ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ, ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನಾ, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಲ್ಲಿ ಚರ್ಚೆ ಮಾಡಲಾಗಿದೆ.

By ನಿತಿನ್ ಮೆಹ್ತಾ, ಪ್ರಣವ್ ಗುಪ್ತಾ
|
Google Oneindia Kannada News

ದೇಶದಲ್ಲಿ ಮುಂಗಾರು ಇನ್ನೇನು ಕಾಲಿಡಲು ತವಕಿಸುತ್ತಿರುವ ಈ ಹೊತ್ತಿನಲ್ಲಿ ಎಲ್ಲರ ಕಣ್ಣು ಸಹಜವಾಗಿ ಕೃಷಿ ಕ್ಷೇತ್ರದ ಮೇಲೆ ಮತ್ತು ಅನ್ನದಾತ ರೈತನ ಮೇಲಿದೆ. ಈ ವರ್ಷ ಮಳೆ ಹೇಗಿರುತ್ತದೋ, ಕನಿಷ್ಠ ಈ ವರ್ಷವಾದರೂ ರೈತರು ನೀರಿಲ್ಲದೆ, ಬೆಳೆಯಿಲ್ಲದೆ ಆತ್ಮಹತ್ಯೆಗೆ ಪ್ರಯತ್ನ ಪಡದಂತಾದರೆ ಸಾಕು.

ರೈತರ ಅಭ್ಯದಯವನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು 2022ರೊಳಗಾಗಿ ರೈತರ ಆದಾಯ ದುಪ್ಪಟ್ಟಾಗುವಂತೆ ಮಾಡಲಾಗುವುದು ಎಂದು ಕಳೆದ ವರ್ಷವೇ ಘೋಷಿಸಿದ್ದರು. ಇದು ಮೋದಿಯವರ ಮತ್ತೊಂದು ಮಹತ್ವಾಕಾಂಕ್ಷಿ ಗುರಿಯೆಂಬುದರಲ್ಲಿ ಅಚ್ಚರಿಯೇ ಇಲ್ಲ.[ಮೋದಿ ಆಳ್ವಿಕೆಯ 3ವರ್ಷ: ರೈತರ ಕಣ್ಣೀರಿಗೆ ಬೆಲೆಯಿಲ್ಲವೇ, ಕಾಂಗ್ರೆಸ್ ಪ್ರಶ್ನೆ?]

ಆದರೆ, ಇದನ್ನು ಸಾಧಿಸಬೇಕಾದರೆ, ಕೇಂದ್ರ ಸರಕಾರದಿಂದ ಮಾತ್ರವಲ್ಲ, ರೈತರಿಂದ, ಅವರು ಅವಲಂಬಿಸಿರುವ ಉದ್ಯಮೆಗಳಿಂದ ಸಾಕಷ್ಟು ಪ್ರಯತ್ನದ ಅಗತ್ಯವಿದೆ. ದೇಶದ ಜವರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವ ಈ ಸಮಯದಲ್ಲಿ, ಇಡೀ ದೇಶದ ಚಿತ್ರಣವನ್ನೇ ಬದಲಿಸಬಲ್ಲ ಯೋಜನೆಯಿದು.

ಈ ಕನಸು ನನಸಾಗಬೇಕಿದ್ದರೆ, ಕೃಷಿ ಉತ್ಪನ್ನ ಸುಧಾರಿಸಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಏನೇನು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬ ಕುರಿತು ಈ ಲೇಖನದಲ್ಲಿ ವಿವರಣೆ ನೀಡಲಾಗುವುದು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ, ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನಾ, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಲ್ಲಿ ಚರ್ಚೆ ಮಾಡಲಾಗಿದೆ.[ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ]

ಈ ಮಹತ್ವಾಕಾಂಕ್ಷಿ ಯೋಜನೆಗೆ ಸತತ ಎರಡು ವರ್ಷಗಳಿಂದ ಅನುಭವಿಸುತ್ತಿರುವ ಭೀಕರ ಬರಗಾಲ ಭಾರೀ ತೊಡಕಾಗಿ ಪರಿಣಮಿಸಿದೆ. ಇದು ಒಂದು ರೀತಿಯಲ್ಲಿ ಕೃಷಿ ಉತ್ಪನ್ನ, ರೈತರ ಆದಾಯ ಮತ್ತು ದೇಶದ ಆರ್ಥಿಕ ಸ್ಥಿತಿಯ ಮೇಲೂ ಭಾರೀ ದುಷ್ಪರಿಣಾಮ ಬೀರಿದೆ. ಸಾಲದೆಂಬಂತೆ, ಆಲಿಕಲ್ಲು ಹೊಡೆತದಿಂದ ಕೂಡ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ.

