ಬೆಂಗಳೂರಿನ ಮತದಾರರಿಗೆ ಥ್ಯಾಂಕ್ಸ್ ಎಂದ ಮೋದಿ
ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಸ್ಥಾಪಿಸುವ ಹಂತಕ್ಕೆ ಬಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮೇಲೆ ಜನರು ವಿಶ್ವಾಸ ಇರಿಸಿಕೊಂಡಿದ್ದಾರೆ. 126 ಕೋಟಿ ಜನರ ಆಶೋತ್ತರ ಈಡೇರಿಸುವುದೇ ನಮ್ಮ ಗುರಿ ಎಂದಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಬಳಸಿ ಟ್ವೀಟ್ ಮಾಡಿರುವ ಮೋದಿ, ಮಧ್ಯಪ್ರದೇಶ, ರಾಜಸ್ಥಾನ ನಂತರ ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದೇವೆ. ಇದು ಉತ್ತಮ ಆಡಳಿತ ಹಾಗೂ ರಾಜಕೀಯ ಬೆಳವಣಿಗೆಗೆ ಪೂರಕವಾಗಿದೆ ಎಂದಿದ್ದಾರೆ.
ಬೆಂಗಳೂರಿನ ಮತದಾರರು, ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ನನ್ನ ಅಭಿನಂದನೆ ತಿಳಿಸುತ್ತೇನೆ. ಬಿಬಿಎಂಪಿ ಚುನಾವಣೆ ಫಲಿತಾಂಶ ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ. [ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗ್ರೆಸ್ಸಿಗೆ ಮುಖಭಂಗ]
ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇದು ಬಿಜೆಪಿ ಕಾರ್ಯಕರ್ತರ ಗೆಲುವು ಎಂದಿದ್ದಾರೆ. ಅಮಿತ್ ಶಾ ಅವರು ಸದ್ಯ ತಮಿಳುನಾಡಿನ ಚಿದಂಬರಂನಲ್ಲಿ ನಟರಾಜ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
| ಒಟ್ಟು ಸ್ಥಾನಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
| 198 | 100 | 76 | 14 | 8 |
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆಬಿಬಿಎಂಪಿ ಫಲಿತಾಂಶ: ಬಿಜೆಪಿ 100; ಕಾಂಗ್ರೆಸ್ 76; ಜೆಡಿಎಸ್ 14; ಇತರೆ 8. ಈ ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು. ಬಿಜೆಪಿ 111 ಸ್ಥಾನ ಗಳಿಸಿತ್ತು. ಜೆಡಿಎಸ್ 15 ಸ್ಥಾನ ಪಡೆದಿತ್ತು. ಸರಳ ಬಹುಮತ ಸಾಬೀತು ಪಡಿಸಲು ಬಿಜೆಪಿಗೆ 103 ಸ್ಥಾನಗಳು ಬೇಕು.

ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ
ಮೈಕ್ರೋ ಬ್ಲಾಗಿಂಗ್ ತಾಣ ಬಳಸಿ ಟ್ವೀಟ್ ಮಾಡಿರುವ ಮೋದಿ, ಮಧ್ಯಪ್ರದೇಶ, ರಾಜಸ್ಥಾನ ನಂತರ ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದೇವೆ. ಇದು ಉತ್ತಮ ಆಡಳಿತ ಹಾಗೂ ರಾಜಕೀಯ ಬೆಳವಣಿಗೆಗೆ ಪೂರಕವಾಗಿದೆ ಎಂದಿದ್ದಾರೆ
|
ಥ್ಯಾಂಕ್ ಯೂ ಬೆಂಗಳೂರು
ಥ್ಯಾಂಕ್ ಯೂ ಬೆಂಗಳೂರು. ಬಿಜೆಪಿ ಮೇಲೆ ಮತದಾರರು ಇನ್ನೂ ನಂಬಿಕೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇತ್ತೀಚಿನ ನಗರ ಪಾಲಿಕೆ ಫಲಿತಾಂಶಗಳೇ ಸಾಕ್ಷಿ
|
125 ಕೋಟಿ ಜನರ ಆಶೋತ್ತರ ಈಡೇರಿಸುತ್ತೇವೆ
125 ಕೋಟಿ ಜನರ ಆಶೋತ್ತರ ಈಡೇರಿಸುತ್ತೇವೆ. ಎನ್ ಡಿಎ ಸರ್ಕಾರ ಎಲ್ಲರ ಏಳಿಗೆಗೆ ಬದ್ಧವಾಗಿದೆ.
|
ಕಾರ್ಯಕರ್ತರಿಗೆ ಗೆಲುವು ಸಲ್ಲಬೇಕು ಎಂದ ಶಾ
ಇದು ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯವಾಗಿದೆ. ಬೆಂಗಳೂರಿನ ಮತದಾರರಿಗೆ ನನ್ನ ಧನ್ಯವಾದಗಳು ಎಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
|
ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡೋಣ ಬನ್ನಿ
ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡೋಣ ಬನ್ನಿ #BJPSweepsBLR ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಎಂದು ಕರೆ ನೀಡಿದ ಬಿಜೆಪಿ ಕರ್ನಾಟಕ.
|
ತಮಿಳುನಾಡಿನ ದೇಗುಲದಲ್ಲಿ ಅಮಿತ್ ಶಾ
ತಮಿಳುನಾಡಿನ ಚಿದಂಬರಂನ ದೇಗುಲದಲ್ಲಿರುವ ಅಮಿತ್ ಶಾ ಅವರ ಚಿತ್ರಗಳು.
|
ಬಿಜೆಪಿ ಬೆಂಗಳೂರು ಘಟಕದಲ್ಲಿ ಸಂಭ್ರಮ
ಬಿಜೆಪಿ ಬೆಂಗಳೂರು ಘಟಕದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ












Click it and Unblock the Notifications