Get Updates
Get notified of breaking news, exclusive insights, and must-see stories!

Maharashtra Assembly Election 2024: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಈ ಕಾರಣಕ್ಕೆ ಸಿಕ್ತು ಬಿಗ್‌ಬೂಸ್ಟ್‌, ಕಾಂಗ್ರೆಸ್‌ಗೆ ಶಾಕ್

ಮುಂಬೈ, ಅಕ್ಟೋಬರ್ 11: ಮಹಾರಾಷ್ಟ್ರದಲ್ಲಿ ಇದೀಗ ಬಿಜೆಪಿ ಹಾಗೂ ಬಿಜೆಪಿ ಮಿತ್ರ ಪಕ್ಷಗಳು ಫುಲ್‌ ಆಕ್ಟಿವ್ ಆಗಿವೆ. ಅಷ್ಟೇ ಅಲ್ಲ ಬಿಜೆಪಿ ಸೇರಿದಂತೆ ಅದರ ಮಿತ್ರಪಕ್ಷಗಳು ಜಿಗಿಜಿಯುತ್ತಿವೆಯಂತೆ. ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳು ಬಿಗ್‌ ಫೈಟ್‌ ಕೊಡ್ತಿವೆ. ಇಷ್ಟಾದರೂ ಬಿಜೆಪಿ ಫುಲ್‌ ಕೂಲ್‌ ಕೂಲ್‌ ಮೂಡ್‌ನಲ್ಲಿ ಇದ್ಯಂತೆ ಇದಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

ಈಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮಕಾಡೆ ಮಲಗಿದೆ. ಬಿಜೆಪಿ ಮೂರನೇ ಬಾರಿ ಹರಿಯಾಣದಲ್ಲಿ ಅಧಿಕಾರದ ಗದ್ದುಗೆ ಹೇರಿದೆ. ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಹೇರುವ ಸಾಧ್ಯತೆ ಅತ್ಯಂತ ವಿರಳ ಎನ್ನಲಾಗಿತ್ತು. ಈ ಎಲ್ಲ ಲೆಕ್ಕಾಚಾರವೂ ತಲೆಕೆಳಗಾಗಿದೆ. ಈ ಬೆಳವಣಿಗೆ ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು, ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು ಚಿಲ್‌ ಮೂಡ್‌ನಲ್ಲಿವೆಯಂತೆ.

This is a big boost for the BJP in Maharashtra and another shock for the Congress

ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಅಧಿಕಾರ ನಡೆಸುತ್ತಿದೆ. ಬಿಜೆಪಿ ಪ್ರಧಾನ ಪಕ್ಷವಾಗಿದೆ. ಹೀಗಾಗಿ, ಹರಿಯಾಣದ ಚುನಾವಣೆ ಫಲಿತಾಂಶ ಮಹಾರಾಷ್ಟ್ರದ ಮೇಲೂ ಪರಿಣಾಮ ಬೀರಲಿದೆ ಎನ್ನುವ ಸಂತೋಷದಲ್ಲಿ ಬಿಜೆಪಿ ಬಣ ಇದೆ. ಹರಿಯಾಣದ ಹ್ಯಾಟ್ರಿಕ್‌ ಗೆಲುವಿನ ನಂತರ ಬಿಜೆಪಿಗೆ ಹೊಸ ಶಕ್ತಿ ಬಂದಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ನಿರೀಕ್ಷಿತ ಪ್ರಮಾಣದ ಸೀಟುಗಳನ್ನು ಗೆದ್ದಿರಲಿಲ್ಲ. ಇದೀಗ ಹರಿಯಾಣದ ಗೆಲುವು ಬಿಜೆಪಿ ಪಾಳಯದಲ್ಲಿ ಹೊಸ ಚೈತನ್ಯವನ್ನೇ ಮೂಡಿಸಿದೆ. ಇದಕ್ಕೆ ಮಹಾರಾಷ್ಟ್ರದ ಬಿಜೆಪಿ ನಾಯಕರ ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗಿದೆ. ನಕಲಿ ನಿರೂಪಣೆ ಹಾಗೂ ಅಪಪ್ರಚಾರ ವರ್ಕ್‌ಔಟ್‌ ಆಗಲ್ಲ ಎಂದು ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಹೇಳಿವೆ.

ಇನ್ನು ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳ ಒಕ್ಕೂಟವು ಹರಿಯಾಣದ ಚುನಾವಣಾ ಫಲಿತಾಂಶವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಪ್ರತಿಪಾದಿಸಿವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳ ಒಕ್ಕೂಟವು ಸೀಟು ಹಂಚಿಕೆ ವಿಷಯವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಿವೆ. ಮಹಾ ವಿಕಾಸ್ ಅಘಾಡಿ ಅಂತಿಮ ಸುತ್ತಿನ ಮಾತುಕತೆಯನ್ನು ಮುಂದುವರಿಸಿದೆ. ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು (ಮೈತ್ರಿ ಪಕ್ಷದಿಂದ) ಎಂದು ಹೇಳಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶವು ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.

This is a big boost for the BJP in Maharashtra and another shock for the Congress

ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪೈಪೋಟಿ: ಇನ್ನು ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳಿಗೆ ಭಾರೀ ಪೈಪೋಟಿಯನ್ನೇ ನೀಡಿದ್ದವು. ಮಹಾರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಲ್ಪ ಪ್ರಮಾಣದ ಆಡಳಿತ ವಿರೋಧಿ ಅಲೆ ಇದೆ. ವಿವಿಧ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆದಿವೆ. ಛತ್ರಪತಿ ಶಿವಾಜಿ ಪ್ರತಿಮೆ ಕುಸಿತವಾಗಿರುವುದು ಸಹ ಚುನಾವಣೆ ವಿಷಯವಾಗಿದೆ. ಬಿಜೆಪಿ - ಕಾಂಗ್ರೆಸ್‌ನ ಮೈತ್ರಿ ಪಕ್ಷಗಳಲ್ಲಿ ವೈಮನಸ್ಸು ಇದೆ. ಈ ಎಲ್ಲ ಕಾರಣಗಳಿಂದ ಮಹಾರಾಷ್ಟ್ರ ಚುನಾವಣೆ ಕುತೂಹಲ ಮೂಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+