500 ಅಡಿ ಪ್ರಪಾತಕ್ಕೆ ಬೀಳುತ್ತಿದ್ದ ಬಸ್‌ಗೆ ತಡೆಯಾದ 35 ವರ್ಷಗಳ ಹಿಂದೆ ನೆಟ್ಟ ಒಂದು ಮರ: 32 ಪ್ರಯಾಣಿಕರು ಪಾರು

ನಾವಿಂದು ಮಾಡುವ ಒಂದು ಒಳ್ಳೆಯ ಕೆಲಸ ಭವಿಷ್ಯದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಫಿಲಿಪೈನ್ಸ್‌ನಲ್ಲಿ ನಡೆದ ಈ ಒಂದು ಘಟನೆಯೇ ಒಳ್ಳೆಯ ಉದಾಹರಣೆ. 35 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ರಕ್ಷಣೆಗಾಗಿ ನೆಟ್ಟಿದ್ದ ಒಂದು ಸಾಧಾರಣ ಪೈನ್ ಮರ, 3 ದಶಕಗಳ ನಂತರ ಬರೋಬ್ಬರಿ 32 ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾದ ಕಥೆಯಿದು.

ಆ ವ್ಯಕ್ತಿಯ ಹೆಸರು ಎಪಿಮಾಕೊ ಅಮಾನ್ಸಿಯೊ. ತಾನು ನೆಟ್ಟ ಮರ ಮುಂದೊಂದು ದಿನ ಇಷ್ಟೊಂದು ಜೀವಗಳನ್ನ ಕಾಪಾಡುತ್ತದೆ ಎಂದು ಸ್ವತಃ ಆತನೇ ಊಹಿಸಿರಲಿಲ್ಲ ನೋಡಿ.

Tree

2010ರಲ್ಲಿ ನಡೆದ ಆ ಭೀಕರ ಘಟನೆ

ಈ ಘಟನೆ ನಡೆದಿದ್ದು ಆಗಸ್ಟ್ 2010ರಲ್ಲಿ. ಫಿಲಿಪೈನ್ಸ್‌ನ ಸೆಬು ಪ್ರಾಂತ್ಯದ ಡಲಗೆಟ್ ಎಂಬಲ್ಲಿ ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಶಾಲಾ ಬಸ್ಸೊಂದು ಸಂಚರಿಸುತ್ತಿತ್ತು. ಪರ್ವತ ಪ್ರದೇಶದ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದಾಗ, ಬಸ್ಸಿನ ರೇಡಿಯೇಟರ್‌ನಿಂದ ಕುದಿಯುವ ಬಿಸಿ ನೀರು ಏಕಾಏಕಿ ಚಾಲಕನ ಮೇಲೆ ಎರಚಿದೆ. ಇದರಿಂದ ವಿಚಲಿತನಾದ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು, ರಸ್ತೆ ಬದಿಯಿದ್ದ ಸುಮಾರು 500 ಅಡಿ ಆಳದ ಪ್ರಪಾತದತ್ತ ನುಗ್ಗಿದೆ.

ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ 32 ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೇನು ಬಸ್ಸು ಪ್ರಪಾತಕ್ಕೆ ಉರುಳಿಯೇ ಬಿಟ್ಟಿತು, ಯಾರೂ ಬದುಕುವ ಸಾಧ್ಯವೇಯಿಲ್ಲ ಎನ್ನುವಷ್ಟರಲ್ಲಿ ಅಲ್ಲಿ ಒಂದು ಅಚ್ಚರಿಯ ಪವಾಡವೇ ನಡೆದಿತ್ತು ಎನ್ನಬಹುದು.

32 ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಮರ

ಪ್ರಪಾತದ ಅಂಚಿನಲ್ಲಿ ವೇಗವಾಗಿ ಉರುಳುತ್ತಿದ್ದ ಆ ಬಸ್ಸಿಗೆ ಒಂದು ದೈತ್ಯ ಪೈನ್ ಮರ ಅಡ್ಡಲಾಗಿ ನಿಂತಿತು. ಬಸ್ಸು ಆ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದು ಅಲ್ಲೇ ಸಿಲುಕಿಕೊಂಡಿತು. ಕೇವಲ ಒಂದು ಮರ 500 ಅಡಿ ಆಳದ ಪ್ರಪಾತ ಹಾಗೂ ಬಸ್ಸಿನ ನಡುವೆ ತಡೆ ಗೋಡೆಯಂತೆ ನಿಂತಿತ್ತು. ಆ ಮರ ಅಲ್ಲಿರದೇ ಹೋಗಿದ್ದರೆ, ಬಸ್ಸಿನಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರು.

ಆ ದಿನ ಆ ಮರ ಬರೋಬ್ಬರಿ 32 ಅಮಾಯಕ ವಿದ್ಯಾರ್ಥಿಗಳ ಪ್ರಾಣವನ್ನ ಉಳಿಸಿತ್ತು. ಅಚ್ಚರಿಯೆಂದರೆ ಆ ಮರ ಅಲ್ಲಿ ತಾನಾಗಿಯೇ ಬೆಳೆದಿರಲಿಲ್ಲ, ಅದನ್ನು ಮೂರುವರೆ ದಶಕಗಳ ಹಿಂದೆ ನೆಟ್ಟವರು ಇದೇ ಎಪಿಮಾಕೊ ಅಮಾನ್ಸಿಯೊ.

ಎಪಿಮಾಕೊ ಅಮಾನ್ಸಿಯೊ ಮರ ನೆಟ್ಟಿದ್ದ ಹಿಂದಿನ ಉದ್ದೇಶ

ಎಪಿಮಾಕೊ ಅಮಾನ್ಸಿಯೊ ಅವರು ತಾವು ಭವಿಷ್ಯದಲ್ಲಿ ಒಬ್ಬ ಹೀರೋ ಆಗಬೇಕು, ಪತ್ರಿಕೆಗಳಲ್ಲಿ ತಮ್ಮ ಹೆಸರು ಬರಬೇಕು ಎಂಬ ಯಾವುದೇ ನಿರೀಕ್ಷೆಯಿಂದ ಆ ಮರವನ್ನ ನೆಟ್ಟಿರಲಿಲ್ಲ. 35 ವರ್ಷಗಳ ಹಿಂದೆ, ತಮ್ಮ ಜಮೀನಿನಲ್ಲಿ ಮಣ್ಣು ಮತ್ತು ಕಲ್ಲುಗಳು ಕುಸಿಯುವುದನ್ನ ತಡೆಯಲು, ಭೂಮಿಯ ಸಂರಕ್ಷಣೆಗಾಗಿ ಆ ಮರವನ್ನ ನೆಟ್ಟಿದ್ದರು.

ದಶಕಗಳ ಕಾಲ ಬೆಳೆದು ಹೆಮ್ಮರವಾದ ಆ ಪೈನ್ ಮರ, ನಂತರ 32 ಕುಟುಂಬಗಳ ಪಾಲಿಗೆ ದೇವರಾಗಿ ನಿಂತಿತು. ಆ ಮರ ನೆಡುವಾಗ ಎಪಿಮಾಕೊ ಅವರಿಗೂ ಇದು ಮುಂದೆ ಇಷ್ಟು ದೊಡ್ಡ ಕಾರ್ಯಕ್ಕೆ ಬಳಕೆಯಾಗುತ್ತದೆ ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ.

ಈ ಘಟನೆಯ ಬಳಿಕ ತೆಗೆದ ಫೋಟೋದಲ್ಲಿ ಎಪಿಮಾಕೊ ಅಮಾನ್ಸಿಯೊ ಅವರ ಮುಖದಲ್ಲಿನ ಮುಗ್ಧ ನಗು ಹಾಗೂ ಸಾರ್ಥಕತೆ ಎಲ್ಲರ ಮನಸ್ಸನ್ನು ತಟ್ಟುತ್ತದೆ. ಪ್ರಕೃತಿಗಾಗಿ ನಾವು ಮಾಡುವ ಒಂದು ಸಣ್ಣ ಒಳಿತಿನ ಕೆಲಸ, ಮರಳಿ ನಮಗೆ ಯಾವ ರೂಪದಲ್ಲಿ ಆಶೀರ್ವಾದವಾಗಿ ಬರುತ್ತದೆ ಎಂಬುದನ್ನ ಯಾರು ಊಹಿಸಲು ಸಾಧ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+