Tirumala Tirumala: ತಿರುಪತಿಗೆ ಹೋಗುವ ಈ ಭಕ್ತರಿಗೆ ಸಂತಸದ ಸುದ್ದಿ...ಏನು ಗೊತ್ತಾ?
ತಿರುಪತಿ ದೇಗುಲಕ್ಕೆ ಪ್ರಪಂಚದಾದ್ಯಂತದ ಅಪಾರ ಸಂಖ್ಯೆಯ ಭಕ್ತರು ಪ್ರತಿದಿನ ಭೇಟಿ ನೀಡುತ್ತಾರೆ. ಪ್ರತಿದಿನ ಸರಾಸರಿ 70 ಸಾವಿರಕ್ಕೂ ಹೆಚ್ಚು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಈ ವೇಳೆ ಉಚಿತ ಟಿಕೆಟ್ ಪಡೆದು ಬರುವ ಭಕ್ತರು ಗಂಟೆಗಟ್ಟಲೆ ಕಾದು ಏಳು ಬೆಟ್ಟಗಳ ಒಡೆಯನ ದರ್ಶನ ಪಡೆಯುತ್ತಾರೆ. ಹೀಗೆ ಉಚಿತ ಟಿಕೆಟ್ ಪಡೆದು ಶ್ರೀವಾರಿ ದರ್ಶನಕ್ಕೆ ಬರುವ ಹಿರಿಯ ನಾಗರಿಕರು ಗಂಟೆ ಗಟ್ಟಲೆ ಕಾಯಲು ಆಗುವುದಿಲ್ಲ. ಹೀಗಾಗಿ ತಿರುಪತಿ ದೇವಸ್ಥಾನ ಟ್ರಸ್ಟ್ ಅವರಿಗಾಗಿ ಕೆಲ ಸೌಲಭ್ಯಗಳನ್ನು ಘೋಷಿಸಿದೆ.

ಈ ಸೌಲಭ್ಯ ಪಡೆದ ಹಿರಿಯ ನಾಗರಿಕರು ಗಂಟೆಗಟ್ಟಲೆ ಕಾಯದೆ ಬಹುಬೇಗ ದೇವಸ್ಥಾನ ಪ್ರವೇಶಿಸಬಹುದಾಗಿದೆ. ಜೊತೆಗೆ ಕೇವಲ 30 ನಿಮಿಷಗಳಲ್ಲಿ ತಿಮ್ಮಪ್ಪನ ದರ್ಶನ್ ಪಡೆದು ಹೊರಗೆ ಬರಬಹುದು. ಹಾಗಾದರೆ ಈ ಸೌಲಭ್ಯ ಯಾರಿಗೆ? ಹೇಗೆ ಪಡೆಯಬೇಕು ಎಂದು ತಿಳಿಯೋಣ.
1. ತಿರುಮಲ ತಿರುಪತಿ ದೇವಸ್ಥಾನ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶಾಂತಿಯುತವಾಗಿ ಸ್ವಾಮಿಯ ದರ್ಶನ ಪಡೆಯಲು ವಿಶೇಷ ಉಚಿತ ದರ್ಶನವನ್ನು ಏರ್ಪಡಿಸಿದೆ.
2. ಹಿರಿಯ ನಾಗರಿಕರ ಉಚಿತ ದರ್ಶನಕ್ಕಾಗಿ ದೇವಸ್ಥಾನವು ಪ್ರತಿದಿನ ಬೆಳಗ್ಗೆ 10 ಮತ್ತು ಮಧ್ಯಾಹ್ನ 3 ಗಂಟೆಗೆ 2 ಸ್ಲಾಟ್‌ಗಳನ್ನು ಕಾಯ್ದಿರಿಸಿದೆ. 65 ವರ್ಷ ಮೇಲ್ಪಟ್ಟ ಭಕ್ತರು ಅಲ್ಲಿಗೆ ಹೋದರೆ ಈ ಸೌಲಭ್ಯಕ್ಕೆ ಅರ್ಹರೆಂದು ಗುರುತಿಸಲಾಗುತ್ತದೆ.

