ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಮೇ 4: ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತ ಸರಕಾರ ತನ್ನ ಅವಿರತ ಪ್ರಯತ್ನಗಳನ್ನು ಮುಂದುವರಿಸಿದೆ.ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಲಾಗುತ್ತಿದೆ.

ಕೆಲವೇ ದಿನಗಳಲ್ಲಿ ಭಾರತವು ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳವನ್ನು ಸಾಧಿಸಿದೆ ಮತ್ತು ಶೀಘ್ರದಲ್ಲೇ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗಲಿದೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ ಸುಖ್ ಮಾಂಡವಿಯಾ ಅವರು ಇಂದು ಈ ವಿಷಯ ಪ್ರಕಟಿಸಿದ್ದಾರೆ.

2021ರ ಏಪ್ರಿಲ್ 12ರಂದು 37 ಲಕ್ಷ ದಷ್ಟಿದ್ದ ಉತ್ಪಾದನೆಯು 2021ರ ಮೇ 4ರಂದು 1.05 ಕೋಟಿಗೆ ಏರಿದೆ. ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ, ರೆಮ್‌ಡೆಸಿವಿರ್‌ ಉತ್ಪಾದಿಸುವ ಘಟಕಗಳ ಸಂಖ್ಯೆಯೂ ಹೆಚ್ಚಾಗಿದ್ದು, 12 ಏಪ್ರಿಲ್ 2021 ರಂದು 20ರಷ್ಟಿದ್ದ ಘಟಕಗಳ ಸಂಖ್ಯೆ 4 ಮೇ 2021 ರಂದು 57ಕ್ಕೆ ಏರಿದೆ.

Threefold increase in production of Remdesivir in the country: Mansukh Mandaviya

ದೇಶದಲ್ಲಿ ರೆಮ್‌ಡೆಸಿವಿರ್‌ ಕೊರತೆಯನ್ನು ನೀಗಿಸಲು ಭಾರತ ಸರಕಾರವು ಈ ಪ್ರಮುಖ ಔಷಧವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಆರಂಭಿಸಿದೆ. ಇದರ ಭಾಗವಾಗಿ 75,000 ಸೀಸೆಗಳ (ವೈಯಲ್‌) ಮೊದಲ ಕಂತು ಏಪ್ರಿಲ್ 30ರಂದು ಭಾರತಕ್ಕೆ ತಲುಪಿದೆ. ರೆಮ್‌ಡೆಸಿವಿರ್‌ ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದೆ.

4.5 ಲಕ್ಷ ರೆಮ್‌ಡೆಸಿವಿರ್‌ ಬಾಟಲು ಆಮದು ಮಾಡಿಕೊಳ್ಳಲಿರುವ ಭಾರತ4.5 ಲಕ್ಷ ರೆಮ್‌ಡೆಸಿವಿರ್‌ ಬಾಟಲು ಆಮದು ಮಾಡಿಕೊಳ್ಳಲಿರುವ ಭಾರತ

ಭಾರತದಲ್ಲಿ ಔಷಧದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೆಮ್‌ಡೆಸಿವಿರ್‌ ರಫ್ತನ್ನೂ ಸರಕಾರ ನಿಷೇಧಿಸಿದೆ. ಜನಸಾಮಾನ್ಯರು ಕೈಗೆಟಕುವ ದರದಲ್ಲಿ ಈ ಚುಚ್ಚುಮದ್ದನ್ನು ಖರೀದಿಸುವಂತಾಗಲು, ʻಎನ್‌ಪಿಪಿಎʼ ಏಪ್ರಿಲ್17,2021ರಂದು ಔಷಧದ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ನಿಗದಿಪಡಿಸಿದೆ. ಇದರಿಂದಾಗಿ ಎಲ್ಲಾ ಪ್ರಮುಖ ಬ್ರಾಂಡ್‌ಗಳ ವೆಚ್ಚವು ಪ್ರತಿ ಸೀಸೆಗೆ 3500 ರೂ.ಗಿಂತಲೂ ಕಡಿಮೆಯಾಗಿದೆ.

English summary
The production of remdesivir is being increased at a rapid pace in the country. In just a few days, India has achieved 3 times the production capacity of Remedesvir and will soon be able to meet the growing demand. This was announced by the Minister of State for Chemical and Fertilizers Mansukh Mandaviya today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X