Tirupati laddoos ರಾಮಮಂದಿರಕ್ಕೂ 1 ಲಕ್ಷ ತಿರುಪತಿ ಲಡ್ಡು : ಆರ್‌ಎಸ್‌ಎಸ್ ಹೇಳಿದ್ದೇನು
ಆಂಧ್ರಪ್ರದೇಶ ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ತುಪ್ಪದೊಂದಿಗೆ ಬಳಸಲಾಗಿದೆ ಎನ್ನುವ ವಿವಾದವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಇದೀಗ ರಾಮಮಂದಿರದಲ್ಲೂ ಈ ವಿಷಯ ಗಂಭೀರ ಚರ್ಚೆಗೆ ಕಾರಣವಾಗಿದೆ. ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿರುವ ವಿಷಯವು ಹಿಂದೂಗಳ ಆತಂಕಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡಿನ ಬಗ್ಗೆ ಹಿಂದೂಗಳಲ್ಲಿ ವಿಶೇಷ ಗೌರವ ಇದೆ. ತಿರುಪತಿಗೆ ಹೋಗುವವರಷ್ಟೇ ಅಲ್ಲ. ಯಾರಾದರು ತಿರುಪತಿಗೆ ಹೋಗುತ್ತಾರೆ ಎಂದು ಕೇಳಿದರೂ ಸಾಕು..
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಾಸ್ಥಾನದಿಂದ ಬರೋಬ್ಬರಿ 1 ಲಕ್ಷ ಲಡ್ಡುಗಳನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕಳುಹಿಸಲಾಗಿತ್ತು ಎನ್ನುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ತಿರುಪತಿಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲಾಗಿತ್ತು ಎನ್ನುವ ಮಾಹಿತಿಯನ್ನು ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯದಲ್ಲಿ ಉಲ್ಲೇಖ ಮಾಡಿರುವುದು ವರದಿಯಾಗಿದೆ. ಈಚೆಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಂಕುಸ್ಥಾಪನೆ ಕಾರ್ಯಕ್ರಮದ ದಿನ ಬರೋಬ್ಬರಿ 1 ಲಕ್ಷ ಲಡ್ಡುಗಳನ್ನು ತಿರುಪತಿಯಿಂದ ಅಯೋಧ್ಯೆಗೆ ಕಳುಹಿಸಲಾಗಿತ್ತು. ಅದನ್ನು ಭಕ್ತರಿಗೆ ಹಂಚಲಾಗಿತ್ತು ಎಂದು ವರದಿ ಹೇಳಿದೆ.

ಜನ ನಮಗೂ ಒಂದು ಲಡ್ಡು ತೆಗೆದುಕೊಂಡು ಬನ್ನು ಎಂದು ಹೇಳುವುದಿದೆ. ತಿರುಪತಿ ಲಡ್ಡನ್ನು ಕಣ್ಣಿಗೆ ಒತ್ತಿಕೊಂಡು, ತಿಮ್ಮಪ್ಪನ ಪ್ರಸಾದ ಎಂದು ಸೇವಿಸುವುದಿದೆ. ಈ ರೀತಿಯ ಹಿಂದೂ ಧರ್ಮೀಯರ ಭಾವನೆ ಹಾಗೂ ಭಕ್ತಿಯೊಂದಿಗೆ ತಿರುಪತಿ ತಿಮ್ಮಪ್ಪನ ದೇವಾಲಯದ ಲಡ್ಡು ಜನರೊಂದಿಗೆ ತನ್ನದೇ ಬಂಧವನ್ನು ಬೆಸದುಕೊಂಡಿದೆ. ದಶಕಗಳಿಂದ ತಿರುಪತಿಯಲ್ಲಿ ಲಡ್ಡು ಪ್ರಸಾದ ಮಾದರಿಯಲ್ಲಿ ನೀಡಲಾಗುತ್ತಿದೆ. ಬೆಟ್ಟವನ್ನು ಹತ್ತಿ, ತಿಮ್ಮಪ್ಪನ ದರ್ಶನ ಮಾಡಲು ಹೋಗುವ ಪ್ರತಿಯೊಬ್ಬರಿಗೂ ಉಚಿತವಾಗಿ ಒಂದು ಲಡ್ಡು ನೀಡಲಾಗುತ್ತದೆ.
ನೇರವಾಗಿ ಪ್ರವೇಶ ಮಾಡುವರಿಗೆ ಇಂತಿಷ್ಟು ಎಂದು ದರ ನಿಗದಿ ಮಾಡಿ ಲಡ್ಡು ನೀಡಲಾಗುತ್ತದೆ. ಆದರೆ, ಉಚಿತ ಹಾಗೂ ದುಡ್ಡು ಕೊಟ್ಟು ಖರೀದಿ ಮಾಡುವ ಎರಡೂ ಲಡ್ಡಿನಲ್ಲೂ ಅದೇ ಭಕ್ತಿ, ಶ್ರದ್ಧೆ ಇದೆ. ತಿಮ್ಮಪ್ಪನ ದರ್ಶನ ಮಾಡಿ ಬಂದು ಹೊರಾಂಗಣದಲ್ಲಿ ಒಂದು ಲಡ್ಡಿನಲ್ಲೇ ಮನೆಯವರೆಲ್ಲ ಹಂಚಿ ತಿಂದುಕೊಂಡು ಇನ್ನುಳಿದ ಲಡ್ಡನ್ನು ಮನೆಗೆ, ಸಂಬಂಧಿಕರು ಹಾಗೂ ಗೆಳಯರಿಗೆ ಎಂದು ತೆಗೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಈಗ ಕೇಳಿ ಬರುತ್ತಿರುವ ಗಂಭೀರ ಆರೋಪವನ್ನು ಯಾರನ್ನಾದರೂ ಬೆಚ್ಚಿ ಬೀಳಿಸುವಂತಿದೆ. ಇಂತಹ ಗಂಭೀರವಾದ ವಿಚಾರವನ್ನು ಅಲ್ಲಿನ ಸರ್ಕಾರವೇ ದೃಢಪಡಿಸಿರುವುದು ಭಕ್ತರಲ್ಲಿ ಆಘಾತ ಮೂಡಿಸಿದೆ.
ತಿರುಪತಿ ಲಡ್ಡಿನ ಬಗ್ಗೆ ಕೇಳಿ ಬಂದಿರುವ ವಿವಾದವೇನು
ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆ ಮಾಡುವ ಸಂದರ್ಭದಲ್ಲಿ (ಈ ಹಿಂದೆ) ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ಬೆರೆಸಲಾಗುತ್ತಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ರೀತಿ ದನದ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರ ಅವಧಿಯಲ್ಲಿ ನಡೆದಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದೀಗ ನಾವು ಶುದ್ಧೀಕರಣ ಪ್ರಾರಂಭಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications