ಗಾನಕೋಗಿಲೆಗೆ ಶಾರೂಖ್ ಖಾನ್ ಅಂತಿಮ ನಮನ ರೀತಿಗೆ ನೆಟ್ಟಿಗರು ಫಿದಾ

ನವದೆಹಲಿ, ಫೆಬ್ರವರಿ 7:ಗಾನ ಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲತಾ ಮಂಗೇಶ್ಕರ್ ಅವರ ಪಾರ್ಥೀವ ಶರೀರದ ಮುಂದೆ ಶಾರೂಖ್ ಖಾನ್ ಹಾಗೂ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ನಮಿಸುತ್ತಿರುವ ಚಿತ್ರ ಈಗ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

ಈ ಚಿತ್ರವನ್ನು ನೋಡಿ ಇದು ನಿಜವಾದ ಭಾರತ ಈ ಮೂಲಕ ಶಾರೂಖ್ ಖಾನ್ ಸಾಕಷ್ಟು ಗೌರವ ಸಂಪಾದಿಸಿದ್ದಾರೆ, ಇನ್ನಷ್ಟು ಪ್ರೀತಿಗೆ ಪಾತ್ರರು ಎಂದು ನೆಟ್ಟಿಗರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

This Is Real India: Shah Rukh Khan Offers Dua For Lata Mangeshkar At Her Funeral

ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದಿದ್ದರು. ದೇಶದ ಪ್ರಧಾನಿ ಸೇರಿದಂತೆ ರಾಜಕೀಯ ಮುಖಂಡರು, ಚಿತ್ರರಂಗದ ಕಲಾವಿದರು, ಕ್ರಿಕೆಟ್ ದಿಗ್ಗಜರು, ಕ್ರೀಡಾಪಟುಗಳು ಹೀಗೆ ಹಲವರು ಶಿವಾಜಿ ಪಾರ್ಕ್ ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದರು.

ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಶಿವಾಜಿ ಪಾರ್ಕ್ ಗೆ ಬಂದ ಶಾರೂಕ್ ಖಾನ್ ಎಲ್ಲರಂತೆ ಪುಷ್ಪಗುಚ್ಛವಿರಿಸಿ ಎರಡೂ ಕೈಗಳನ್ನು ಮೇಲೆತ್ತಿ ದುವಾ ಮಾಡಿದ್ದರು(ಇಸ್ಲಾಂ ಧರ್ಮದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿ), ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಹಿಂದೂ ಸಂಪ್ರದಾಯದ ಪ್ರಕಾರ ಕೈಮುಗಿದಿದ್ದರು. ಇದು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಲತಾ ಮಂಗೇಶ್ಕರ್​ ಅವರು ಭಾನುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯುಮೋನಿಯಾದಿಂದ ಅವರು ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೀಗಾಗಿ, ಲತಾ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಿಧನ ಹೊಂದಿದರು.

ಆ ಬಳಿಕ ಲತಾ ಮಂಗೇಶ್ಕರ್​ ದೇಹವನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಆ ಬಳಿಕ ವಿಶೇಷ ವಾಹನದಲ್ಲಿ ಲತಾ ಮಂಗೇಶ್ಕರ್​ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್​ಗೆ ಕರೆತರಲಾಯಿತು. ದಾರಿಯುದ್ದಕ್ಕೂ ಲತಾ ಅವರ ಅಪಾರ ಅಭಿಮಾನಿಗಳು ವಾಹನವನ್ನು ಹಿಂಬಾಲಿಸಿದರು. ಇಡೀ ವಾಹನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಲತಾ ಅವರನ್ನು ಬೀಳ್ಕೊಡಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ಗಾಯಕಿಗೆ ದುಃಖದ ವಿದಾಯ ಹೇಳಿದರು.

8 ಅರ್ಚಕರು ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಲತಾ ಸಹೋದರ ಹೃದಯನಾಥ್​ ಅವರ ಮಗ ವಿಧಿ ವಿಧಾನಗಳು ಪೂರ್ಣಗೊಳಿಸಿದರು. ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಎಲ್ಲರೂ ಲತಾಗೆ ದುಃಖದ ವಿದಾಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+