೇಶಕ್ಕೆ ಬೇಲಿ ಹಾಕುವ ಪ್ರಸ್ತಾವನೆಯನ್ನು ತೆರವುಗೊಳಿಸಬೇಕಿದೆ. ಈ ವಿಚಾರದ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ದೇವಸ್ಥಾನದಲ್ಲಿ ನೂಕುನುಗ್ಗಲು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ, ಕೆಲವು ಕ್ರಮಗಳು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ನಾವು ದೂರದ ಸ್ಥಳಗಳಿಂದ ಬಂದಿದ್ದೇವೆ. ಮಧ್ಯಾಹ್ನ 2 ರ ನಂತರ ಮಕ್ಕಳಿಗೆ ಅವಕಾಶ ನೀಡದಿದ್ದರೆ. ನಾವು ಇಡೀ ರಾತ್ರಿ ಕಾಯಬೇಕಾಗುತ್ತದೆ. ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ಸರತಿಯಲ್ಲಿ ನಿಲ್ಲಬೇಕಾಗುತ್ತದೆ' ಎಂದು ಭಕ್ತಾದಿಗಳು ಆರೋಪಿಸಿದ್ದಾರೆ.

ಯಾತ್ರಾರ್ಥಿಗಳನ್ನು ನಿಲ್ಲಿಸಿ ಬ್ಯಾಚ್‌ಗಳಲ್ಲಿ ಬಿಡುವ ಬದಲು ಹೆಚ್ಚಿನ ಭದ್ರತೆ ಒದಗಿಸಬೇಕು ಅಥವಾ ಮಾರ್ಗಕ್ಕೆ ಬೇಲಿ ಹಾಕಬೇಕು ಎಂದು ಭಕ್ತರು ಹೇಳಿದ್ದಾರೆ.
ಕಳೆದ ವಾರ ಆರು ವರ್ಷದ ಲಕ್ಷಿತಾ ಮತ್ತು ಆಕೆಯ ಕುಟುಂಬ ದೇವಸ್ಥಾನಕ್ಕೆ ತೆರಳಲು ಪಾದಚಾರಿ ಮಾರ್ಗವನ್ನು ಬಳಸುತ್ತಿದ್ದರು. ಆಗ ( ಶುಕ್ರವಾರ ರಾತ್ರಿ ) ಚಿರತೆ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿತ್ತು.
ಮನೆಯವರು ಆಕೆಗೆ ಆಟಿಕೆಗಳನ್ನು ಖರೀದಿಸಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಆಕೆ ದಾರಿ ತಪ್ಪಿಕೊಂಡಳು. ಆಗ ಚಿರತೆ ಆಕೆಯ ಮೇಲೆ ದಾಳಿ ನಡೆಸಿದೆ. ಆಕೆಯ ದೇಹವು ಪೊದೆಗಳಲ್ಲಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಕ್ಷಿತಾಳನ್ನು ಕೊಂದ 48 ಗಂಟೆಗಳ ನಂತರ ಚಿರತೆ ಸಿಕ್ಕಿಬಿದ್ದಿದೆ ಎಂದು ಶಂಕಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ಚಿರತೆಗಳು ಮತ್ತು ಕರಡಿಗಳು ಸೇರಿದಂತೆ ಹೆಚ್ಚಿನ ಕಾಡು ಪ್ರಾಣಿಗಳಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲಿಪಿರಿ ಮತ್ತು ತಿರುಮಲವನ್ನು ಸಂಪರ್ಕಿಸುವ ಪಾದಚಾರಿ ಮಾರ್ಗಗಳಲ್ಲಿ, ಶ್ರೀವಾರಿ ಮೆಟ್ಟು ಸಂಪರ್ಕಿಸುವ ಇನ್ನೊಂದು ಮಾರ್ಗದಲ್ಲಿ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
'ಅಗತ್ಯವಿದ್ದರೆ, ಡ್ರೋನ್ ಕ್ಯಾಮೆರಾಗಳನ್ನು ಸಹ ಖರೀದಿಸಲಾಗುತ್ತದೆ. ಅನಿಮಲ್ ಟ್ರ್ಯಾಕರ್‌ಗಳು ಮತ್ತು ವೈದ್ಯರು ದಿನದ 24 ಗಂಟೆಯೂ ಲಭ್ಯವಾಗುವಂತೆ ಮಾಡಲಾಗುವುದು' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾದಚಾರಿ ಮಾರ್ಗದ ಸುತ್ತಲೂ 30 ಮೀಟರ್ ಗೋಚರತೆ ಇರುವಂತೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಏಳನೇ ಮೈಲ್, ಗಾಳಿಗೋಪುರ, ಅಲಿಪಿರಿ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಕಾಡು ಪ್ರಾಣಿಗಳ ದಾಳಿಯ ಎಚ್ಚರಿಕೆಯ ಫಲಕವನ್ನು ಸಹ ಹಾಕಲಾಗುತ್ತದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications