2050ಕ್ಕೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ದ್ವಿಗುಣ, ಆತಂಕ ತಂದ ವರದಿ
ಬೆಂಗಳೂರು, ಸೆಪ್ಟೆಂಬರ್ 28: ಭಾರತದಲ್ಲಿ 2050ರ ವೇಳೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚಾಗುತ್ತದೆ ಎಂದು ಇಂಡಿಯಾ ಏಜಿಂಗ್ ರಿಪೋರ್ಟ್ 2023 ಹೇಳಿದೆ. ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ (ಯುಎನ್‌ಎಫ್‌ಪಿಎ) ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಸಹಯೋಗದೊಂದಿಗೆ ಹೊರ ತಂದಿರುವ ವರದಿಯಲ್ಲಿ ಆತಂಕಕಾರಿ ಅಂಶಗಳು ಬಹಿರಂಗಗೊಂಡಿವೆ.
ವರದಿಯ ಪ್ರಕಾರ, ಈ ಜನಸಂಖ್ಯೆಯು ಆ ವೇಳೆಗೆ 0- 14 ರ ನಡುವೆ ಇರುವ ಮಕ್ಕಳ ಸಂಖ್ಯೆಯನ್ನು ಮೀರಿಸುತ್ತದೆ ಎಂದು ತಿಳಿಸಲಾಗಿದೆ. 2022ರಲ್ಲಿ 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ 149 ಮಿಲಿಯನ್ ಜನರು ಭಾರತದಲ್ಲಿ ಜೀವಿಸಿದ್ದರು. ಇದು ದೇಶದ ಸುಮಾರು 10.5% ರಷ್ಟು ಎಂದು ತಿಳಿಸಲಾಗಿದೆ. ಇದೇ 2050ರ ವೇಳೆ ಈ ಜನಸಂಖ್ಯೆಯು 20.8% ಕ್ಕೆ ದ್ವಿಗುಣಗೊಳ್ಳುತ್ತದೆ. ಆಗ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ 347 ಮಿಲಿಯನ್ ಆಗಿರುತ್ತದೆ. ಇವರು ದೇಶದ ಒಟ್ಟು ಜನಸಂಖ್ಯೆಯ 36% ರಷ್ಟು ಇರುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದು 2050ಕ್ಕೆ ಮಕ್ಕಳ ಜನಸಂಖ್ಯೆಯನ್ನು ಮೀರಿಸಲಿದೆ. 2050ಕ್ಕೆ ಸರಿಯಾಗಿ 4 ವರ್ಷಗಳ ಮೊದಲು ಭಾರತದ ಹಿರಿಯರ ಜನಸಂಖ್ಯೆಯ ಗಾತ್ರವು 0-14 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯ ಗಾತ್ರಕ್ಕಿಂತ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ 15ರಿಂದ 59 ವಯಸ್ಸಿನ ಜನಸಂಖ್ಯೆಯ ಪಾಳು ಕೂಡ ಕುಸಿತವನ್ನು ಕಾಣಲಿದೆ. ಇದು ಭಾರತವು ಮುಂಬರುವ ವರ್ಷಗಳಲ್ಲಿ ವಯೋವೃದ್ಧರ ನಾಡಾಗಿ ಪರಿವರ್ತನೆಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಇಂಡಿಯಾ ಏಜಿಂಗ್ ರಿಪೋರ್ಟ್ 2023 ರ ಪ್ರಕಾರ, ವಯಸ್ಸಾದವರಲ್ಲಿ ಈ ಮಟ್ಟದ ಬಡತನವು ಅವರ ಜೀವನದ ಗುಣಮಟ್ಟ ಮತ್ತು ಆರೋಗ್ಯದ ಬಳಕೆಯ ಮೇಲೆ ಪರಿಣಾಮ ಬೀರಬಹುದು ಎಂದೂ ಕೂಡ ತಿಳಿಸಿದೆ. ಆ ನಿರ್ದಿಷ್ಟ ಜನರ ಕೆಲಸ, ಪಿಂಚಣಿ ಮತ್ತು ಆದಾಯದ ಸ್ಥಿತಿಯ ವಿಶ್ಲೇಷಣೆಯು 18.7% ವೃದ್ಧರು ಯಾವುದೇ ಆದಾಯವನ್ನು ಹೊಂದಿರುವುದಿಲ್ಲ. ಈ ಪ್ರಮಾಣವು 17 ರಾಜ್ಯಗಳಲ್ಲಿ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿದ್ದು, ಉತ್ತರಾಖಂಡದಲ್ಲಿ 19.3% ರಿಂದ ಲಕ್ಷದ್ವೀಪದಲ್ಲಿ 42.4% ರಷ್ಟಿದೆ ಎಂದು ವರದಿ ಹೇಳಿದೆ.
ಭಾರತವು ಈಗ ವಿಶ್ವದ ಅತಿ ಹೆಚ್ಚು ಹದಿಹರೆಯದವರು ಮತ್ತು ಯುವಜನರ ಜನಸಂಖ್ಯೆಯನ್ನು ಹೊಂದಿದೆ. ಇದು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ 65% ಭಾರತೀಯರನ್ನು ಹೊಂದಿದೆ ಎಂದು ತಿಳಿಸಲಾಗಿದೆ. ದೇಶದಲ್ಲಿ ವಯಸ್ಸಾದವರ ಜನಸಂಖ್ಯೆಯು ರಾಜ್ಯಗಳಾದ್ಯಂತ ಭಿನ್ನವಾಗಿದೆ. ಉದಾಹರಣೆಗೆ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ 2021 ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವಯಸ್ಸಾದವರು ಜೀವಿಸುತ್ತಿದ್ದರು. ಈ ಅಂತರವು 2036 ರ ವೇಳೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಬಿಹಾರ ಮತ್ತು ಉತ್ತರ ಪ್ರದೇಶವು 2021 ಹಾಗೂ 2036ರ ನಡುವೆ ವೃದ್ಧರ ಜನಸಂಖ್ಯೆ ಹೆಚ್ಚಾಗಲಿದೆ. ಆದಾಗ್ಯೂ, ಈ ರಾಜ್ಯಗಳಲ್ಲಿ ಭಾರತೀಯ ಸರಾಸರಿಗಿಂತ ಮಟ್ಟವು ಕಡಿಮೆ ಇರುತ್ತದೆ ಎಂದು ವರದಿ ಹೇಳಿದೆ.
ಈ ವರದಿಯು 2014 ರಿಂದ 2021 ರವರೆಗಿನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಅಡಿಯಲ್ಲಿ ವಯಸ್ಸಾದವರ ಮೇಲೆ 1259.6 ಶತಕೋಟಿ ವೆಚ್ಚವಾಗುತ್ತದೆ. ಇದು ಏಳು ವರ್ಷಗಳಲ್ಲಿ 182% ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. 2014 ರಿಂದ,ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸಿಎಸ್ಆರ್ ವೆಚ್ಚವು ಕಳೆದ ಏಳು ವರ್ಷಗಳಲ್ಲಿ 89 ಮಿಲಿಯನ್ ರೂಪಾಯಿಯಿಂದ 551 ಮಿಲಿಯನ್ ರೂಪಾಯಿಗೆ ಹೆಚ್ಚಾಗಿದೆ ಎಂದು ಅದು ಹೇಳಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications