ತಿರುಪತಿ ಲಡ್ಡು: "ರಾಕ್ಷಸ ನಾಯಕನ ಆಡಳಿತದಿಂದ ಜನ ಹೆದರಿದ್ದರು, ಸತ್ಯ ಹೇಳಲಿಲ್ಲ"

ತಿರುಪತಿ ತಿರುಮಲ ದೇವಸ್ಥಾನದ ಪವಿತ್ರ ಪ್ರಸಾದವಾದ ಲಡ್ಡಿನಲ್ಲಿ ಬಳಸುವ ತುಪ್ಪದಲ್ಲಿ ಹಸುವಿನ ಕೊಬ್ಬು, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆ ಇರುವ ವಿಚಾರ ಹಿಂದೂ ಧರ್ಮೀಯರ ಆಘಾತಕ್ಕೆ ಕಾರಣವಾಗಿದೆ. ಈ ವಿಷಯವನ್ನು ಕೇಳಿ ಮನಸ್ಸು ಆಘಾತಕ್ಕೆ ಒಳಗಾಯಿತು. ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬರು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಆಂಧ್ರ ಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹೇಳಿದ್ದಾರೆ. ಅಲ್ಲದೇ ಅವರೂ ಸಹ ಪ್ರಾಯಶ್ಚಿತ್ತ ದೀಕ್ಷೆಗೆ ಮುಂದಾಗಿದ್ದಾರೆ.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಏಳು ಬೆಟ್ಟಗಳ ಒಡೆಯಾ (ಏಡುಕೊಂಡಲವಾಡ) ಕ್ಷಮಿಸು ಎನ್ನುವ ಶೀರ್ಷಿಕೆಯೊಂದಿಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದವರಿಂದ ಪವಿತ್ರ ಕ್ಷೇತ್ರದಲ್ಲಿ ಈ ರೀತಿ ನಡೆದಿದೆ. ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿದವನಾಗಿ ನಾನು 11 ದಿನಗಳ ದೀಕ್ಷೆಯನ್ನು ಸ್ವೀಕರಿಸುತ್ತಿದ್ದೇನೆ. 11 ದಿನಗಳ ಕಾಲ ಪ್ರಾಯಶ್ಚಿತ್ತ ದೀಕ್ಷೆ (ವ್ರತ) ಮಾಡಲು ನಿರ್ಧರಿಸಿದ್ದೇನೆ. ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬರು ಇದನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.

Tirupati Laddu Controversy people knew truth but did not tell because of the fear Pawan Kalyan

ವಿಶ್ವದಲ್ಲೇ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ತಿರುಮಲ ಲಡ್ಡು ಪ್ರಸಾದವು ಈ ಹಿಂದಿನ ರಾಜಕೀಯನ ನಾಯಕನ ಹೀನ ಪ್ರವೃತ್ತಿಯಿಂದಾಗಿ ಅಶುದ್ಧವಾಗಿದೆ. ಪ್ರಾಣಿಗಳ ಕೊಬ್ಬಿನ ಅಂಶದಿಂದ ಕಲುಷಿತಗೊಂಡಿದೆ. ಈ ಮಹಾ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಸಮುದಾಯಕ್ಕೆ ಬಹುದೊಡ್ಡ ಕಳಂಕವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಸಾದವಾಗಿ ನೀಡುವ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ತುಪ್ಪದೊಂದಿಗೆ ಬಳಸಲಾಗಿದೆ ಎನ್ನುವ ವಿಷಯವನ್ನು ಕೇಳುತ್ತಿದ್ದಂತೆಯೇ ನನ್ನಗೆ ಆಘಾತವುಂಟಾಗಿತ್ತು. ತಪ್ಪಿತಸ್ಥ ಭಾವನೆ ಮೂಡಿತ್ತು. ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲೇ ಇಂತಹ ವಿಷಯ ತಿಳಿಯದೆ ಇರುವುದು ನೋವುಂಟು ಮಾಡಿದೆ. ತಿರುಪತಿ ತಿರುಮಲ ದೇವರಿಗೆ ಆಗಿರುವ ಈ ಘೋರ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ದೇವರಲ್ಲಿ ನಂಬಿಕೆ ಇಲ್ಲದೆ ಇರುವವರು ಹಾಗೂ ಯಾವುದೇ ಪಾಪದ ಭಯವಿಲ್ಲದೆ ಇರುವವರು ಮಾತ್ರ ಈ ರೀತಿಯ ಅಪರಾಧಗಳನ್ನು ಮಾಡಲು ಸಾಧ್ಯ. ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ವ್ಯವಸ್ಥೆಯ ಭಾಗವಾಗಿರುವ ಇಲ್ಲಿನ ಪಾಲಿಕೆ ಸದಸ್ಯರು, ನೌಕರರಿಗೂ ಸಹ ಇಲ್ಲಿ ನಡೆದಿರುವ ತಪ್ಪುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಗೊತ್ತಿದ್ದರೂ ಕೆಲವರು ಈ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದು ನನ್ನ ನೋವು. ಆ ಕಾಲದ ರಾಕ್ಷಸ ಆಡಳಿತಗಾರನಿಗೆ ಅವರು ಹೆದರುತ್ತಿದ್ದರು ಎಂದು ಅನಿಸುತ್ತದೆ ಎಂದು ಪವನ್‌ ಕಲ್ಯಾಣ್‌ ಹೇಳಿದ್ದು, ಪರೋಕ್ಷವಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tirupati Laddu Controversy people knew truth but did not tell because of the fear Pawan Kalyan

