ಮುಂಬೈ ವಿಮಾನ ನಿಲ್ದಾಣಕ್ಕೆ ಭಯೋತ್ಪಾದಕನಿಂದ ಬೆದರಿಕೆ ಕರೆ
ಮುಂಬೈ, ಫೆಬ್ರವರಿ 7: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಎಂದು ಪರಿಚಯಿಸಿಕೊಂಡು ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಸೋಮವಾರ ಮುಂಬೈ ವಿಮಾನ ನಿಲ್ದಾಣಕ್ಕೆ ರಾತ್ರಿ 10 ಗಂಟೆಗೆ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಇರ್ಫಾನ್ ಅಹ್ಮದ್ ಶೇಖ್ ಎಂದು ಪರಿಚಯಿಸಿಕೊಂಡು ತಾನು ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯ ಎಂದು ಹೇಳಿದ್ದಾನೆ. ತನ್ನ ಪರಿಚಯವನ್ನು ನೀಡಿದ ನಂತರ, ಕರೆ ಮಾಡಿದವರು ಕೆಲವು ಕೋಡ್ ಪದಗಳನ್ನು ಬಳಸಿ ಅನುಮಾನಾಸ್ಪದ ವಿಷಯಗಳ ಬಗ್ಗೆ ಮಾತನಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣ ಮುಂಬೈ ಪೊಲೀಸರಿಗೆ ಕರೆ ಕುರಿತು ಮಾಹಿತಿ ನೀಡಿದ್ದು, ಪೊಲೀಸರು ಆ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 505 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಮುಂಬೈ ಪೊಲೀಸರು ಮತ್ತು ಇತರ ತನಿಖಾ ದಳಗಳು ಅಲರ್ಟ್ ಆಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮುಂಬೈನ ಸಹರ್ ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (1) ಅಡಿಯಲ್ಲಿ ಅಪರಿಚಿತ ಶಂಕಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 3ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ತಾಲಿಬಾನಿ ಸದಸ್ಯ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಬಂದಿತ್ತು.
ಜನವರಿಯಲ್ಲಿ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೂ ಬೆದರಿಕೆ ಕರೆ ಬಂದಿತ್ತು. ಅದರಲ್ಲಿ ಅಪರಿಚಿತ ಕರೆ ಮಾಡಿದವರು ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಮುಂಬೈ ಪೊಲೀಸರ ಪ್ರಕಾರ, ಶಾಲೆಯ ಸ್ಥಿರ ದೂರವಾಣಿಗೆ ಸಂಜೆ 4:30 ಕ್ಕೆ ಕರೆ ಬಂದಿದೆ. ಕರೆ ಮಾಡಿದವರು ಶಾಲೆಯಲ್ಲಿ ಟೈಮ್ ಬಾಂಬ್ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು.












Click it and Unblock the Notifications