Visa: ಭಾರತೀಯರಿಗೆ ಇನ್ನೂ ವಿದೇಶಿ ಪ್ರಯಾಣ ಮತ್ತಷ್ಟು ಸುಲಭ: ಹೇಗೆ ಅಂತಿರಾ? ಇಲ್ನೋಡಿ
ಬೆಂಗಳೂರು, ಫೆಬ್ರುವರಿ 20: ಭಾರತೀಯ ವೀಸಾ ಹೊಂದಿರುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ವರ್ಷ 2024ರಲ್ಲಿ ವೀಸಾ-ಆನ್-ಅರೈವಲ್ (VoA) ಸೌಲಭ್ಯಗಳನ್ನು ಹೆಚ್ಚಿಸಿದೆ. ಇದರಿಂದ ಭಾರತೀಯರಿಗೆ ವಿದೇಶ ಪ್ರಯಾಣವು ಮತ್ತಷ್ಟು ಸುಲಭ ಮತ್ತು ಅತ್ಯಧಿಕ ಅನುಕೂಲಕರವಾಗಿದೆ.
ಒಂದು ದೇಶಕ್ಕೆ ಬೇರೆ ದೇಶದ ಪ್ರಜೆಯು ಬರುವುದರ ಮೇಲೆ ಈ ರೀತಿಯ ವೀಸಾವನ್ನು ಆತನಿಗೆ ನೀಡಲಾಗುತ್ತದೆ. ಇದು ದೀರ್ಘಾವಧಿಗೆ ವಿದೇಶಕ್ಕೆ ತೆರಳುವವರ, ಇಲ್ಲವೇ ಆಗಮಿಸುವವರು ವೀಸಾ ಅರ್ಜಿ ಪ್ರಕ್ರಿಯೆ ಬೈಪಾಸ್ ಮಾಡಲು ಸಹಾಯ ಮಾಡುತ್ತದೆ. ಅಂತಾರಾಷ್ಟ್ರಯ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸಲು ಈ ವೀಸಾ-ಆನ್-ಅರೈವಲ್ ಸಹಾಯ ಮಾಡುತ್ತದೆ.

ಇನ್ನೂ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ವರದಿಯ ಅಂಶಗಳನ್ನು ನೋಡುವುದಾದರೆ, ಭಾರತೀಯ ಪಾಸ್‌ಪೋರ್ಟ್ ಜಾಗತಿಕ ಶ್ರೇಯಾಂಕದಲ್ಲಿ 80ನೇ ಸ್ಥಾನಕ್ಕೇರಿದೆ. 2024ರ ವೇಳೆಗೆ ಭಾರತೀಯ ಪ್ರಜೆಗಳಿಗೆ 57 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಲು ನೆರವಾಗುತ್ತದೆ ಎಂದು TIE ವರದಿ ಮಾಡಿದೆ.
ಇದಷ್ಟೇ ಅಲ್ಲದೇ ರಾಜತಾಂತ್ರಿಕ ಸಂಬಂಧಗಳು, ಆರ್ಥಿಕ ಪರಿಗಣನೆಗಳು, ಪ್ರವಾಸೋದ್ಯಮ ಪ್ರಚಾರ ಮತ್ತು ಭದ್ರತಾ ಕಾಳಜಿಗಳು ಸೇರಿದಂತೆ ಹಲವಾರು ಅಂಶಗಳ ಆಧಾರದ ಮೇಲೆ ದೇಶಗಳು ವೀಸಾ-ಆನ್-ಆಗಮನ ಸೌಲಭ್ಯಗಳನ್ನು ಸಹ ಒದಗಿಲಿಲಿದೆ.
ಹಾಗಾದರೆ ಯಾವ ದೇಶಗಳಲ್ಲಿ ನೀವು ಎಷ್ಟು ದಿನ ಇರಬಹುದು, ವೀಸಾಗಳ ಅವಧಿ ಕುರಿತು ಪಟ್ಟಿ ಇಲ್ಲಿದೆ. ಆಫ್ರಿಕಾ ಖಂಡದ ದೇಶಗಳಾದ ಬುರುಂಡಿಯಲ್ಲಿ ನೀವು 30 ದಿನಗಳು ಭಾರತೀಯರು ತೆರಳಲು ಅವಕಾಶ ಇದೆ. ಅದೇ ರೀತಿ ವಿವಿಧ ದೇಶಗಳ ಮಾಹಿತಿ ಇಲ್ಲಿದೆ.
ಆಫ್ರಿಕಾ ಖಂಡದ ದೇಶಗಳು
ಇಥಿಯೋಪಿಯಾ: 30 ದಿನಗಳು
ಗಿನಿಯಾ-ಬಿಸ್ಸೌ: 90 ದಿನಗಳು
ಮಡಗಾಸ್ಕರ್: 60 ದಿನಗಳು
ಕೇಪ್ ವರ್ಡೆ: 30 ದಿನಗಳು
ಕೊಮೊರೊಸ್: 45 ದಿನಗಳು
ಜಿಬೌಟಿ: 31 ದಿನಗಳು
ಮಾರಿಟಾನಿಯಾ: 90 ದಿನಗಳು
ಕೇಪ್ ವರ್ಡೆ: 30 ದಿನಗಳು
ಕೊಮೊರೊಸ್: 45 ದಿನಗಳು
ಜಿಬೌಟಿ: 31 ದಿನಗಳು
ಸೊಮಾಲಿಯಾ: 30 ದಿನಗಳು
ಟಾಂಜಾನಿಯಾ: 30 ದಿನಗಳು
ಕೇಪ್ ವರ್ಡೆ: 30 ದಿನಗಳು
ಕೊಮೊರೊಸ್: 45 ದಿನಗಳು
ಜಿಬೌಟಿ: 31 ದಿನಗಳು
ಟೋಗೋ: 7 ದಿನಗಳು

