Get Updates
Get notified of breaking news, exclusive insights, and must-see stories!

Telangana Elections: ವಿಕಲಚೇತನರಿಗೆ ಪಿಂಚಣಿ ಹೆಚ್ಚಳ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್

ಹೈದರಾಬಾದ್, ಜೂನ್. 09: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಶುಕ್ರವಾರ ದೈಹಿಕ ವಿಕಲಚೇತನರಿಗೆ ತಿಂಗಳಿಗೆ 1,000 ರೂಪಾಯಿ ಪಿಂಚಣಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಮಂಚೇರಿಯಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಸಿಎಂ, ರಾಜ್ಯದಲ್ಲಿನ ಅಂಗವಿಕಲರಿಗೆ ಇನ್ನು ಮುಂದೆ ರೂ. ತಿಂಗಳಿಗೆ 4,116 ರೂಪಾಯಿ ದೊರೆಯಲಿದೆ ಎಂದಿದ್ದಾರೆ.

ಬಿಆರ್‌ಎಸ್ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕಂಕಣ ಬದ್ಧವಾಗಿದೆ. ರಾಜ್ಯದ ಎಲ್ಲಾ ಖನಿಜ ನಿಕ್ಷೇಪಗಳಲ್ಲಿ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಕೆಸಿಆರ್ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕಲ್ಲಿದ್ದಲು ಗಣಿಗಾರಿಕೆಗಳನ್ನು ಮುಚ್ಚಿಸಲು ಪ್ರಯತ್ನಿಸುತ್ತಿವೆ ಎಂದು ಕೆಸಿಆರ್ ಆರೋಪಿಸಿದ್ದಾರೆ.

Telangana Elections: CM KCR announces hike in pension for physically challenged

49 ರಷ್ಟು ಷೇರುಗಳನ್ನು ಕಾಂಗ್ರೆಸ್ ಕೇಂದ್ರಕ್ಕೆ ಮಾರಾಟ ಮಾಡಿದ್ದರೆ, ಬಿಜೆಪಿ ಖಾಸಗೀಕರಣದ ಮಾರ್ಗವನ್ನು ಆಲೋಚಿಸಿ ಅದನ್ನು ಮತ್ತಷ್ಟು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಅಡಿಯಲ್ಲಿ ಗಣಿಗಾರಿಕೆ ಘಟಕವು ಲಾಭದಲ್ಲಿ ಮುನ್ನುಗ್ಗುತ್ತಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ನಂತರ ಕಂಪನಿಯು ಈ ವರ್ಷ 2,164 ಕೋಟಿ ರೂಪಾಯಿಗಳನ್ನು ಮುಟ್ಟುವ ಭಾರಿ ಆದಾಯವನ್ನು ಗಳಿಸುತ್ತಿದೆ ಎಂದು ಹೇಳಿದ್ದಾರೆ.

ಕಲ್ಲಿದ್ದಲು ಗಣಿಗಾರಿಕೆಯು ಉಷ್ಣ ವಿದ್ಯುತ್ ಉತ್ಪಾದನೆಯನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ ಎಂದು ಹೇಳಿದ ಸಿಎಂ, ಮೂರು ನೂರು ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದನೆಯು ಉಷ್ಣ ವಿದ್ಯುತ್ ಕ್ಷೇತ್ರಕ್ಕೆ ವಿದ್ಯುತ್ ಪೂರೈಕೆಯ ಬೆಂಬಲ ನೀಡುತ್ತದೆ. ದೇಶದಲ್ಲಿ ಬಿಆರ್‌ಎಸ್‌ನ ಗುರಿಯು ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸಕಾರಾತ್ಮಕ ಮಾಡುವುದು ಮತ್ತು ದೇಶದ ಅಗತ್ಯಗಳನ್ನು ಪೂರೈಸಲು ಸಹಾಯಕವಾಗುವುದು" ಎಂದು ಘೋಷಿಸಿದ್ದಾರೆ.

ಇದೇ ವೇಳೆ ಕೇಂದ್ರದ ಸರ್ಕಾರಗಳು ಇತರ ದೇಶಗಳಿಂದ ಕಲ್ಲಿದ್ದಲು ಆಮದನ್ನು ಅವಲಂಬಿಸಲು ಪ್ರಯತ್ನಿಸುತ್ತಿವೆ. ಆದರೆ ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಅಗತ್ಯಗಳಿಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಧರಣಿ ಪೋರ್ಟಲ್‌ನ ಪ್ರಮುಖ ಲಕ್ಷಣಗಳನ್ನು ವಿವರಿಸಿದ ಅವರು ರೈತರು ತಮ್ಮ ಭೂಮಿಯನ್ನು ರಕ್ಷಿಸುವ ಪ್ರಯೋಜನವನ್ನು ಪಡೆಯಲು ಪೋರ್ಟಲ್ ಹೇಗೆ ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.

ದಲಿತ ಬಂಧು, ಕುಶಲಕರ್ಮಿಗಳ ಬಿ.ಸಿ.ಕಲ್ಯಾಣ ಕಾರ್ಯಕ್ರಮ, ಕುರಿ ಸಾಕಾಣಿಕೆ ಯೋಜನೆ ಮುಂತಾದ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಇತರ ಪಕ್ಷಗಳ ಗಿಮಿಕ್ ಮತ್ತು ಸುಳ್ಳು ಭರವಸೆಗಳಿಗೆ ಬಲಿಯಾಗದಂತೆ ಜನತೆಗೆ ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರಾದ ವೇಮುಲ ಪ್ರಶಾಂತ್ ರೆಡ್ಡಿ, ಇಂದ್ರಕರನ್ ರೆಡ್ಡಿ, ಕೊಪ್ಪುಳ ಈಶ್ವರ್, ಗಂಗೂಲ ಕಮಲಾಕರ್, ಮುಖ್ಯ ಸಚೇತಕ ಬಾಲ್ಕ ಸುಮನ್, ಸಂಸದ ಸಂತೋಷ್ ರಾವ್, ಎಂಎಲ್‌ಸಿಗಳು, ಶಾಸಕ ದಿವಾಕರ್ ರಾವ್ ಸೇರಿದಂತೆ ಪಾಲಿಕೆಯ ಅಧ್ಯಕ್ಷರುಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+