ಛತ್ತೀಸ್ ಗಢ: ಜಂಟಿ ಕಾರ್ಯಾಚರಣೆಯಲ್ಲಿ 3 ಮೋಸ್ಟ್ ವಾಂಟೆಡ್ ನಕ್ಸಲರ ಹತ್ಯೆ
ರಂಜ್ನಂದ್ ಗಾಂವ್(ಚತ್ತೀಸ್ ಗಢ), ಅಕ್ಟೋಬರ್ 26: ಛತ್ತೀಸ್ ಗಢ ಪೊಲೀಸ್ ಮತ್ತು 44 ನೇ ಬೆಟಾಲಿಯನ್ ನ ಇಂಡೋ-ಟಿಬೇಟಿಯನ್ ಗಡಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರನ್ನು ನಿನ್ನೆ(ಅ.25) ತಡರಾತ್ರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಮೂವರು ನಕ್ಸಲರೂ ಬಾಸ್ಟರ್ ನಿವಾಸಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಮೂವರೂ ಪೊಲೀಸರ ಮೋಸ್ಟ್ ವಾಂಟೆಂಡ್ ಲಿಸ್ಟ್ ನಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ 13 ಲಕ್ಷ ರೂ. ವರೆಗೂ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಣೆ ಮಾಡಿತ್ತು.

ದಾಳಿಯ ನಂತರ ನಕ್ಸಲರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications