Tirupati Tirumala: ವಿಶೇಷ ದರ್ಶನಕ್ಕೆ ಅವಕಾಶವಿಲ್ಲ- ಕಾರಣವೇನು?, ಇಲ್ಲಿದೆ ಮಾಹಿತಿ

ತಿರುಪತಿ, ಅಕ್ಟೋಬರ್‌, 11: ಈ ವಾರ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ದರ್ಶನಕ್ಕೆ ಅನುಮತಿ ರದ್ದು ಮಾಡಿದ್ದು, ಉಚಿತ ದರ್ಶನ ಪಡೆಯುವ ಸಮಯವನ್ನು 6-8 ಗಂಟೆಗಳಿಗೆ ತಗ್ಗಿಸಲಾಗಿ. ಟಿಟಿಡಿ ಪ್ರಕಾರ ವಿಶೇಷ ಉಚಿತ ದರ್ಶನಕ್ಕಾಗಿ ಟೋಕನ್‌ಗಳಿಲ್ಲದ ಭಕ್ತರು ಬುಧವಾರ ಸುಮಾರು 6 ಗಂಟೆಗಳ ಕಾಲ ಕಾದಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ (ಅಕ್ಟೋಬರ್‌ 11) 300 ರೂಪಾಯಿ ಪಾವತಿಸಿ ವಿಶೇಷ ದರ್ಶನಕ್ಕಾಗಿ ಕಾಯುವವರಿಗೆ ಸಮಯ 5-8 ಗಂಟೆಗಳು ಆಗಿದೆ.ಈ ವೇಳೆ 71,361 ಭಕ್ತರು ತಿರುಮಲ ದರ್ಶನಕ್ಕಾಗಿ ತಿರುಪತಿಗೆ ಭೇಟಿ ನೀಡಿದ್ದು, ತಿರುಪತಿ ತಿಮ್ಮಪ್ಪನ ಹುಂಡಿಗೆ 3.69 ಕೋಟಿ ರೂಪಾಯಿ ಕಾಣಿಕೆ ಬಿದ್ದಿದೆ ಎಂದು ತಿಳಿದುಬಂದಿದೆ. ಇನ್ನು ಜನಸಂದಣಿ ಕಡಿಮೆಯಾದರೂ ಹಲವಾರು ಕಂಪಾರ್ಟ್‌ಮೆಂಟ್‌ಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

Tirupati Tirumala Free Darshan Time drops, know details

ಇಲ್ಲಿ ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15ರಂದು ಪ್ರಾರಂಭವಾಗಿ ಅಕ್ಟೋಬರ್ 23 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ವಿಶೇಷ ದರ್ಶನಗಳನ್ನು ನಿಷೇಧಿಸಲು ಟಿಟಿಡಿ ನಿರ್ಧರಿಸಿದೆ. 9 ದಿನಗಳ ಈ ಆಚರಣೆಯಲ್ಲಿ ತಿರುಪತಿಯಲ್ಲಿ ಭಾರೀ ಜನಸಂದಣಿ ಕಂಡುಬರುವುದರಿಂದ ಉಚಿತ ದರ್ಶನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಅಂದರೆ ಅಕ್ಟೋಬರ್ 15 ಮತ್ತು 23ರ ನಡುವೆ ಹಿರಿಯ ನಾಗರಿಕರು, ರಕ್ಷಣಾ ಮತ್ತು ಎನ್‌ಆರ್‌ಐಗಳು ಸೇರಿದಂತೆ ವಿಐಪಿ ಬ್ರೇಕ್ ದರ್ಶನಗಳು, ವಿಶೇಷ ದರ್ಶನಗಳಿಗೆ ಅನುಮಾತಿ ನೀಡಲಾಗುವುದಿಲ್ಲ.

ನವರಾತ್ರಿ ಬ್ರಹ್ಮೋತ್ಸವಗಳಲ್ಲಿ ಕಾರ್ಯಕ್ರಮಗಳು ಮತ್ತು ಸೇವೆಗಳು

1. ಅಕ್ಟೋಬರ್ 19- ಗರುಡ ವಾಹನ ಸೇವೆ

2. ಅಕ್ಟೋಬರ್ 20- ಪುಷ್ಪಕ ವಿಮಾನ

3. ಅಕ್ಟೋಬರ್ 22- ಚಿನ್ನದ ರಥೋತ್ಸವ

4. ಅಕ್ಟೋಬರ್ 23- ಚಕ್ರ ಸ್ನಾನ ಮಹೋತ್ಸವ

9 ದಿನಗಳ ಅವಧಿಯಲ್ಲಿ, ವಾಹನ ಸೇವೆಗಳು ಪ್ರತಿದಿನ ಬೆಳಗ್ಗೆ 8 ರಿಂದ 10ರವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 9 ರವರೆಗೆ ಇರುತ್ತವೆ. ಎರಡನೇ ಬ್ರಹ್ಮೋತ್ಸವದಲ್ಲಿ ದ್ವಜಾರೋಹಣ ಕಾರ್ಯಕ್ರಮಗಳು ನಡೆಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+