Telangana Poll: ಮತದಾನಕ್ಕೆ ದಿನಗಣನೆ, ಬಿರುಸಾದ ಪ್ರಚಾರ, ನೀರ್ಣಾಯಕ ಅಭ್ಯರ್ಥಿಗಳ ವಿವರ ಇಲ್ಲಿದೆ

ಹೈದರಾಬಾದ್, ನವೆಂಬರ್ 21: ತೆಲಂಗಾಣದ ಮತದಾನ ದಿನಗಣನೆ ಆರಂಭವಾಗಿದ್ದು, ನವೆಂಬರ್ 30 ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಮತ್ತಷ್ಟು ಬಿರುಸುಗೊಂಡಿದೆ. ಕಾಂಗ್ರೆಸ್, ಬಿಜೆಪಿ, ಬಿಆರ್‌ಎಸ್ ಸೇರಿದಂತೆ ಪ್ರತಿ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿವೆ. ಹಾಗಾದರೆ ಇದರಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಪ್ರಮುಖ, ಕ್ಷೇತ್ರಗಳು ಯಾವುದು ಎಂದು ತಿಳಿಯಿರಿ.

ತೆಲಂಗಾಣದಲ್ಲಿ ಆಡಳಿತಾರೂಢ ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರವು ತನ್ನ ದಶಕಗಳ ಆಡಳಿತದಲ್ಲಿ ಕೆಲವು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಬಿಜೆಪಿಯು ಕಾಂಗ್ರೆಸ್‌ನಂತೆಯೇ ಪಕ್ಷವನ್ನು ರಾಜವಂಶದ ರಾಜಕೀಯವಾಗಿ ಬಿಂಬಿಸಿಕೊಂಡಿದೆ.

Telangana Polls: Voting Countdown Begins: Know Who Are The Decisive Candidates In The Election

ಕಾಂಗ್ರೆಸ್ ಸರ್ಕಾರ ಇತ್ತ ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡಿದ ತನ್ನ ಗ್ಯಾರಂಟಿಗಳ ಮೇಲೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಗೆಲ್ಲುವ ತಂತ್ರ ರೂಪಸಿಕೊಂಡಿದೆ. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೂಡ ಕಣದಲ್ಲಿ ಪೈಪೋಟಿ ಒಡ್ಡಲು ಸಜ್ಜಾಗಿವೆ. ಇತ್ತ ಎಐಎಂಐಎಂ ರಾಜ್ಯದ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸುವ ಮಾಹಿತಿ ಲಭ್ಯವಾಗಿದೆ.

ನಿರ್ಣಾಯಕ ಅಭ್ಯರ್ಥಿಗಳ ಪಟ್ಟಿ

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್: ಬಿಆರ್‌ಎಸ್ ವರಿಷ್ಠರು ಈ ಬಾರಿ ಎರಡು ಸ್ಥಾನಗಳಿಂದ ಚುನಾವಣೆಗೆ ಕಣಕ್ಕೆ ಇಳಿದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗಜ್ವೇಲ್ ಮತ್ತು ಕಾಮರೆಡ್ಡಿ ಎರಡು ಕ್ಷೇತ್ರಿದಂದ ನಾಮಪತ್ರ ಸಲ್ಲಿಸಿದ್ದಾರೆ. ಗಜ್ವೇಲ್ ಕೆಸಿಆರ್ ತವರು ಕ್ಷೇತ್ರವಾಗಿದೆ. ಅಲ್ಲಿಂದ ಮೂರನೇ ಬಾರಿಗೆ, ಕಾಮರೆಡ್ಡಿಯಿಂದ ಮೊದಲ ಭಾರಿಗೆ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ:ಎ.ರೇವಂತ್ ರೆಡ್ಡಿ ಸ್ಪರ್ಧೆ

