ರಾಮಾಯಣದಲ್ಲೇ ಇತ್ತು ಪ್ರನಾಳ ಶಿಶು ಪರಿಕಲ್ಪನೆ: ದಿನೇಶ್ ಶರ್ಮಾ
ಲಕ್ನೋ, ಜೂನ್ 01: "ಪ್ರನಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಿಂದಲೂ ಇತ್ತು. ಸೀತೆಯೂ ಪ್ರನಾಳ ಶಿಶು" ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.
"ಸೀತೆಯು ಭೂಮಿಯಿಂದ ಜನಿಸಿದಳು ಎನ್ನುತ್ತಾರೆ. ಅಂದರೆ ರಾಮಾಯಣದ ಕಾಲದಿಂದಲೂ ಪ್ರನಾಳ ಶಿಶು ಪರಿಕಲ್ಪನೆ ಜಾರಿಯಲ್ಲಿತ್ತು ಎಂದಾಯಿತು" ಎಂದು ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಮಾತನಾಡುತ್ತಿದ್ದ ಶರ್ಮಾ, 'ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮ ಚಾಲ್ತಿಯಲ್ಲಿತ್ತು. ಸಂಜಯ ದೃತರಾಷ್ಟ್ರನಿಗೆ ಕುರುಕ್ಷೇತ್ರದ ಲೈವ್ ವರದಿ ನೀಡಿದ್ದು ಅದಕ್ಕೆ ಉತ್ತಮ ಉದಾಹರಣೆ' ಎಂದು ಅವರು ಹೇಳಿದ್ದರು.

ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಸಹ, 'ಮಹಾಭಾರತ ಕಾಲದಲ್ಲೇ ಅಂತರ್ಜಾಲ ಸೌಲಭ್ಯಗಳಿದ್ದವು ಎಂಬ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು.












Click it and Unblock the Notifications