TikTok: ಟಿಕ್‌ಟಾಕ್ ಭಾರತಕ್ಕೆ ಮತ್ತೆ ಎಂಟ್ರಿ?: ಅಪ್ಲಿಕೇಶನ್ ಹುಡುಕಾಟ ಶುರು: ಪ್ಲೇ ಸ್ಟೋರ್ ಸ್ಟ್ರಕ್!
TikTok: ರೀಲ್ಸ್‌ಗಂತಲೇ ಫೇಮಸ್ ಆಗಿದ್ದ ಚೀನಾದ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆದರೆ, ಇದೀಗ ಮತ್ತೆ ಇದು ವಾಪಸ್ ಮರಳುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗದ್ದಲ ಸೃಷ್ಟಿಸಿದೆ. ಈಗಾಗಲೇ ಬಹುತೇಕ ಮಂದಿ ಮತ್ತೆ ರೀಲ್ಸ್ ಮಾಡಲು ತುದಿಗಾಲಲ್ಲಿ ನಿಂತಿದ್ದು, ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಸರ್ಚ್ ಮಾಡುತ್ತಿದ್ದಾರೆ. ಈ ವಿಚಾರ ಇದೀಗ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿದೆ.
ಹೌದು.. ವರದಿ ಪ್ರಕಾರ, ಭಾರತದಲ್ಲೇ ಹೆಚ್ಚು ಮಂದಿ ಟಿಕ್‌ಟಾಕ್ ಬಳಕೆದಾರರಿದ್ದು, ದಿನಕ್ಕೆ ಒಂದರಿಂದ ಎರಡು ರೀಲ್ಸ್‌ಗಳನ್ನು ಮಾಡುತ್ತಲಿದ್ದರು. ರೀಲ್ಸ್ ಮಾಡದಿದ್ದರೆ, ಏನೋ ಕಳೆದುಕೊಂಡಿದ್ದೇವೋ ಎನ್ನುವ ರೀತಿಯಲ್ಲಿ ವರ್ತಿಸಿ ಮಾಡಬಾರದ್ದನ್ನ ಮಾಡಿದ ಘಟನೆಗಳು ಕೂಡ ನಡೆದಿರುವ ಉದಾಹರಣೆಗಳಿವೆ. ಅಷ್ಟರ ಮಟ್ಟಿಗೆ ಈ ಅಪ್ಲಿಕೇಶನ್ ಬಳಕೆದಾರರನ್ನು ಆಕರ್ಷಿಸಿಬಿಟ್ಟಿತ್ತು. ಆದರೆ, ಕೊನೆಗೆ ಇದನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆದರೆ, ಇದೀಗ ಇದು ಮತ್ತೆ ಮರಳಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಭಾರತದಲ್ಲಿ ಕಿರು ವೀಡಿಯೊ ಕಂಟೆಂಟ್ ಅನ್ನು ಪರಿಚಯಿಸಿದ ಅಪ್ಲಿಕೇಶನ್‌ಗಳಲ್ಲಿ ಇದು ಟಿಕ್‌ಟಾಕ್ ಮೊದಲನೆಯದು ಅಂತಲೇ ಹೇಳಬಹುದು. ಇದು ಕೋವಿಡ್ ಬಿಕ್ಕಟ್ಟಿನ ಮೊದಲು ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ದಿನಕಳೆದಂತೆ ಟಿಕ್‌ಟಾಕ್ ಅತ್ಯಂತ ಜನಪ್ರಸಿದ್ಧಿಯನ್ನು ಸಹ ಪಡೆದಿದ್ದು, ಇದೇ ವೇಳೆ ಈ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಹೆಚ್ಚಾಯಿತು. ಬಳಿಕ ಕೆಲ ರಾಜಕೀಯ ಸಂದರ್ಭಗಳ ಹಿನ್ನೆಲೆ ಇದನ್ನು 2020ರಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು.
ಇದೀಗ ಮತ್ತೆ ಭಾರತದಲ್ಲಿ ಈ ಅಪ್ಲಿಕೇಶನ್ ಬರುತ್ತಿದೆ ಎಂಬ ಸುದ್ದಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಕೆಲವರು ಟಿಕ್‌ಟಾಕ್ ವೆಬ್‌ಸೈಟ್‌ಗೆ ಲಾಗಿ ಇನ್ ಆಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿವೆ. ಜೊತೆಗೆ ಈ ಕಿರು ವೀಡಿಯೊ ಕಂಟೆಂಟ್ ಅಪ್ಲಿಕೇಶನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕೆಲ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದು ಪ್ಲೇ ಸ್ಟೋರ್‌ನಿಂದ ಓಪನ್ ಆಗಿಲ್ಲ. ರದ್ದಾದ ಪರಿಸ್ಥಿತಿಯಲ್ಲಿದೆ.
ಆಗ, ಚೀನಾದ ಮಾರ್ಕೆಟಿಂಗ್ ವ್ಯಾಲ್ಯೂ ಹೆಚ್ಚಾಗಲೂ ಈ ಟಿಕ್‌ಟಾಕ್ ಅಪ್ಲಿಕೇಶನ್ ಪ್ರಮುಖ ಪಾತ್ರವಹಿಸಿತ್ತು. ಆದರೆ, ಇದು ಬಳಕೆದಾರರ ಗೌಪ್ಯತೆಯ ದತ್ತಾಂಶವನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಆದ್ದರಿಂದ ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಈ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ.
ಮೊದಲು ಮದ್ರಾಸ್ ಹೈಕೋರ್ಟ್ 2019ರಲ್ಲಿ ಈ ಅಪ್ಲಿಕೇಶನ್‌ಗೆ ತಡೆ ನೀಡಿತ್ತು. ಬಳಿಕ ಈ ಕುರಿತು ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರವು 2020ರಲ್ಲಿ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನಯ ಸಂಪೂರ್ಣ ನಿಷೇಧಿಸುವುದಾಗಿ ಘೋಷಿಸಿತು. ಜೊತೆಗೆ ಈ ವೇಳೆಯೇ ಇತರ 58 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.
ಟಿಕ್ ಟಾಕ್ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಕರಕವಾಗಿದೆ. ಬಳಕೆದಾರರ ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನ ಉಂಟುಮಾಡುತ್ತದೆ ಎಂಬ ಕಳವಳ ವ್ಯಕ್ತವಾಗಿದ್ದವು. ಆದ್ದರಿಂದ 2020ರಲ್ಲಿ ಭಾರತ ಸರ್ಕಾರ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಅಂಪೂರ್ಣವಾಗಿ ಬ್ಯಾನ್ ಮಾಡುವ ಮೂಲಕ, ಪ್ಲೇ ಸ್ಟೋರ್‌ನಿಂದಲೇ ಡೌನ್‌ಲೋಡ್‌ಗೆ ಅವಕಾಶ ಸಿಗದಂತೆ ಮಾಡಿತು. ಬಳಕೆದಾರರು ಹಾಗೂ ದೇಶದ ದತ್ತಾಂಶ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.












Click it and Unblock the Notifications