ಗೊತ್ತು, ಗುರಿಯಿಲ್ಲದ ಕಾಂಗ್ರೆಸ್ ಗೆ ಗುಜರಾತ್ ಚುನಾವಣೆಯೇ ಪಾಠ!

Posted By:
Subscribe to Oneindia Kannada

ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿತು. ಅಹ್ಮದ್ ಪಟೇಲ್ ರ ಗೆಲುವನ್ನು ಕಾಂಗ್ರೆಸ್ ನ ಅಭೂತ ಪೂರ್ವ ವಿಜಯ ಅಂತಲೂ, ಬಿಜೆಪಿಯ ಹಿನ್ನಡೆ ಅಂತಲೂ ವಿಶ್ಲೇಷಿಸಲಾಗುತ್ತಿದೆ. ಸ್ವತಃ ಕಾಂಗ್ರೆಸ್ ನ ನಾಯಕರು, ಇದು ಗುಜರಾತ್ ಜನತೆಯ ಗೆಲುವು ಎಂದಿದ್ದಾರೆ.

ಶಾಸಕರು ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುವ ಈ ಚುನಾವಣೆ ಅದು ಹೇಗೆ ಗುಜರಾತ್ ಜನತೆಯ ಗೆಲುವು ಎಂಬುದನ್ನು ವಿವರಿಸುವವರು ಯಾರು? ಈ ಚುನಾವಣೆ ವಿಚಾರವಾಗಿ ಬಿಜೆಪಿ ಅನುಸರಿಸಿದ ರಣತಂತ್ರ, ದಾರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಕಾಂಗ್ರೆಸ್ ಅಂತೂ ಇಡೀ ದೇಶಕ್ಕೆ ಕೇಳುವಂತೆ ಏದುಸಿರು ಬಿಡುತ್ತಾ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ.

ಅಹಮದ್ ಪಟೇಲ್ ಗೆಲುವು, ಡಿಕೆಶಿ ಹೇಳಿದ್ದೇನು?

ಇಂಥ ಅದೆಷ್ಟೋ ಚುನಾವಣೆಗಳನ್ನು ಕಂಡಿರುವ ಪುರಾತನ ಪಕ್ಷ ಕಾಂಗ್ರೆಸ್ ಗೆ ಇಂಥ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ಅನುಸರಿಸುವ ತಂತ್ರವೋ- ಕುತಂತ್ರವೋ ತಿಳಿಯದ್ದೇನಲ್ಲ. ಆದರೆ ಈ ಬಾರಿ ಅಂಥ ಎಲ್ಲ ತಂತ್ರಗಳನ್ನು ಮುರಿಯಲು ಕಾಂಗ್ರೆಸ್ ಹೆಣಗಿದ ರೀತಿಯಲ್ಲೇ ಒಂದು ಎಚ್ಚರಿಕೆ ಇದೆ. ಇತ್ತೀಚಿನ ಘಟನೆಗಳು ಕಾಂಗ್ರೆಸ್ ಗೆ ಹೇಗೆ ಪಾಠ ಎಂಬುದರ ವಿಶ್ಲೇಷಣೆ ಇಲ್ಲಿದೆ.

ನನ್ನ ರಾಜಕೀಯ ಜೀವನದಲ್ಲೇ ಇಂಥ ಚುನಾವಣೆ ಎದುರಿಸಿರಲಿಲ್ಲ

ನನ್ನ ರಾಜಕೀಯ ಜೀವನದಲ್ಲೇ ಇಂಥ ಚುನಾವಣೆ ಎದುರಿಸಿರಲಿಲ್ಲ

ಕಾಂಗ್ರೆಸ್ ಎಂಬ ಪುರಾತನ ಪಕ್ಷದ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್ ಮಂಗಳವಾರ ಮಾಧ್ಯಮದ ಎದುರು ನೀಡಿದ ಹೇಳಿಕೆ ಏನು ಗೊತ್ತಾ? "ನನ್ನ ರಾಜಕೀಯ ಜೀವನದಲ್ಲೇ ಇಂಥ ಚುನಾವಣೆ ಉದ್ವಿಗ್ನತೆ ಎದುರಿಸಿರಲಿಲ್ಲ." ಅಗತ್ಯ ಸಂಖ್ಯೆಯ ಶಾಸಕರ ಬಲವಿದ್ದೂ, ಕೊನೆ ಕ್ಷಣದವರೆಗೆ ಏನು ಆಗಬಹುದು ಎಂಬ ಆತಂಕದಲ್ಲಿ ಬಂದ ಹೇಳಿಕೆ ಅದು.