ವೈಕುಂಠ ಧಾಮ ಹಾಗೂ ಧಾರ್ಮಿಕ ಪವಿತ್ರ್ಯ ಕ್ಷೇತ್ರವೆಂದು ಪರಿಗಣಿಸಲಾಗಿರುವ ತಿರುಪತಿ ತಿರುಮಲ ಪಾವಿತ್ರ್ಯಕ್ಕೆ ಅಪಚಾರ ಎಸಗಿದ ಹಿಂದಿನ ರಾಜ್ಯ ನಾಯಕ (ಸಿ.ಎಂ) ವರ್ತನೆ ಹಿಂದೂ ಧರ್ಮ ಪಾಲಿಸುವ ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ. ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ತುಪ್ಪವಾಗಿ ಬಳಸಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ ಬಂದಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂದು ಪವನ್‌ ಹೇಳಿದ್ದಾರೆ.

ಜಗನ್‌ ಮೋಹನ್‌ ರೆಡ್ಡಿ ಗುರಿಯಾಗಿಸಿದ ಪವನ್‌

ಪವನ್‌ ಕಲ್ಯಾಣ್‌ ಮಾಡಿರುವ ಟ್ವೀಟ್‌ನಲ್ಲಿ ಅವರು ಹಲವು ಬಾರಿ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಎಲ್ಲಿಯೂ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ನಾನು ಸೆಪ್ಟೆಂಬರ್ 22ರಂದು, ಗುಂಟೂರು ಜಿಲ್ಲೆಯ ನಮ್ಮೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ತೆಗೆದುಕೊಳ್ಳುತ್ತೇನೆ. 11 ದಿನಗಳ ಕಾಲ ದೀಕ್ಷೆ ಮುಗಿಸಿದ ನಂತರ ನಾನು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲಿದ್ದೇನೆ. 'ದೇವರೇ...ಹಿಂದಿನ ನಾಯಕ ನಿಮ್ಮ ವಿರುದ್ಧ ಮಾಡಿದ ಪಾಪವನ್ನು ತೊಳೆದುಕೊಳ್ಳುವ ಶಕ್ತಿ ಕೊಡು' ಎಂದು ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಾಜಿ ಸಿ.ಎಂ ಜಗನ್‌ ಮೋಹನ್‌ ರೆಡ್ಡಿ ಪಾಪ ಕಾರ್ಯ ಮಾಡಿದ್ದಾರೆ. ಆ ಪಾಪಗಳನ್ನು ಕ್ಷಮಿಸಿ ಬಿಡು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+