ಭಯೋತ್ಪಾದನೆ ಎಂಬುದು ಮನುಕುಲಕ್ಕೆ ಗಂಭೀರ ಬೆದರಿಕೆ: ಜೈಶಂಕರ್

ನವದೆಹಲಿ,ಫೆಬ್ರವರಿ 23: ಭಯೋತ್ಪಾದನೆ ಎಂಬುದು ಮನುಕುಲಕ್ಕೇ ಬಹುದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಸಚಿವ ಎಸ್‌ ಜೈಶಂಕರ್ ಹೇಳಿದ್ದಾರೆ.

ಭಯೋತ್ಪಾದನೆ ಪರಿಣಾಮಕ್ಕೆ ತುತ್ತಾಗಿರುವ ಭಾರತ,ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಎಂದಿಗೂ ಮುಂಚೂಣಿಯಲ್ಲಿದೆ, ಮಾನಹಕ್ಕುಗಳ ರಕ್ಷಣೆ ಕುರಿತಂತೆ ಹೋರಾಡುತ್ತಿರುವ ಸಂಸ್ಥೆಗಳು ಒಳಗೊಂಡು ಎಲ್ಲರೂ ಭಯೋತ್ಪಾದನೆ ಪರಿಣಾಮವನ್ನು ಸ್ಪಷ್ಟವಾಗಿ ಅರಿತುಕೊಂಡಾಗ ಮಾತ್ರವೇ ಇದು ಸಾಧ್ಯವಾಗಲಿದೆ ಎಂದು ಹೇಳಿದರು.

ಮಾನವ ಹಕ್ಕುಗಳ ಮಂಡಳಿಯ 46ನೇ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಎಂಬುದು ಮನುಕುಲದ ಮೇಲಿನ ಅಪರಾಧ,ಮೂಲಭೂತವಾಗಿ ಇದು ಮನುಷ್ಯನ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

Terrorism Continues To Be One Of The Gravest Threats To Humankind: S Jaishankar

ಈಗ ಕಾಡುತ್ತಿರುವ ಕೊರೊನಾ ಪರಿಸ್ಥಿತಿಯು ಜಗತ್ತಿನ ವಿವಿಧೆಡೆ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.ಈಗಿನ ಸವಾಲು ಎದುರಿಸಲು ಪ್ರತಿಯೊಬ್ಬರು ಒಗ್ಗೂಡಬೇಕಿದೆ,ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ಪೂರಕವಾಗಿ ವಿವಿಧ ಸಂಸ್ಥೆಗಳು ಹಾಗೂ ವ್ಯವಸ್ಥೆಯು ಬದಲಾಗಬೇಕಾದುದು ಅಗತ್ಯವಾಗಿದೆ ಎಂದರು.

ಭಯೋತ್ಪಾದನೆಯ ನಿಗ್ರಹ ಕುರಿತಂತೆ ಭಾರತ ಕಳೆದ ತಿಂಗಳು ವಿಶ್ವಸಂಸ್ಥೆಯ ಎದುರು 8 ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಜೊತೆಗೂಡಿ ಕ್ರಿಯಾ ಯೋಜನೆ ಜಾರಿ ನಿಟ್ಟಿನಲ್ಲಿ ಪರಿಣಾಮವನ್ನು ಸ್ಪಷ್ಟವಾಗಿ ಅರಿತುಕೊಂಡಾಗ ಮಾತ್ರವೇ ಇದು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+