ಅಂದರೆ ಕಾಂಗ್ರೆಸ್ ನಲ್ಲಿ ಸ್ವಂತ ಪಕ್ಷದವರನ್ನು ಉಳಿಸಿಕೊಳ್ಳಲು ಹೆಣಗಬೇಕಾದ ಪರಿಸ್ಥಿತಿ ಇದು.

ಇಬ್ಬರು ಶಾಸಕರು 'ಕೈ' ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?

ಜೈರಾಂ ರಮೇಶ್ ಹೇಳಿಕೆ

ಜೈರಾಂ ರಮೇಶ್ ಹೇಳಿಕೆ

ಕಾಂಗ್ರೆಸ್ ಈಗ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತದೆ. ಹಳೇ ಘೋಷವಾಕ್ಯ, ಆಲೋಚನೆ, ತಂತ್ರಗಳನ್ನು ಪಕ್ಕಕ್ಕಿಟ್ಟು ಹೊಸದಾಗಿ ಪಕ್ಷ ಚಿಂತನೆ ನಡೆಸಲಿಲ್ಲ ಅಂದರೆ ಪಕ್ಷದ ಉಳಿವೇ ಕಷ್ಟ ಎಂಬ ಹೇಳಿಕೆ ನೀಡಿದ್ದಾರೆ ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್. ಅವರ ಮಾತಲ್ಲಿನ ಆತಂಕಕ್ಕೆ ಕನ್ನಡಿ ಎಂಬಂತೆ ಗುಜರಾತ್ ಚುನಾವಣೆ ಸನ್ನಿವೇಶ ಕಣ್ಣೆದುರು ಇದೆ.

ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ: ಜೈರಾಂ ರಮೇಶ್

ಮಣಿಪುರ, ಗೋವಾ, ಬಿಹಾರವೇ ಉದಾಹರಣೆ

ಮಣಿಪುರ, ಗೋವಾ, ಬಿಹಾರವೇ ಉದಾಹರಣೆ

ಕಾಂಗ್ರೆಸ್ ನಲ್ಲಿ ಆಕ್ರಮಣಕಾರಿ ಧೋರಣೆಯ ನಾಯಕರಿಲ್ಲ ಎಂಬುದಕ್ಕೆ ಮಣಿಪುರ ಹಾಗೂ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದೇ ಸಾಕ್ಷಿ. ಎರಡೂ ಕಡೆ ಅಧಿಕಾರ ಹಿಡಿಯುವ ಅವಕಾಶ ಕಳೆದುಕೊಂಡ ಕಾಂಗ್ರೆಸ್, ಬಿಹಾರದಲ್ಲೂ ಅಂಥದ್ದೇ ಆಲಸ್ಯ ಪ್ರದರ್ಶಿಸಿತು. ಸ್ಥಳೀಯ ನಾಯಕರಿಗೆ ಹೈಕಮಾಂಡ್ ಮೇಲೆ ಸಿಟ್ಟಿಗೆ ಕಾರಣವಾಯಿತು.

ರಾಹುಲ್ ಬಗ್ಗೆ ಅಸಮಾಧಾನ

ರಾಹುಲ್ ಬಗ್ಗೆ ಅಸಮಾಧಾನ

ದೀರ್ಘ ಕಾಲ ಅಧಿಕಾರ ಇಲ್ಲದೆ, ಅಧಿಕಾರ ಸಿಗುವ ಸಾಧ್ಯತೆಗಳು ಇಲ್ಲದೆ ಅಂಥ ಪಕ್ಷದಲ್ಲಿ ಮಹತ್ವಾಕಾಂಕ್ಶಿ ನಾಯಕರು ಉಳಿಯುವುದಿಲ್ಲ. ಕಾಂಗ್ರೆಸ್ ನ ಸ್ಥಿತಿ ಹಾಗೇ ಆಗಿದೆ. ರಾಹುಲ್ ಗಾಂಧಿ ಅವರಿಗೆ ಇರುವ ರಾಜಕಾರಣದ ಪರಿಕಲ್ಪನೆಗೂ ರಾಜ್ಯಗಳಲ್ಲಿ ಸ್ಥಳೀಯವಾಗಿ ಇರುವ ಸನ್ನಿವೇಶಕ್ಕೂ ವ್ಯತ್ಯಾಸವಿದೆ. ಜತೆಗೆ ಚರ್ಚೆಗೆ, ದುಃಖ- ದುಮ್ಮಾನ ಹೇಳಿಕೊಳ್ಳುವುದಕ್ಕೂ ಸಿಗದ ರಾಹುಲ್ ಬಗ್ಗೆ ಅಸಮಾಧಾನ ಇದೆ.

ಆಕ್ರಮಣಕಾರಿ ನಾಯಕತ್ವ ಬೇಕು

ಆಕ್ರಮಣಕಾರಿ ನಾಯಕತ್ವ ಬೇಕು

ಕರ್ನಾಟಕದ ಕಾಂಗ್ರೆಸ್ ನಾಯಕತ್ವ ಖಂಡಿತವಾಗಿಯೂ ಉಳಿದ ರಾಜ್ಯ ಹಾಗೂ ದೇಶಕ್ಕೇ ಮಾದರಿ. ಕುಮಾರಸ್ವಾಮಿ, ಯಡಿಯೂರಪ್ಪನವರಂಥ ಆಕ್ರಮಣಕಾರಿ ನಾಯಕರ ಎದುರು ಸಿದ್ದರಾಮಯ್ಯ ಇರುವ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮುಂದೆ ಬಿಜೆಪಿ ಥಂಡಾ ಹೊಡೆದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರಂಥ ಆಕ್ರಮಣಕಾರಿ ನಾಯಕರೇ ರಾಷ್ಟ್ರ ಮಟ್ಟದಲ್ಲೂ ಈಗ ಕಾಂಗ್ರೆಸ್ ಗೆ ಅಗತ್ಯವಿದೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಗುರಿಯೇ ಇಲ್ಲ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಗುರಿಯೇ ಇಲ್ಲ

ಹಾಗೆ ನೋಡಿದರೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಗುರಿಯೇ ಇಲ್ಲದಂತಾಗಿದೆ. ಅಂದರೆ ಜನರ ಬಳಿ ಹೇಳಿಕೊಳ್ಳುವುದಕ್ಕೆ, ಕನಿಷ್ಠ ಪಕ್ಷ ತೋರಿಕೆಗೂ ಗುರಿಯಿಲ್ಲದಂತಾಗಿದೆ. ಬಿಜೆಪಿಯವರು ಗೋಹತ್ಯೆ ನಿಷೇಧ, ಭಾರತದ ಅಭಿವೃದ್ಧಿ, ಅದೆಲ್ಲಕ್ಕಿಂತ ಕಾಂಗ್ರೆಸ್ ಮುಕ್ತ ಭಾರತ ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ನ ಗುರಿಯೇನು ಅಂತ ನೋಡಿದರೆ ಅಥವಾ ಕೇಳಿದರೆ ಏನೂ ಇಲ್ಲ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳುವುದಾದರೆ ಕನ್ನಡ, ಕನ್ನಡ ಬಾವುಟ, ಮೌಢ್ಯ ನಿಷೇಧ ಅದೂ ಇದೂ ಅಂತ ಒಂದು ಗುರಿಯೊಂದಿಗೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress candidate Ahmed Patel tried hard to win Gujarat rajyasabha election. There Congress has sufficient number of MLA's, but still faced lot of tension. So, this is the time to Congress retrospection.
Please Wait while comments are loading...