Telangana Polls: ಮತದಾರರಿಗೆ ಕಾಂಗ್ರೆಸ್‌ನತ್ತ ಒಲವು?, ವಿಶ್ಲೇಷಣೆ
ಬೆಂಗಳೂರು, ನವೆಂಬರ್ 26: ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಸದ್ಯ ತೆಲಂಗಾಣದಲ್ಲಿ ಮತದಾರರು ಈ ಬಾರಿ ಕಾಂಗ್ರೆಸ್‌ನತ್ತ ವಾಲುವರೆ, 'ಕೈ' ನಾಯಕರ ಕೈ ಹಿಡಿಯುವರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ಪ್ರತ್ಯೇಕರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಪಾತ್ರ, ಪಕ್ಷದ ಆಲೋಚನೆ ಆಧಾರವಾಗಿಟ್ಟುಕೊಂಡು ಮತಯಾಚನೆ ಮಾಡಲಾಗಿತ್ತು.
ಪ್ರತಿ ಪ್ರಚಾರದಲ್ಲೂ ಅಳೆದು ತೂಗಿ ಕಾಂಗ್ರೆಸ್ ಹಿರಿಯ ನಾಯಕರು ಭಾಷಣೆ ಮಾಡಿದ್ದಾರೆ. ಸೂಕ್ಷ್ಮವಾಗಿ ಮತದಾರರನ್ನು ಕೆಣಕಿದ್ದಾರೆ ಎನ್ನಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ರಾಜ್ಯ ಆಗುವಲ್ಲಿ ಕಾಂಗ್ರೆಸ್ ನ ಹೆಜ್ಜೆ ಗುರುತುಗಳನ್ನು ರಾಜಕೀಯ ಭಾಷಣದ ಮೂಲ ಆಧಾರವಾಗಿಟ್ಟುಕೊಳ್ಳಲಾಗಿದೆ.

ತೆಲಂಗಾಣದ ಜನರ ದೀರ್ಘಾವಧಿಯ ಆಕಾಂಕ್ಷೆಗಳನ್ನು ಪೂರೈಸಿದ್ದಕ್ಕಾಗಿ ಕೃತಜ್ಞತೆಯಾರ್ಥವಾಗಿ ಮತಗಳನ್ನು ಕೇಳಲಾಗಿದೆ. ಈ ಮೂಲಕ ಭಾವನಾತ್ಮಕವಾಗಿ ಕಾಂಗ್ರೆಸ್ ಕಲ್ಲು ಹೊಡೆದಿದೆ. ಹೀಗಾಗಿ ಈ ಬಾರಿ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ರಚನೆಯಲ್ಲಿ ತನ್ನ ಪಾತ್ರ ನೆನಪಿಸಿದ ಕಾಂಗ್ರೆಸ್
ರಾಜ್ಯ ರಚನೆಯಲ್ಲಿ ತನ್ನ ನಿರ್ಣಾಯಕ ಪಾತ್ರವನ್ನು ಮತದಾರರಿಗೆ ನೆನಪಿಸಿದೆ. ಕಾಂಗ್ರೆಸ್ ಇಲ್ಲಿ ಏನೇನು ಮಾಡಲಿದೆ ಎಂಬ ಕನಸುಗಳನ್ನು ಜನರಲ್ಲಿ ಬಿತ್ತುವ ಮೂಲಕ ಗೆಲುವಿನ ಕಾರ್ಯತಂತ್ರ ರೂಪಿಸಲಾಗಿದೆ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಬದ್ಧತೆಗಳನ್ನು ಅಭಿಯಾನದಲ್ಲಿ ಕೇಂದ್ರ ಬಿಂದುವಾಗಿ ಭಾಷಣ ಮಾಡಿದ್ದಾರೆ.
ತೆಲಂಗಾಣದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೆಪ್ಟೆಂಬರ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ತನನ್ನು ತೆಲಂಗಾಣಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾಗಿ ವಿವರಿಸಿದ್ದರು. ಸೆಪ್ಟೆಂಬರ್ 17 ರಂದು ಭಾವೋದ್ರಿಕ್ತ ಭಾಷಣದಲ್ಲಿ ಅವರು ಸಮಾಜದ ಎಲ್ಲಾ ವರ್ಗಗಳಿಗೆ ಬದ್ಧವಾಗಿರುವ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರಳಬೇಕು ಎಂದು ಕರೆ ನೀಡಿದ್ದರು.

ಅಭಿವೃದ್ಧಿ ಕನಸು ಸಾಕಾರಕ್ಕೆ ಬಂಬಲಿಸಲು ಮನವಿ
ತೆಲಂಗಾಣ ರಚನೆಯಲ್ಲಿ ಪಕ್ಷದ ಕಾರ್ಯ, ಪಾತ್ರದ ಸ್ಮರಿಸಿದ ಅವರು, ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಕುರಿತು ಭಾಷಣ ಮಾಡಿದ್ದರು. ತೆಲಂಗಾಣದಲ್ಲಿ ಅಭಿವೃದ್ಧಿ ಕನಸನ್ನು ಕಾಂಗ್ರೆಸ್ ಸಾಕಾರಗೊಳಿಸಲಿದೆ. ಆದ್ದರಿಂದ ಈ ಬಾರಿ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದರು.
ಈ ಮಹಾನ್ ರಾಜ್ಯವಾದ ತೆಲಂಗಾಣದ ಭಾಗವಾಗಲು ನಮಗೆ ಅವಕಾಶವಿದೆ. ಈಗ, ರಾಜ್ಯವನ್ನು ಹೊಸ ಎತ್ತರಕ್ಕೆ ಏರಿಸುವುದು ನಮ್ಮ ಕರ್ತವ್ಯ. ನೀವು ನಮ್ಮನ್ನು ಬೆಂಬಲಿಸುತ್ತೀರಾ? ಸೋನಿಯಾ ಕೇಳಿದ್ದರು. ಅದಾದ ಮೇಲೆ ಚುನಾವಣೆ ಅಭಿಯಾನದಲ್ಲಿ ಕರ್ನಾಟಕದಲ್ಲಿ ಬಹುಮತ ಗಳಿಸಲು ಕಾರಣವಾಗಿ ಗ್ಯಾರಂಟಿ ಯೋಜನೆಗಳನ್ನು ಅಲ್ಲಿ ಸಹ ಘೋಷಿಸಿದ್ದಾರೆ. ಇದು ಸಹ ಕಾಂಗ್ರೆಸ್‌ನತ್ತ ಮತದಾರರು ಒಲವು ತೋರಲು ಕಾರಣ ಎನ್ನಲಾಗಿದೆ. ಅದೇನೆ ಇದ್ದರೂ ರಾಜ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂದು ಕಾಯಲು ಡಿಸೆಂಬರ್ 3ರವರೆಗೆ ಕಾಯಬೇಕಿದೆ.
ಡಿಸೆಂಬರ್ 3ಕ್ಕೆ ಪಂಚ ರಾಜ್ಯಗಳ ಫಲಿತಾಂಶ
ರಾಜಸ್ಥಾನದಲ್ಲಿ ನ.25ರಂದು ಮತದಾನ ನಡೆದಿದೆ. ಇನ್ನೂ ನವೆಂಬರ್ 30ರಂದು ತೆಲಂಗಾಣ, ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದೆ. ನಂತರ ಡಿಸೆಂಬರ್ 3 ರಂದು ಭಾನುವಾರ ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications