ಜಮ್ಮು ಮತ್ತು ಕಾಶ್ಮೀರ: ಸೇನಾ ಶಿಬಿರದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ

ನವದೆಹಲಿ, ಜೂನ್ 6: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಎಂಬಲ್ಲಿ ಉಗ್ರರು ಸೇನಾ ನೆಲೆ ಮತ್ತು ಪೊಲೀಸ್ ಠಾಣೆಯೊಂದರ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.

ಉಗ್ರರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು ಬಳಸಿ ಗ್ರೆನೇಡ್‌ಗಳನ್ನು (ಯುಬಿಜಿಎಲ್) ಎಸೆದಿದ್ದಾರೆ. ಆದರೆ, ಘಟನೆಯಲ್ಲಿ ಸೇನಾ ನೆಲೆ ಮತ್ತು ಪೊಲೀಸ್ ಠಾಣೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಸಾವು ನೋವುಗಳ ಕುರಿತು ವರದಿಯಾಗಿಲ್ಲ.

13 ರಾಷ್ಟ್ರೀಯ ರೈಫಲ್ಸ್‌ನ ಸೇನಾ ಶಿಬಿರ ಮತ್ತು ಹಾಜಿನ್ ಪೊಲೀಸ್ ಠಾಣೆಯ ಎರಡು ದಿಕ್ಕುಗಳಿಂದ ಬಂದ ನಾಲ್ಕರಿಂದ ಆರು ಮಂದಿ ಉಗ್ರರು ಸೇನೆ ಮತ್ತು ಪೊಲೀಸರ ಮೇಲೆ ಸುಮಾರು ಎಂಟು ಯುಬಿಜಿಎಲ್‌ಗಳನ್ನು ಎಸೆದಿದ್ದಾರೆ.

terrosists attacked an army post in jammu and kashmir

ಇದಕ್ಕೆ ಪ್ರತಿಯಾಗಿ ಗುಂಡಿನ ಕಾಳಗ ನಡೆಸಿದ ಸೇನಾ ಪಡೆ ಉಗ್ರರನ್ನು ಹಿಮ್ಮೆಟ್ಟಿಸಿದೆ.

ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಆತ್ಮಾಹುತಿ ದಾಳಿಯಲ್ಲ. ಸಂಪೂರ್ಣ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು, ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ದಾಳಿಗೂ ಕೆಲವೇ ಗಂಟೆಗಳ ಮುನ್ನ ಇಲ್ಲಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಸೋಪೋರ್ ನಲ್ಲಿ ಆಧುನಿಕ ಸ್ಫೋಟಕ ಬಳಸಿ ಸೇನಾ ವಾಹನವೊಂದನ್ನು ಜಖಂಗೊಳಿಸಲಾಗಿತ್ತು. ಶ್ರೀನಗರದಲ್ಲಿ ಉಗ್ರರು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+