ಕೆಸಿಆರ್ ವಿರುದ್ಧ ಕಾಮರೆಡ್ಡಿ ಕ್ಷೇತ್ರದಿಂದ ಕಾಂಗ್ರೆಸ್‌ನ ತೆಲಂಗಾಣ ಮುಖ್ಯಸ್ಥ ಎ.ರೇವಂತ್ ರೆಡ್ಡಿ ಅವರು ಸ್ಪರ್ಧಿಸುತ್ತಿದ್ದಾರೆ. ಇವರು ರೆಡ್ಡಿ ಕಾಂಗ್ರೆಸ್‌ನ ಫೈರ್‌ಬ್ರಾಂಡ್ ನಾಯಕರಾಗಿದ್ದಾರೆ. ಅವರ ತವರು ಕ್ಷೇತ್ರವಾದ ಕೊಡಂಗಲ್‌ನಿಂದಲೂ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕು ಸಾಧಿಸುವ ಜೊತೆಗೆ ರಾಜಕೀಯದಲ್ಲಿ ಭದ್ರ ನೆಲೆ ಕಟ್ಟಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

Telangana Polls: Voting Countdown Begins: Know Who Are The Decisive Candidates In The Election

BRS ಕೆಟಿ ರಾಮರಾವ್

BRS ಕೆಟಿ ರಾಮರಾವ್ ಇವರು ಸಹ ಕೆಸಿಆರ್ ಅವರ ಪುತ್ರ ಮತ್ತು ಕಾರ್ಯನಿರತ ಬಿಆರ್‌ಎಸ್ ಅಧ್ಯಕ್ಷರಾಗಿದ್ದು, ಅವರು ಸಹ ಕಣದಲ್ಲಿದ್ದಾರೆ. ಸಿರ್ಸಿಲ್ಲಾ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿದ್ದಾರೆ.

BJP ಬಂಡಿ ಸಂಜಯ್ ಕುಮಾರ್

ಬಿಜೆಪಿಯಿಂದ ಕರೀಂನಗರ ವಿಧಾನಸಭಾ ಕ್ಷೇತ್ರದಿಂದ ಬಂಡಿ ಸಂಜಯ್ ಕುಮಾರ್ ಅವರು ಎದುರಾಳಿಗೆ ತೀವ್ರ ಪೈಪೋಟಿ ಒಡ್ಡುವ ವಿಶ್ವಾಸದಲ್ಲಿದ್ದಾರೆ. ಇವರಿಗೆ ತೆಲಂಗಾಣ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಗಂಗುಲಾ ಕಮಲಾಕರ್ ಪ್ರತಿಸ್ಪರ್ಧಿಯಾಗಿದ್ದಾರೆ. ಈ ಕಮಲಾಕರ್ ಅವರು 2018 ಮತ್ತು 2014 ರ ವಿಧಾನಸಭಾ ಚುನಾವಣೆ ಪ್ರಬಲ ಸ್ಪರ್ಧೆಯೊಡ್ಡಿದ್ದರು. ಇವರ ವಿರುದ್ಧ ಬಲವಾದ ಹಿಂದುತ್ವ ಸಿದ್ಧಾಂತ ಹೊಂದಿರುವ ಸಂಜಯ್ ಕುಮಾರ್ ಅಖಾಡಕ್ಕಿಳಿದಿದ್ದಾರೆ.

ಕಾಂಗ್ರೆಸ್ ಮೊಹಮ್ಮದ್ ಅಜರುದ್ದೀನ್

ಮಾಜಿ ಕ್ರಿಕೇಟಿಗ ಈ ಮೊಹಮ್ಮದ್ ಅಜರುದ್ದೀನ್ ಸಹ ಜುಬ್ಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ಈ ಹಿಂದೆ 2009 ರಲ್ಲಿ ಯುಪಿಯ ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಗೆದಿದ್ದರು. ಅವರು 2018ರಲ್ಲಿ ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಸೇವೆ ನೀಡಿದ್ದು, ಈ ಭಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ನವೆಂಬರ್ 30ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಏಕಕಾಲಕ್ಕೆ ಮತದಾನ ನಡೆಯಲಿವೆ. ತೆಲಂಗಾಣ ಸೇರಿದಂತೆ ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಫಲಿತಾಂಶಗಳು ಡಿಸೆಂಬರ್ 3 ರಂದು ಹೊರಬೀಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+