ರೈತರ ಆದಾಯಕ್ಕೆ ಹೆಚ್ಚು ಹೊಡೆತ ಬೀಳದಿರಲು

ರೈತರ ಆದಾಯಕ್ಕೆ ಹೆಚ್ಚು ಹೊಡೆತ ಬೀಳದಿರಲು

ಇಂದಿಗೂ ಕೂಡ ಭಾರತದ ಕೃಷಿ ಚಟುವಟಿಕೆ ಮುಂಗಾರಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮುಂಗಾರಿನ ಏರುಪೇರಿನಿಂದಾಗಿ ರೈತನಿಗೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಇಂಥ ನೈಸರ್ಗಿಕ ವಿಪ್ಪತ್ತಿನಿಂದಾಗಿ ರೈತರ ಆದಾಯಕ್ಕೆ ಹೆಚ್ಚು ಹೊಡೆತ ಬೀಳದಂತೆ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆ ಚಾಲ್ತಿಗೆ ತರಲಾಯಿತು.

ಈ ಯೋಜನೆಯ ಪ್ರಗತಿ ಹೇಗಿದೆ

ಈ ಯೋಜನೆಯ ಪ್ರಗತಿ ಹೇಗಿದೆ

ಈ ಯೋಜನೆ 2016ರ ಖಾರಿಫ್ ಬೆಳೆ ಬಂದನಂತರ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯನ್ನು ಜಾರಿಗೆ ತರಲಾಯಿತು. ವಿಮೆಯ ಕವರೇಜ್ ಅನ್ನು ಹೆಚ್ಚಿಸಲಾಯಿತು. ಇದರಿಂದಾಗಿ ಹೆಚ್ಚೆಚ್ಚು ಜನರು ಇದರ ಲಾಭ ಪಡೆದಿದ್ದರಿಂದ ಶೇ.23ರಷ್ಟಿದ್ದ ಬೆಳೆಯ ವಿಮೆ ಶೇ.30ಕ್ಕೆ ಏರಿದೆ. ಅಲ್ಲದೆ, ಈ ಯೋಜನೆಗೆ 5,500 ಕೋಟಿಯಷ್ಟಿದ್ದ ಅನುದಾನವನ್ನು 13 ಸಾವಿರ ಕೋಟಿ ರುಪಾಯಿಗೆ ಏರಿಸಲಾಗಿದೆ.[ಕರ್ನಾಟಕಕ್ಕೆ ಮೇ ತಿಂಗಳಾಂತ್ಯಕ್ಕೆ ಮುಂಗಾರು ಮಳೆ ಆಗಮನ]

ಶೇ.50ರಷ್ಟು ತಲುಪುವ ಗುರಿ

ಶೇ.50ರಷ್ಟು ತಲುಪುವ ಗುರಿ

ಕೇವಲ ಒಂದು ವರ್ಷದಲ್ಲಿ ಈ ಪರಿಯ ಪ್ರಗತಿ ಕಂಡಿರುವುದು ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿ. ಮುಂದಿನ ಎರಡು ವರ್ಷಗಳ ಕಾಲ ಪ್ರತಿವರ್ಷ ಬೆಳೆಯ ವಿಮೆಯನ್ನು ಶೇ.10ಕ್ಕೆ ಹೆಚ್ಚಿಸಲು ಕೇಂದ್ರ ಸರಕಾರ ಯೋಜಿಸಿದ್ದು, 2019ರೊಳಗಾಗಿ ಇದು ಶೇ.50ರಷ್ಟು ತಲುಪುವ ಗುರಿ ಹೊಂದಿದೆ.

ರಾಷ್ಟ್ರೀಯ ಕೃಷಿ ವಿಮೆ ಯೋಜನೆ ಮತ್ತು ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯಡಿಯಲ್ಲಿ 2013ರಲ್ಲಿ ವಿಮೆ ಮಾಡಿಸಿದ್ದ ರೈತರ ಸಂಖ್ಯೆ 12.1 ಕೋಟಿಯಷ್ಟಿತ್ತು, ಇದು 2016ರಲ್ಲಿ 35.5 ಕೋಟಿಯಷ್ಟಾಗಿದೆ. ಅಲ್ಲದೆ, 2015ರಲ್ಲಿ 60,773 ಕೋಟಿ ರುಪಾಯಿನಷ್ಟಿದ್ದ ವಿಮೆ ಮೊತ್ತ 2016ರಲ್ಲಿ 108,005 ಕೋಟಿಯಷ್ಟಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆ

ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆ

ಸಕಾಲದಲ್ಲಿ ಬರುವ ಮುಂಗಾರಿನ ಮೇಲೆ ದೇಶದ ಚಟುವಟಿಕೆಗಳು ಅವಲಂಬಿತವಾಗಿವೆ. ಹಾಗೆಯೆ, ಇದು ದೇಶ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಕೂಡ. ಅಧ್ಯಯನದ ಪ್ರಕಾರ, ದೇಶದ ಶೇ.50ಕ್ಕೂ ಹೆಚ್ಚು ಕೃಷಿ ಭೂಮಿ ಮಳೆ ನೀರಿನ ಮತ್ತು ನೀರಾವರಿಯ ಅಗತ್ಯವಿದೆ.

ರೈತರಿಗೆ ನೀರಾವರಿ ಯೋಜನೆಯ ಲಾಭ ಸಿಗುವಂತೆ ಮಾಡಲು 2015ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆಯನ್ನು ಆರಂಭಿಸಲಾಯಿತು. ಗ್ರಾಮೀಣ ಸಡಕ್ ಯೋಜನೆಯ ಯಶಸ್ಸಿನಂತೆ ಈ ಯೋಜನೆಯ ಲಾಭವನ್ನು ರೈತರು ಪಡೆದುಕೊಳ್ಳುತ್ತಾರೆ ಎಂಬ ಆಶಯ ಸರಕಾರಕ್ಕಿದೆ.

ಕೃಷಿ ಸಿಂಚೈ ಯೋಜನೆಯ ಪ್ರಗತಿ ಹೇಗಿದೆ

ಕೃಷಿ ಸಿಂಚೈ ಯೋಜನೆಯ ಪ್ರಗತಿ ಹೇಗಿದೆ

ಈ ಯೋಜನೆಯಡಿಯಲ್ಲಿ 99 ಪ್ರಮುಖ ಮತ್ತು ಹೆಚ್ಚು ಆದ್ಯತೆ ನೀಡಬೇಕಾಗಿರುವ ನೀರಾವರಿ ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 21 ಯೋಜನೆಗಳನ್ನು 2017ರಲ್ಲಿ ಮುಗಿಸುವ ಉದ್ದೇಶ ಸರಕಾರ ಹೊಂದಿದೆ. ದೇಶದಾದ್ಯಂತ ಸಣ್ಣ ನೀರಾವರಿಯನ್ನು ಜಾರಿಗೆ ತರುವುದಾಗಿದೆ. ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ಗಳನ್ನು ಬಳಸಿ ಅತ್ಯಂತ ಪರಿಣಾಮಕಾರಿಯಾಗಿ ನೀರನ್ನು ಸದ್ಬಳಕೆ ಮಾಡುವುದಕ್ಕೆ ಒತ್ತು ನೀಡಲಾಗಿದೆ.[ಬಡವರ ಮನೆಗೆ ಎಲ್ಪಿಜಿ, ಉಜ್ವಲ ಯೋಜನೆಯ ಸಾಧನೆ]

