• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಇಲ್ಲದೆಯೇ ಕೊರೊನಾ ಅಂತ್ಯವಾಗಬಲ್ಲದೇ? ಹೇಗೆ?: ಕುತೂಹಲಕಾರಿ ಸಂಗತಿ

|
Google Oneindia Kannada News

ನವದೆಹಲಿ, ಜುಲೈ 8: ಕೊವಿಡ್ 19 ರೋಗ ಎಂದು ಕೊನೆಯಾಗುತ್ತೆ? ಎಂಬುದು ಎಲ್ಲರ ಮನಸ್ಸಿನಲ್ಲಿರುವ ದುಗುಡವಾಗಿದೆ. ಆದರೆ ಇದಕ್ಕೆ ಉತ್ತರ ನೀಡುವುದು ಅಷ್ಟು ಸುಲಭದ ಮಾತಲ್ಲ.

ಆದರೆ ಲಸಿಕೆ ಕಂಡು ಹಿಡಿದ ಬಳಿಕ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂಬುದು ಸಂಶೋಧಕರು ಮತ್ತು ಜನ ಸಾಮಾನ್ಯರು ಇಬ್ಬರು ಹೇಳುವ ಸಾಮಾನ್ಯ ಉತ್ತರ.

ಮುಂದಿನ ಕೆಲವು ವರ್ಷಗಳ ಕಾಲ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಜನರ ಗತಿ ಏನು? 40 ವರ್ಷ ಕಳೆದರೂ ಎಚ್‌ಐವಿ, ಏಡ್ಸನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ.

ದೇಶದ ಮೊದಲ ಕೊರೊನಾವೈರಸ್ ಸಂಭಾವ್ಯ ಲಸಿಕೆ ' ಕೊವ್ಯಾಕ್ಸಿನ್ 'ಸದ್ಯದಲ್ಲೇ 375 ಜನರ ಮೇಲೆ ಪ್ರಯೋಗದೇಶದ ಮೊದಲ ಕೊರೊನಾವೈರಸ್ ಸಂಭಾವ್ಯ ಲಸಿಕೆ ' ಕೊವ್ಯಾಕ್ಸಿನ್ 'ಸದ್ಯದಲ್ಲೇ 375 ಜನರ ಮೇಲೆ ಪ್ರಯೋಗ

ಒಂದೊಮ್ಮೆ ಲಸಿಕೆ ಕಂಡು ಹಿಡಿದರೂ ಕೂಡ ಅದು ಶೇ.100 ರಷ್ಟು ಪರಿಣಾಮಕಾರಿಯಾಗಿರುತ್ತದೆಯೇ? ಅದಕ್ಕೂ ಯಾರ ಬಳಿಯೂ ಉತ್ತರವಿಲ್ಲ. ಆದರೆ ಸಂಶೋಧಕರು ಹೇಳಿರುವ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಆರು ತಿಂಗಳಿಗೆ ಸ್ವರೂಪ ಬದಲಾವಣೆ

ಆರು ತಿಂಗಳಿಗೆ ಸ್ವರೂಪ ಬದಲಾವಣೆ

ಕೊರೊನಾ ವೈರಸ್​ ಆರು ತಿಂಗಳ ಅವಧಿಯಲ್ಲಿ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಒಮ್ಮೆ ಲಸಿಕೆ ಸಜ್ಜಾದರೂ, ವರ್ಷದ ಹೊತ್ತಿಗೆ ಅದೇ ವೈರಸ್​ ಮೇಲೆ ಔಷಧ ನಿಷ್ಪ್ರಯೋಜಕ ಎನಿಸಬಹುದು. ಆಗ ಪ್ರತಿ ವರ್ಷವೂ ಲಸಿಕೆ ತೆಗೆದುಕೊಳ್ಳಬೇಕಾಗಬಹುದು. ಏಕೆಂದರೆ, ವಿಷಮ ಶೀತಜ್ವರ ತಡೆಯಲು ಅಮೆರಿಕದಲ್ಲಿ ಪ್ರತಿವರ್ಷ ಲಸಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ಋತುಮಾನದ ಕಾಯಿಲೆಯಾಗಿದೆ. ಅಂತೆಯೇ ಕರೊನಾ ಕೂಡ ಋತುಮಾನ ಕಾಯಿಲೆ ಆಗಬಹುದು.

ಸಾಮಾಜಿಕವಾಗಿ ಅಂತ್ಯ

ಸಾಮಾಜಿಕವಾಗಿ ಅಂತ್ಯ

ಇನ್ನೊಂದು ಮಾರ್ಗದಲ್ಲಿ ಕೊರೊನಾ ದೂರಾಗುವ ಬಗೆ ಎಂದರೆ, ಸಾಮಾಜಿಕವಾಗಿ ಅಂತ್ಯಗೊಳ್ಳುವುದು. ಕರೊನಾ ಇದ್ದರೂ ನಮ್ಮ ಕೆಲಸಗಳಲ್ಲಿ ಎಂದಿನಂತೆ ತೊಡಗಿಕೊಳ್ಳುವುದು. 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್​ ಫ್ಲೂ ಕೊನೆಗೊಂಡಿದ್ದು ಹೀಗೆಯೇ ಎಂದು ತಜ್ಞರು ಹೇಳುತ್ತಾರೆ. ಈ ಸಾಂಕ್ರಾಮಿಕಕ್ಕೆ 50 ಲಕ್ಷ ಜನರು ಬಲಿಯಾಗಿದ್ದರು. ಕೊನೆಗೆ ಇದರ ಅಂತ್ಯಕ್ಕೆ ವೈದ್ಯಕೀಯ ನೆರವು ದೊರೆಯಿತು.

ಮುಂದುವರೆದ ಆರ್ಥಿಕ ಚಟುವಟಿಕೆ

ಮುಂದುವರೆದ ಆರ್ಥಿಕ ಚಟುವಟಿಕೆ

ವೈದ್ಯಕೀಯ ಕಾರಣಕ್ಕಿಂತ ಸಾಮಾಜಿಕ ಕಾರಣದಿಂದಾಗಿಯೇ ಕರೊನಾ ಕೊನೆಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ, ಕೊರೊನಾ ಇದ್ದರೂ ಜಗತ್ತಿನೆಲ್ಲೆಡೆ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿದಿವೆ. ಏನೇ ಇರಲಿ ಕರೊನಾ ಅಂತ್ಯ ಸನ್ನಿಹಿತವಾಗಿರುವುದಂತೂ ಸತ್ಯ ಎನ್ನುತ್ತಾರೆ ತಜ್ಞರು.

ಅಂತರ ಕಾಯ್ದುಕೊಳ್ಳಬೇಕು

ಅಂತರ ಕಾಯ್ದುಕೊಳ್ಳಬೇಕು

ಲಸಿಕೆ ಯಶಸ್ಸು ಗಳಿಸದಿದ್ದರೆ ನಮಗಿರುವ ದಾರಿ ಎಂದರೆ ವೈಕ್ತಿಗತ ಅಂತರ ಕಾಯ್ದುಕೊಳ್ಳುವುದು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವುದು. ಆ ಮೂಲಕ ಅತಿ ಕಡಿಮೆ ಜನರಿಗೆ ಹಬ್ಬುವಂತೆ ನೋಡಿಕೊಳ್ಳುವುದು ಇನ್ನೊಂದು ಮಾರ್ಗವಾಗಿದೆ. ಆದರೆ, ಒಮ್ಮೆಲೇ ಇದು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುವ ಅಪಾಯವಂತೂ ಇದ್ದೇ ಇದೆ.

English summary
It’s a question the world is asking: When – and how -- will this pandemic end? The answer is not simple, and it depends on which expert you speak to. But the overall medical consensus appears to be that a real end to the COVID-19 outbreak will have to wait till a vaccine is developed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X