ಏಷ್ಯಾ ಖಂಡದ ದೇಶಗಳು
ಲಾವೋಸ್: 30 ದಿನಗಳು
ಮಲೇಷ್ಯಾ: 30 ದಿನಗಳು
ಕಾಂಬೋಡಿಯಾ: 30 ದಿನಗಳು
ಇರಾನ್ 30: ದಿನಗಳು
ಜೋರ್ಡಾನ್: 30 ದಿನಗಳು
ಮಾಲ್ಡೀವ್ಸ್: 30 ದಿನಗಳು
ಮಂಗೋಲಿಯಾ: 30 ದಿನಗಳು
ಮ್ಯಾನ್ಮಾರ್: 30 ದಿನಗಳು
ಶ್ರೀಲಂಕಾ: 30 ದಿನಗಳು
ಟಿಮೋರ್-ಲೆಸ್ಟೆ: 30 ದಿನಗಳು
ತೈವಾನ್: 14 ದಿನಗಳು
ನೇಪಾಳ: 90 ದಿನಗಳು
ಒಮಾನ್: 10 ದಿನಗಳು
ಕತಾರ್: 30 ದಿನಗಳು
ಥೈಲ್ಯಾಂಡ್: 15 ದಿನಗಳು
ವಿಯೆಟ್ನಾಂ: 30 ದಿನಗಳು
ಯುರೋಪ್
ಅರ್ಮೇನಿಯಾ: 120 ದಿನಗಳು
ಬೆಲಾರಸ್: 30 ದಿನಗಳು
ಜಾರ್ಜಿಯಾ: 90 ದಿನಗಳು
ಟರ್ಕಿ: 30 ದಿನಗಳು
ಉತ್ತರ ಅಮೇರಿಕ
ಸೇಂಟ್ ಲೂಸಿಯಾ:6 ವಾರಗಳು
ಟ್ರಿನಿಡಾಡ್ ಮತ್ತು ಟೊಬಾಗೋ: 90 ದಿನಗಳು
ಓಷಿಯಾನಿಯ
ಮಾರ್ಷಲ್ ದ್ವೀಪಗಳು: 90 ದಿನಗಳು
ಪಲಾವ್: 30 ದಿನಗಳು
ಸಮೋವಾ: 60 ದಿನಗಳು
ತುವಾಲು: 1 ತಿಂಗಳು
ಮೈಕ್ರೋನೇಶಿಯಾ: 30 ದಿನಗಳು
ನೌರು: 14 ದಿನಗಳು
ದಕ್ಷಿಣ ಅಮೆರಿಕ
ಬೊಲಿವಿಯಾ: 90 ದಿನಗಳು
ಇಷ್ಟು ದೇಶಗಳಿಗೆ ಭಾರತೀಯರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ ಎಂದು ವೀಸಾ-ಆನ್-ಅರೈವಲ್ (VoA) ತಿಳಿಸಿದೆ












Click it and Unblock the Notifications