ಫಲವತ್ತತೆಯನ್ನು ವೃದ್ಧಿಸಲು ಮಾಹಿತಿ

ಫಲವತ್ತತೆಯನ್ನು ವೃದ್ಧಿಸಲು ಮಾಹಿತಿ

ಕೃಷಿ ಭೂಮಿಯೇ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಇರುವ ಭೂಮಿಯನ್ನೇ ಅತ್ಯಂತ ಫಲವತ್ತಾಗಿಸುವ ಉದ್ದೇಶ ಸರಕಾರದ್ದು. ರೈತರಿಗೆ ಬೇಕಾದ ಕೃಷಿ ತಂತ್ರಗಾರಿಕೆ, ಫಲವತ್ತತೆಯನ್ನು ವೃದ್ಧಿಸಲು ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತಿದೆ. ಭೂಮಿಯ ಫಲವತ್ತತೆ ಎಷ್ಟಿದೆ, ಹೇಗೆ ಹೆಚ್ಚಿಸಬೇಕು ಎಂಬಿತ್ಯಾದಿ ವಿವರಗಳಿರುವ ಮಣ್ಣಿನ ಆರೋಗ್ಯ ಕಾರ್ಡಿನಲ್ಲಿ ನೀಡಲಾಗುತ್ತಿದೆ.

ಈ ಮಾಹಿತಿಯ ಆಧಾರದ ಮೇಲೆ ರೈತರು ಎಂಥ ಬೆಳೆಯನ್ನು ಬೆಳೆಯಬೇಕು, ಅದಕ್ಕೆ ಯಾವ ರಸಗೊಬ್ಬರ ಹಾಕಬೇಕು ಇತ್ಯಾದಿ ನಿರ್ಧರಿಸುತ್ತಾರೆ. 2012ರಲ್ಲಿ ಹಲವಾರು ರಾಜ್ಯಗಳು ಇದನ್ನು ಜಾರಿಗೆ ತಂದ ಮೇಲೆ ಇದರ ಫಲಾನುಭವಿಗಳು 5 ಕೋಟಿಯಷ್ಟಿದ್ದರು. 2015ರಲ್ಲಿ ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು, ಮುಂದಿನ ಮೂರು ವರ್ಷಗಳಲ್ಲಿ 14 ಕೋಟಿಗೆ ಹೆಚ್ಚಿಸಲು ಪಣ ತೊಟ್ಟಿದೆ.

ಯೋಜನೆಗಳು ಯಶಸ್ಸು ಕಾಣಬೇಕಾದರೆ

ಯೋಜನೆಗಳು ಯಶಸ್ಸು ಕಾಣಬೇಕಾದರೆ

ನರೇಂದ್ರ ಮೋದಿ ಸರಕಾರ ಆರಂಭಿಸಿರುವ ಈ ಹಲವಾರು ಯೋಜನೆಗಳಿಗೆ ರೈತರು ನೋಂದಾಯಿಸಿಕೊಂಡರೆ ಮಾತ್ರ ಸಾಲದು, ಜನರಿಂದಲೂ ಕೂಡ ಸಕರಾತ್ಮಕವಾಗಿ ಬೆಂಬಲ ಬೇಕಾಗುತ್ತದೆ. ಜೊತೆಗೆ ಸರಕಾರಿ ಅಧಿಕಾರಿಗಳು ಕೂಡ ಫಲಾನುಭವಿಗಳು ಈ ಯೋಜನೆಗಳನ್ನು ಜಾರಿಗೆ ತಂದಿದ್ದಾರೋ ಇಲ್ಲವೋ ಎಂಬುದನ್ನು ಸತತವಾಗಿ ಗಮನಿಸಬೇಕಾಗುತ್ತದೆ. ಅಲ್ಲದೆ, ಮಾರುಕಟ್ಟೆ ಏರುಪೇರಾದಾಗ ಕೂಡ ರೈತರು ಆರ್ಥಿಕವಾಗಿ ಸುರಕ್ಷಿತವಾಗಿರುವಂತೆ ಸಕರಾರ ಕ್ರಮ ತೆಗೆದುಕೊಳ್ಳಬೇಕು.

(ಪ್ರಣವ್ ಗುಪ್ತಾ ಅವರು ಸ್ವತಂತ್ರ ಸಂಶೋದಕರು. ನಿತಿನ್ ಮೆಹ್ತಾ ಅವರು ರಣ್‌ನೀತಿ ಕನ್ಸಲ್ಟಿಂಗ್ ಮತ್ತು ಸಂಶೋಧನೆ ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದಾರೆ.)

English summary
Prime Minister Narendra Modi had declared that the government seeks to double farmer incomes by 2022.There is little doubt that this is an ambitious objective and requires a multi-pronged strategy by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X