ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 3 ವರ್ಷಗಳ ಆಡಳಿತದಲ್ಲಿ ಹೆಚ್ಚಾಯ್ತು ನಿರುದ್ಯೋಗ ಪ್ರಮಾಣ

ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬರುವ ಮುಂಚೆ ಯುಪಿಎ ಸರ್ಕಾರದಲ್ಲಿ ಸುಮಾರು 10 ವರ್ಷಗಳ ಕಾಲ ರಾರಾಜಿಸಿದ್ದ ನಿರುದ್ಯೋಗ ಸಮಸ್ಯೆ ವಿರುದ್ಧ ಸಮರ ಸಾರುವುದಾಗಿ ಹೇಳಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬಂದು ಮೂರು ವರ್ಷಗಳ ನಂತರವೂ ಏರಿಕೆ ಕಂಡಿದೆ.

|
Google Oneindia Kannada News

ನವದೆಹಲಿ, ಮೇ 25: ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದು ಇದೇ ವಾರ ಮೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿದ್ದ ನಿರುದ್ಯೋಗ ಪ್ರಮಾಣ, ಹಾಲಿ ಬಿಜೆಪಿ ಆಡಳಿತದ ಮೂರು ವರ್ಷಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿರುವುದು ಬಹಿರಂಗವಾಗಿದೆ.

ಕಾಂಗ್ರೆಸ್ ನೇತೃತ್ವದ ಕೊನೆಯ ವರ್ಷವಾದ 2013-14ರಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ. 4.9ರಷ್ಟಿತ್ತು. 2015-16ರ ಅಂಕಿ ಅಂಶಗಳ ಪ್ರಕಾರ, ಇದರ ಪ್ರಮಾಣ ಶೇ. 5ರಷ್ಟಿದೆ.[ದೇಶದ ಎಲ್ಲ ಹಳ್ಳಿಗಳಲ್ಲೂ ಮುಂದಿನ ವರ್ಷದ ಹೊತ್ತಿಗೆ ವಿದ್ಯುತ್ ಸಂಪರ್ಕ: ಮೋದಿ]

Three Years Into BJP Government, Unemployment Rate Slightly Up

ಇದು ಅಲ್ಪ ಹೆಚ್ಚಳವೆಂದು ಮೇಲ್ನೋಟಕ್ಕೆ ಅನ್ನಿಸಿದರೂ, ಅಧಿಕಾರಕ್ಕೆ ಬರುವ ಮುಂಚೆ ನಿರುದ್ಯೋಗ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡುತ್ತೇವೆ ಎಂದಿದ್ದ ಬಿಜೆಪಿಯು ಈಗ ಅಧಿಕಾರ ಸ್ವೀಕರಿಸಿದ ಮೂರು ವರ್ಷಗಳಲ್ಲಿ ಮಾಡಿದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತೆ ಮಾಡಿದೆ.[ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು]

2014ರ ಮಹಾ ಚುನಾವಣೆಯ ವೇಳೆ, ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ, ನಿರುದ್ಯೋಗ ನಿವಾರಣೆ, ಸ್ವಚ್ಛ ಭಾರತ, ಉತ್ತಮ ಸಾರಿಗೆ ಸೌಲಭ್ಯ, ಮನೆ ಮನೆಗೆ ವಿದ್ಯುತ್ ಹಾಗೂ ಭಯೋತ್ಪಾದನೆ ವಿರುದ್ಧ ಸಮರ - ಈ ವಿಚಾರಗಳನ್ನು ಪ್ರಮುಖವಾಗಿ ಉಲ್ಲೇಖಿಸಿತ್ತು.

English summary
The unemployment rate in 2015-16 was 5% of the labour force, up from 4.9% in 2013-14, the year before the BJP assumed power. ''The country has been dragged through 10 years of Jobless Growth by the Congress-led UPA Government'',the BJP said in its before 2014 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X