Get Updates
Get notified of breaking news, exclusive insights, and must-see stories!

Telangana: ಸರ್ಕಾರ ರಚನೆಗಾಗಿ ರೆಡ್ಡಿ-ಡಿಕೆಶಿ ರಾಜ್ಯಪಾಲರ ಭೇಟಿ

ಹೈದರಾಬಾದ್, ಡಿಸೆಂಬರ್ 04: ತೆಲಂಗಾಣದಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ನ ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ತೆಲಂಗಾಣದಲ್ಲಿ ಭಾನುವಾರ ಸುಸೂತ್ರವಾಗಿ ಮತದಾನ ನಡೆಯಿತು. ರಾಜ್ಯದ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ಗೆ ಜನಾದೇಶ ದೊರೆತಿದೆ. ಮತದಾನಕ್ಕು ಮೊದಲು ಶನಿವಾರ ಶಿವಕುಮಾರ್ ಅವರನ್ನು ರಾಜ್ಯ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ನೇಮಿಸಲಾಯಿತು. ಈ ಮೂಲಕ ಪಕ್ಷದ ನಾಯಕರನ್ನು ಸಂಘಟಿತರಾಗಿ, ಬೇರೆ ಪಕ್ಷಗಳ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲಾಗಿದೆ.

Telangana: Congress leaders meet Governor Present Claimed to form the government.

ಮತದಾನ ಬಳಿಕ ಭಾನುವಾರ ರಾತ್ರಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರನ್ನು ರೇವಂತ್ ರೆಡ್ಡಿ ಮತ್ತು ಡಿಕೆಶಿ ಶಿವಕುಮಾರ್ ಅವರು ಭೇಟಿ ಮಾಡಿದರು. ಸರ್ಕಾರ ರಚನೆಯ ಬಹುಮತದ ಹಕ್ಕು ಮಂಡಿಸಿದರು.

ಇಂದಿನ ಸಭೆಯಲ್ಲಿ ಹಲವು ವಿಚಾರ ಚರ್ಚೆ

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಶಿವಕುಮಾರ್, ಈ ಹೊಸ ಚುನಾಯಿತ ಸದನದಲ್ಲಿ ನಾವು 65 ಸದಸ್ಯರೊಂದಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಿದ್ದೇವೆ. ನಾವು ಸೋಮವಾರ ಬೆಳಗ್ಗೆ 9.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದೇವೆ. ಅಂದು ಹಲವು ವಿಚಾರಗಳನ್ನು ಚರ್ಚಿಸುತ್ತೇವೆ ಎಂದರು.

ರಾಜ್ಯದಲ್ಲಿ 119 ಸದಸ್ಯ ಬಲದ ಸದನದಲ್ಲಿ ಬಹುಮತವಿದ್ದರೂ ಪಕ್ಷವು ಜಿದ್ದಾಜಿದ್ದಿನ ಸ್ಥಿತಿಯಲ್ಲಿದೆ ಎಂದು ಎಣಿಕೆಯ ರಾತ್ರಿಯೇ ಕಾಂಗ್ರೆಸ್‌ನ ನಿರ್ಧಾರವು ಸೂಚಿಸುತ್ತದೆ. ಬಹುಮತಕ್ಕೆ 60 ಸೀಟು ಬರಬೇಕಿದ್ದು, ಇಷ್ಟು ಮತ ಕಾಂಗ್ರೆಸ್ ಗಳಿಸಿದ್ದು, ಸರ್ಕಾರ ರಚನೆಯ ಸಿದ್ಧತೆಯಲ್ಲಿದೆ.

Telangana: Congress leaders meet Governor Present Claimed to form the government.

2024ರಲ್ಲೂ ಬಿಜೆಪಿ ಹ್ಯಾಟ್ರಿಕ್ ಬಾರಿಸಲಿದೆ?

ಜೂನ್ 2021 ರಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ರೇವಂತ್ ರೆಡ್ಡಿ, ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯು ವಿರುದ್ಧ ಹೋರಾಟಿ ರಾಜ್ಯದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಿ ವಿಜಯದತ್ತ ಕೊಂಡೊಯ್ದ ಕೀರ್ತಿಗೆ ರೇವಂತ್ ರೆಡ್ಡಿ ಪಾತ್ರರಾಗಿದ್ದಾರೆ. 2014 ರಿಂದ ಈವರೆಗೆ ಬಿಆರ್ಎಸ್ ಎರಡು ಬಾರಿ ಸರ್ಕಾರ ರಚಿಸಿತ್ತು. ಜನ ಬೆಂಬಲ ಗಳಿಸಿತ್ತು. ಅದರ ವಿರುದ್ಧ ಕಾಂಗ್ರೆಸ್‌ ಹೋರಾಟ ಅಷ್ಟು ಸರಳವಾಗಿರಲಿಲ್ಲ ಎನ್ನಲಾಗಿದೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಸೋತ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ವಿಫಲವಾದ ಕಾಂಗ್ರೆಸ್‌ ಗೆ ತೆಲಂಗಾಣದಲ್ಲಿ ಬಹುಮತ ಲಭಿಸಿದೆ. ಮಧ್ಯಪ್ರದೇಶದಲ್ಲಿ ಸುಮಾರು ಎರಡು ದಶಕಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ 230 ಸ್ಥಾನಗಳ ಪೈಕಿ 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿ ಆಯಿತು.

ಪ್ರಧಾನಿ ಪ್ರತಿಕ್ರಿಯೆ

ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಗೆ ಸಿಕ್ಕ ಈ ಫಲಿತಾಂಶಗಳು 2024ರ ಲೋಕಸಭೆ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಹೊಂದುವ ಮುನ್ಸೂಚನೆ ಸಿಕ್ಕಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವುದನ್ನು ಇಂದಿನ ಫಲಿತಾಂಶಗಳು ಸೂಚಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೆಲ ಬಿಜೆಪಿ ಮುಖಂಡರು ಬಿಜೆಪಿಗೆ 2024 ಗೆಲುವು ಪಡೆದು ಹ್ಯಾಟ್ರಿಕ್ ಭಾರಿಸಲಿದೆ ಎಂದು ಹೇಳಿದ್ದಾರೆ. ಇಂದಿನ ಫಲಿತಾಂಶವು ಜನಾದೇಶವು ಭ್ರಷ್ಟಾಚಾರ, ಓಲೈಕೆ ಮತ್ತು ರಾಜವಂಶದ ರಾಜಕೀಯವನ್ನು ದೂರ ತಳ್ಳಿದ್ದಾರೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+