ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾಬಂಧನಕ್ಕೆ ಚಿನ್ನದ ಸ್ವೀಟು! ಕೆಜಿಗೆ ಬರೋಬ್ಬರಿ 9000 ರೂ.!

|
Google Oneindia Kannada News

ಸೂರತ್, ಆಗಸ್ಟ್ 20: ರಕ್ಷಾಬಂಧನ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಆಗಸ್ಟ್ 26 ರಂದು ಭಾನುವಾರ ನಡೆಯಲಿರುವ ರಕ್ಷಾಬಂಧನಕ್ಕೆ ಗುಜರಾತಿನ ಸೂರತ್ ನಲ್ಲಿ ವಿಶೇಷ ಸ್ವೀಟ್ ವೊಂದು ತಯಾರಾಗಿದೆ.

ಈ ಸ್ವೀಟಿನ ಬೆಲೆ ಕೆಜಿಗೆ ಬರೋಬ್ಬರಿ 9000 ರೂ. ಅಯ್ಯೋ, ಅದೇನು ಚಿನ್ನಾನಾ ಆ ಪರಿ ಕಾಸು ಕೊಡೋಕೆ, ಅಂದ್ರಾ? ನಿಮ್ಮ ಮಾತು 100% ಸತ್ಯ! ಈ ಸ್ವೀಟಿನ ಮೇಲೆ ಚಿನ್ನದ ಲೇಪನವಿರುವರಿಂದಲೇ ಈ ಸ್ವೀಟಿಗೆ ಈ ಪರಿ ಬೆಲೆಯಂತೆ.

ಬೆಲೆಯೇನೋ ಈ ಪರಿ. ಹಾಗಂತ ಬೇಡಿಕೆ ಕಡಿಮೆಯಾ ಅಂದ್ರೆ ಖಂಡಿತ ಇಲ್ಲ. ರಕ್ಷಾಬಂಧನದ ಸಮಯದಲ್ಲಿ '24 ಕ್ಯಾರೆಟ್ ಮಿಠಾಯಿ ಮ್ಯಾಜಿಕ್' ಎಂಬ ಈ ಸಿಹಿ ಬಹಳ ಶ್ರೇಷ್ಠವಂತೆ. ಆದ್ದರಿಂದ ರಕ್ಷಾಬಂಧನದ ಸಮಯದಲ್ಲಿ ಸೂರತ್ತಿನ ಅಂಗಡಿಯೊಂದರಲ್ಲಿ ಈ ಸ್ವೀಟಿಗಾಗಿ ಜನರು ಸಾಲು ಸಾಲಾಗಿ ನಿಂತು ಕಾಯುತ್ತಾರಂತೆ!

ಶಿಡ್ಲಘಟ್ಟ ಮೇಲೂರಿನ ಕಾಮಧೇನು ಸ್ವೀಟ್ಸ್ ಚೌಚೌ ಅಮೆರಿಕದವರೆಗೆ ಫೇಮಸ್ ಶಿಡ್ಲಘಟ್ಟ ಮೇಲೂರಿನ ಕಾಮಧೇನು ಸ್ವೀಟ್ಸ್ ಚೌಚೌ ಅಮೆರಿಕದವರೆಗೆ ಫೇಮಸ್

ಈ ಸ್ವೀಟು ತಿನ್ನುವುದಕ್ಕೂ ಬಲು ರುಚಿ, ಜೊತೆಗೆ ಇದು ದೇಹಕ್ಕೂ ಒಳ್ಳೆಯದಂತೆ. 'ಚಿನ್ನದಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಎಂಬುದು ತಿಳಿದಾಗ ಇಂಥದೂಂದು ಸ್ವೀಟ್ ಮಾಡುವ ಯೋಚನೆ ಬಂತು. ಅದನ್ನು ರಾಖಿ ಹಬ್ಬದ ಸಮಯದಲ್ಲಿ ಜನರು ಆಸ್ಥೆಯಿಂದ ಖರೀದಿಸುವುದು ಸಂತಸ ತಂದಿದೆ' ಎನ್ನುತ್ತಾರೆ ಈ ಅಂಗಡಿಯ ಮಾಲೀಕ.

This shop in Gujarat sells sweets at Rs 9,000 per kg!

ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ

ಗೋಲ್ಡ್ ಸ್ವೀಟ್ ಎಂದೂ ಕರೆಯಲಾಗುವ ಈ '24 ಕ್ಯಾರೆಟ್ ಮಿಠಾಯಿ ಮ್ಯಾಜಿಕ್' ಅನ್ನು ಡ್ರೈ ಫ್ರೂಟ್ಸ್ ನಿಂದ ಮಾಡಲಾಗುತ್ತದೆಯಂತೆ.

English summary
Any Indian festival is incomplete without sweets! With the festival of Raksha Bandhan around the corner shops are stacking a variety of these delicacies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X