ಕಾಶ್ಮೀರದಲ್ಲಿ ಸೇನಾ ಗಸ್ತು ತಂಡದ ಮೇಲೆ ಉಗ್ರರ ದಾಳಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರಿಗಾಗಿ ಇದೀಗ ಸೈನಿಕರು ಹುಡುಕಾಟ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಮೇ 26: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇಲ್ಲಿನ ಟ್ರಾಲ್ ಪ್ರದೇಶದಲ್ಲಿ ಈ ದಾಳಿ ಸಂಭವಿಸಿದೆ.
42 ರಾಷ್ಟ್ರೀಯ ರೈಫಲ್ಸ್ ನ ಮೇಲೆ ಶಂಕಿತ ಉಗ್ರರು ಸೈಮೂಹ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಯಾವುದೇ ಅಹಿತಕರ ಘಟನೆಗಳು ಸಂಭಿವಿಸಿದ್ದು ವರದಿಯಾಗಿಲ್ಲ. ತಕ್ಷಣ ಗುಂಡಿನ ದಾಳಿ ನಡೆಸಿದ ಸ್ಥಳವನ್ನು ಸೇನೆ ಸುತ್ತುವರಿದಿದೆ.
ಶಂಕಿತ ಉಗ್ರರಿಗಾಗಿ ಸೇನೆ ಹುಡುಕಾಟ ಮುಂದುವರಿಸಿದ್ದು, ಸ್ಥಳಕ್ಕೆ ಹೆಚ್ಚಿನ ಸೇನಾ ತುಕಡಿಗಳನ್ನೂ ಕಳುಹಿಸಿಕೊಡಲಾಗಿದೆ.













Click it and Unblock the Notifications