ಗುಜರಾತ್ ಚುನಾವಣೆ: ಮೋದಿ ಮೇಲೆ ಲಷ್ಕರ್ ಉಗ್ರರ ಕಣ್ಣು

Recommended Video

      ಲಷ್ಕರ್ ಉಗ್ರರ ಕಣ್ಣು ನರೇಂದ್ರ ಮೋದಿ ಹಾಗು ಯೋಗಿ ಆದಿತ್ಯನಾಥ್ ಮೇಲೆ | Oneindia Kannada

      ಬೆಂಗಳೂರು, ಅಕ್ಟೋಬರ್ 30: ಲಷ್ಕರ್ ಇ ತೋಯ್ಬಾದ 10 ಮಂದಿ ಉಗ್ರರ ತಂಡವು ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್ ನಲ್ಲಿ ಬೀಡುಬಿಟ್ಟಿದೆ. ಗುಜರಾತ್ ಸಮುದ್ರ ತೀರದ ಮೂಲಕ ಭಾರತ ಪ್ರವೇಶಿಸಲು ಹೊಂಚು ಹಾಕುತ್ತಿದ್ದು, ಪ್ರಧಾನಿ ಮೋದಿ ಇವರ ಮುಖ್ಯ ಟಾರ್ಗೆಟ್.

      ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವ 10 ಮಂದಿ ಉಗ್ರರ ತಂಡ ಬಗ್ಗೆ ಈ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

      Ten member Lashkar-e-Tayiba team set up to target Modi rallies in Gujarat

      ಮೀನುಗಾರರ ವೇಷದಲ್ಲಿ ದೇಶ ಪ್ರವೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮಾವೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಸಂಚು ನಡೆಸಿದೆ ಎಂದು ಗುಪ್ತಚರ ದಳ ಬಹಿರಂಗಪಡಿಸಿತ್ತು.

      ಪಾಕಿಸ್ತಾನದ ಮೂಲದ 70ಕ್ಕೂ ಅಧಿಕ ಬೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, 400ಕ್ಕೂ ಅಧಿಕ ಮೀನುಗಾರರನ್ನು ಸರಿಯಾದ ದಾಖಲೆಗಳಿಲ್ಲದ ಕಾರಣ ಬಂಧಿಸಲಾಗಿದೆ. ಪಾಕಿಸ್ತಾನವು ಅನಗತ್ಯವಾಗಿ ಹೆಚ್ಚೆಚ್ಚು ಬೋಟುಗಳನ್ನು ಈ ಕಡೆಗೆ ಬಿಡುತ್ತಿದ್ದು, ಗೊಂದಲ ಸೃಷ್ಟಿಸುವುದು ಮುಖ್ಯ ಉದ್ದೇಶವಾಗಿದೆ.

      26/11 ಮುಂಬೈ ದಾಳಿ ಮಾದರಿಯಲ್ಲಿ ಗುಜರಾತ್ ನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಲಾಗುತ್ತಿದೆ. ಹೀಗಾಗಿ, ಉತ್ತರಪ್ರದೇಶ ಸಿಎಂ ಯೋಗಿ ಸುತ್ತಲೂ 24/7 ಗಂಟೆ ಕಾರ್ಯ ನಿರ್ವಹಿಸುವ 36 ಶಸ್ತ್ರಸಜ್ಜಿತ ಕಮಾಂಡೋಗಳ ಭದ್ರತೆ. ಝೆಡ್++ ಗುಣಮಟ್ಟದಲ್ಲಿ ಸೂಚಿಸಿದಂತೆ ವಿಶೇಷ ವಾಹನಗಳು ಸಿಎಂಗೆ ರಕ್ಷಣೆಯಾಗಿರುತ್ತವೆ.

      ಪ್ರಧಾನಿ ಭದ್ರತೆಯ ಜವಾಬ್ದಾರಿ ಯನ್ನು ವಿಶೇಷ ಸುರಕ್ಷತಾ ದಳ (ಎಸ್​ಪಿಜಿ)ಹೊತ್ತಿರುತ್ತದೆ .ಒಟ್ಟು 3 ಸಾವಿರ ಕಮಾಂಡೋಗಳು ಎಸ್​ಪಿಜಿಯಲ್ಲಿದ್ದಾರೆ.
      ಎಸ್​ಪಿಜಿ ಬುಲೆಟ್​ಪ್ರೂಫ್ ವಾಹನ, ಅತ್ಯಾಧುನಿಕ ಗನ್, ಸುರಕ್ಷತಾ ಪರಿಶೀಲನಾ ಸಾಧನ ಒಳಗೊಂಡಿರುತ್ತದೆ. ಬಾಂಬ್, ಉಷ್ಣತೆ ಪತ್ತೆ ಸೆನ್ಸರ್ ಒಳಗೊಂಡ ಹಾಗೂ ಸ್ಪೋಟಕ ತೀವ್ರತೆ ನಿರೋಧಕ ಲೋಹದಿಂದ ತಯಾರಿಸಲಾದ ಬುಲೆಟ್​ಪ್ರೂಫ್ ಕಾರಿನಲ್ಲಿ ಪ್ರಧಾನಿ ಪ್ರಯಾಣಿಸುತ್ತಾರೆ.

      ಪ್ರಧಾನಿ ಕಾರಿಗೆ ಕಮಾಂಡೋಗಳ ಸರ್ಪಗಾವಲಿರುತ್ತದೆ, ಪ್ರಧಾನಿ ಕಾರಿನ ಜತೆಯಲ್ಲೇ ಮೊಬೈಲ್ ಜ್ಯಾಮರ್ ಕೂಡ ಸಾಗುತ್ತದೆ, ದೇಶದ 14 ವಿವಿಐಪಿಗಳಿಗೆ ಎನ್​ಎಸ್​ಜಿ ಭದ್ರತೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+