3. ಹೀಗಾಗಿ ಹಿರಿಯ ನಾಗರಿಕರು 30 ನಿಮಿಷದೊಳಗೆ ಸ್ವಾಮಿ ದರ್ಶನ ಪಡೆಯಬಹುದು. ಹಿರಿಯ ನಾಗರಿಕರು ದರ್ಶನ ಮಾಡುವಾಗ ಇತರ ಎಲ್ಲಾ ಸರತಿ ಸಾಲುಗಳನ್ನು ನಿಲ್ಲಿಸಲಾಗುತ್ತದೆ ಇದರಿಂದ ನಾಗರಿಕರು ಶಾಂತಿಯುತವಾಗಿ ಮತ್ತು ಅಡೆತಡೆಯಿಲ್ಲದ ರೀತಿಯಲ್ಲಿ ದರ್ಶನ ಪಡೆಯಬಹುದು.
4. ಹಿರಿಯ ನಾಗರಿಕರು ಕೌಂಟರ್‌ಗೆ ತಲುಪಲು ಪಾರ್ಕಿಂಗ್ ಪ್ರದೇಶದಿಂದ ಬ್ಯಾಟರಿ ಚಾಲಿತ ಕಾರ್ ಸೇವಾ ಸೌಲಭ್ಯವನ್ನು ಸಹ ದೇವಸ್ಥಾನ ಒದಗಿಸುತ್ತದೆ.
5. ಈ ದರ್ಶನಕ್ಕೆ ಅರ್ಹತೆ ಪಡೆಯಲು ವಯಸ್ಸಿನ ಪ್ರಮಾಣಪತ್ರವನ್ನು ಫೋಟೋ ಗುರುತಿನೊಂದಿಗೆ ಸಲ್ಲಿಸಬೇಕು. ಅದನ್ನು S-1 ಕೌಂಟರ್‌ನಲ್ಲಿ ನೀಡಬೇಕು. ಈ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಭಕ್ತರು ತಮ್ಮ ಭಾವಚಿತ್ರ ಮತ್ತು ಗುರುತಿನ ಪುರಾವೆಗಳೊಂದಿಗೆ ದಕ್ಷಿಣ ಮಠದ ಬೀದಿಯಲ್ಲಿರುವ ನಂಬಿ ದೇವಸ್ಥಾನದ ಬಳಿಯ ಪ್ರವೇಶ ದ್ವಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಇದಲ್ಲದೆ ತಿರುಪತಿ ದೇವಸ್ಥಾನ ಹಿರಿಯ ನಾಗರಿಕರಿಗೆ ಆಸನ ಸೌಲಭ್ಯಗಳನ್ನು ಒದಗಿಸುತ್ತದೆ. ನೋಂದಾಯಿಸಿಕೊಂಡವರು ಮೆಟ್ಟಿಲುಗಳನ್ನು ಹತ್ತುವ ಅಗತ್ಯವಿಲ್ಲ.
6. ದರ್ಶನದ ಸಮಯದಲ್ಲಿ ಅವರಿಗೆ ಸಾಂಬಾರ್, ಮೊಸರು ಅನ್ನ ಮತ್ತು ಬಿಸಿ ಹಾಲನ್ನು ಉಚಿತವಾಗಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಕೆಲ ಸೌಲಭ್ಯವನ್ನೂ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08772277777 ಅನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನವು ತಿಳಿಸಿದೆ.
7. ಉಚಿತ ಟಿಕೆಟ್‌ನಲ್ಲಿ ಬರುವ ಭಕ್ತರು ಏಳುಬೆಟ್ಟಗಳ ದರ್ಶನಕ್ಕೆ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಇದನ್ನು ತಪ್ಪಿಸಲು ಕಳೆದ ವಾರ ದೇವಾಸ್ಥಾನದ ಟ್ರಸ್ಟ ಈ ನಿರ್ಧಾರ ಪ್ರಕಟಿಸಿದೆ. ಇದರಿಂದ ಹಿರಿಯ ನಾಗರೀಕರು ಶಾಂತಿಯುತವಾಗಿ ಸ್ವಾಮಿಯ ದರ್ಶನ ಪಡೆಯಬಹುದು. ಅಲ್ಲದೆ ಟಿಕೆಟ್‌ಗಾಗಿ ಕಾಯಬೇಕಿಲ್ಲ. ಜೊತೆಗೆ ಯಾವುದೇ ತೊಂದರೆ ಇಲ್ಲದೆ, ನೂಕುನುಗ್ಗಲುವಿನಲ್ಲಿ ಸಿಕ್ಕಿಕೊಳ್ಳದೆ ಅರಾಮದಾಯಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications