ನಿರ್ದಯಿ ಗಂಡ ಹೆಂಡತಿಯನ್ನು ಕತ್ತರಿಸಿ ಕತ್ತರಿಸಿ ಕೊಂದ

ಪ್ರತಿಷ್ಠಿತ Golden Nest apartment ಮನೆಯಲ್ಲಿ ಮಂಗಳವಾರ ರಾತ್ರಿ ಈ ಹೃದಯವಿದ್ರಾವಕ ಹತ್ಯೆ ನಡೆದಿದೆ. ಕೊಲೆ ಆರೋಪಿ, 29 ವರ್ಷದ ಗಿರೀಶ್ ಪೋತೆನನ್ನು ಪೊಲೀಸರು ರಾತ್ರಿಯೇ ಬಂಧಿಸಿದ್ದಾರೆ.
ಮಧುವಂತಿ ಮತ್ತು ಪೋತೆ ದಂಪತಿ ಮಧ್ಯೆ ಒಂದೇ ಸಮನೆ ಜಗಳಗಳಾಗುತ್ತಿದ್ದವು. ಗಂಡ ಹೆಂಡತಿ ಮಧ್ಯೆ ಹಣಕಾಸು ವೈಮನ್ಯಸವೂ ತಕೆದೋರಿತ್ತು ಎಂದು ನವಗಢ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಶಿವಾರ್ಕರ್ ತಿಳಿಸಿದ್ದಾರೆ.
ಮಂಗಳವಾರವೂ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಕೋಪೋದ್ರಿಕ್ತ ಪೋತೆ, ತನ್ನ ಹೆಂಡತಿಗೆ ಚಾಕುವಿನಿಂದ ತಿವಿದಿದ್ದಾನೆ. ಅಷ್ಟಕ್ಕೇ ಅವನ ಕೋಪ ಶಮನವಾಗಿಲ್ಲ. ಅದೇ ಚಾಕುವಿನಿಂದ ಆಕೆಯನ್ನು ಮೂರು ತುಂಡಾಗಿ ಕತ್ತರಿಸಿ, ಸಾಯಿಸಿದ್ದಾನೆ. ನಂತರ ಹೆಂಡತಿಯ ಶವವನ್ನು ಫ್ರಿಡ್ಜಿನಲ್ಲಿ ಇರಿಸಿ, ಕೂಲಾಗಿದ್ದ.
ಗಿರೀಶ್ ಪೋತೆಯ ಸಂಬಂಧಿಗಳಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದ್ದಾರೆ. ಮನೆಗೆ ಬಂದು ಶೋಧ ನಡೆಸಿದಾಗ ಪೊಲೀಸರಿಗೆ ಮಧುವಂತಿಯ ಪೀಸ್ ಪೀಸ್ ದೇಹ ದೊರೆತಿದೆ. ಗಿರೀಶ್ ಪೋತೆಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು IPC sections 302 (murder) ಮತ್ತು 201 (destruction of evidence) ಅನುಸಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications