ಫೇಸ್ಬುಕ್‌ನಲ್ಲಿ ಕೊರೊನಾ ಮಾಹಿತಿಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್
ಬೆಂಗಳೂರು, ಮಾರ್ಚ್ 27: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟ ಮುಂದುವರೆಸಿರುವ ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ನೀಡುತ್ತಾ ಬಂದಿದೆ. ಈಗ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್‌ನಲ್ಲಿ ಕೊರೊನಾಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ಪುಟವನ್ನು ಆರಂಭಿಸಲಾಗಿದೆ.
ಈ ಪುಟದಲ್ಲಿ ಕೊರೊನಾವೈರಸ್ ಕುರಿತ ನಿಮ್ಮ ಸಂದೇಹಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದು. ಕೊರೊನಾವೈರಸ್ ನಿಂದ ಉಂಟಾಗಿರುವ ಸಮಸ್ಯೆಗೆ ಸರ್ಕಾರ ನೀಡುತ್ತಿರುವ ಪರಿಹಾರ, ಆರೋಗ್ಯ ಇಲಾಖೆ, ವಿತ್ತ ಸಚಿವಾಲಯದ ಸೂಚನೆ, ಪ್ರಕಟಣೆ, ಆದೇಶಗಳನ್ನು ಒಂದೆಡೆಯಲ್ಲಿ ಪಡೆಯಬಹುದು.
ಭಾರತದಲ್ಲಿ ಕೊರೊನಾ ರೋಗಿಗಳು-LIve tracker
ಜೊತೆಗೆ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯವೂ ಇದೆ. ಈಗಾಗಲೇ ವಾಟ್ಸಾಪ್ ನಲ್ಲಿ ಈ ರೀತಿ ಚಾಟ್ ಬಾಟ್ ಆರಂಭಿಸಲಾಗಿದೆ. ಟೆಲಿಗ್ರಾಂನಲ್ಲಿ ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ರಾಜ್ಯಗಳ ಪ್ರತ್ಯೇಕ ಗುಂಪುಗಳಿವೆ. ಗೂಗಲ್ ಮ್ಯಾಪ್, ಆಂಡ್ರಾಯ್ಡ್ ಆಪ್, ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಹೀಗೆ ವಿವಿಧ ರೀತಿಯಲ್ಲಿ ಮಾಹಿತಿ ಹಾಗೂ ನೆರವು ಲಭ್ಯವಿದೆ.

ಫೇಸ್ಬುಕ್ ಸಹಾಯಕೇಂದ್ರ
MyGov Corona Hub-ಎಂದು ಫೇಸ್ಬುಕ್ ನಲ್ಲಿ ಸರ್ಚ್ ಮಾಡಿದರೆ ಈ ಪುಟ ಸಿಗಲಿದೆ. ಫೇಸ್ಬುಕ್ ಸಹಾಯಕೇಂದ್ರ ಎಂದು ಇದನ್ನು ಭಾವಿಸಬಹುದು. ಕೋವಿಡ್19 ಕುರಿತ ಮಾಹಿತಿ ಪಡೆಯಲು ಇದನ್ನು ಸಾರ್ವಜನಿಕರು ಬಳಸಬಹುದು ಎಂದು MyGov ನ ಸಿಇಒ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. ಇನ್ನೇಕೆ ತಡ ಫೇಸ್ಬುಕ್ ಪುಟಕ್ಕೆ ಲಗ್ಗೆ ಇಟ್ಟು ಮಾಹಿತಿ ಪಡೆದುಕೊಳ್ಳಿ.. ಫೇಸ್ಬುಕ್ ಹೆಲ್ಪ್ ಡೆಸ್ಕ್ ಲಿಂಕ್ ಇಲ್ಲಿದೆ

ವಾಟ್ಸಾಪ್ ಹಾಗೂ ಟೆಲಿಗ್ರಾಂನಲ್ಲೂ ಮಾಹಿತಿ
ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು, ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಹಾಗೂ ಟೆಲಿಗ್ರಾಂ ಗ್ರೂಪ್ ಆರಂಭಿಸಿದೆ. ಕೊರೊನಾ ಕುರಿತು ನಿಮಗೆ ಕಾಡುವ ಅನುಮಾನ, ಕುತೂಹಲಗಳಿಗೆ ಈ ಆಪ್ ನಲ್ಲಿ ಉತ್ತರ ಪಡೆಯಬಹುದು. ಕೊರೊನಾ ಕುರಿತಂತೆ ಸಂದೇಶಗಳಿದ್ದರೂ ಈ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಿಗುತ್ತದೆ. ಇದಲ್ಲದೆ ಗೂಗಲ್ ಮ್ಯಾಪ್ ಹಾಗೂ ಆಂಡ್ರಾಯ್ಡ್ ಆಪ್ ಮೂಲಕ ಕೊವಿಡ್19 ರೋಗಿ, ಕ್ವಾರಂಟೈನ್ ಆಗಿರುವವರ ಮಾಹಿತಿಯನ್ನು ನಿಮ್ಮ ಬೆರಳ ತುದಿಯಲ್ಲೇ ಸಿಗುವಂತೆ ಮಾಡಲಾಗಿದೆ.

ವಾಟ್ಸಾಪ್ ಮೂಲಕ ಸಹಾಯ ಪಡೆಯುವುದು ಹೇಗೆ?
ವಾಟ್ಸಾಪ್ ಸಂದೇಶವನ್ನು ಕಳುಹಿಸಿ +91 9013151515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೂಲಭೂತ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ಮೂಲಕ ಒಂದು ಬಟನ್ ಪ್ರೆಸ್ ಮಾಡಿ ಸರಿಯಾದ ಮಾಹಿತಿಯನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶ.

ಕೊರೊನಾ ಕುರಿತ ಸಹಾಯವಾಣಿ
ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್ ಚಾಟ್‌ಬಾಟ್ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075












Click it and Unblock the Notifications