Telangana Election:ತೆಲಂಗಾಣ ಮಹಿಳೆಯರು ಕರ್ನಾಟಕಕ್ಕಿಂತ ಎರಡು ಪಟ್ಟು ಹೆಚ್ಚಳ ಲಾಭ ಪಡೆಯಬಹುದು, ಹೇಗೆ?, ರಾಹುಲ್‌ ಹೇಳಿದ್ದೇನು?

ಹೈದರಾಬಾದ್, ನವೆಂಬರ್‌, 02: ತೆಲಂಗಾಣದಲ್ಲಿ ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಸಾಮಾಜಿಕ ಪಿಂಚಣಿ, ಎಲ್‍ಪಿಜಿ ಸಿಲಿಂಡರ್‌ನಲ್ಲಿ ಉಳಿತಾಯ ಮತ್ತು ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಮೂಲಕ ತೆಲಂಗಾಣದಲ್ಲಿ ಮಹಿಳೆಯರು 4,000 ರೂಪಾಯಿವರೆಗೆ ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಭರವಸೆ ನೀಡಿದ್ದಾರೆ.

ಕಾಳೇಶ್ವರಂ ಯೋಜನೆಯ ಮೆಡಿಗಡ್ಡಾ ಬ್ಯಾರೇಜ್ ಬಳಿಯ ಅಂಬಟಿಪಲ್ಲಿ ಗ್ರಾಮದಲ್ಲಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ ಎನ್ನಲಾದ ಎಲ್ಲ ಹಣವನ್ನು ಮರಳಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಭರವಸೆ ನೀಡಿದ್ದಾರೆ.

Telangana Assembly election 2023: Rahul Gandhi announces Rs 4,000 monthly package for women

ಇಲ್ಲಿ ಮುಖ್ಯಮಂತ್ರಿಗಳ ಲೂಟಿಯಿಂದ ತೆಲಂಗಾಣ ಮಹಿಳೆಯರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಅವರು ಲೂಟಿ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು.

ಮೊದಲ ಹಂತವಾಗಿ ಪ್ರತಿ ತಿಂಗಳು 2,500 ರೂಪಾಯಿಗಳನ್ನು ಸಾಮಾಜಿಕ ಪಿಂಚಣಿಯಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 1,500 ರೂಪಾಯಿ ಉಳಿತಾಯ ಆಗಲಿದೆ. ಈಗ 1,000 ರೂಪಾಯಿ ಬೆಲೆಯ ಎಲ್‌ಪಿಜಿ ಸಿಲಿಂಡರ್ ಅನ್ನು 500 ರೂಪಾಯಿಗಳಿಗೆ ಮತ್ತು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಮೂಲಕ ಇನ್ನೂ 1,000 ರೂಪಾಯಿಗಳನ್ನು ಪೂರೈಸಲಾಗುತ್ತದೆ ಎಂದಿ ಭರವಸೆ ನೀಡಿದ್ದಾರೆ.

ಇವೆಲ್ಲದರ ಜೊತೆಗೆ ನೀವು ಪ್ರತಿ ತಿಂಗಳು 4,000 ರೂಪಾಯಿ ಪ್ರಯೋಜನ ಪಡೆಯುತ್ತೀರಿ. ಇದನ್ನು ಜನರ ಸರ್ಕಾರ ಸರ್ಕಾರ ಎಂದು ಕರೆಯಲಾಗುತ್ತದೆ" ಎಂದು ಕಾಂಗ್ರೆಸ್‌ ಅನ್ನು ಶ್ಲಾಘಿಸಿಕೊಂಡರು. ಇನ್ನು ತೆಲಂಗಾಣದಲ್ಲಿ 1 ಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ಆರೋಪಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ನೇತೃತ್ವದ ಪಕ್ಷದ ನಡುವೆ ಹೋರಾಟವಿದ್ದರೂ ಬಿಆರ್‌ಎಸ್, ಬಿಜೆಪಿ ಮತ್ತು ಎಂಐಎಂ ಒಂದೇ ಕಡೆ ಸ್ಪರ್ಧಿಸಲಿವೆ ಎಂದು ಹೇಳಿದರು.

ಎಂಐಎಂ ಮತ್ತು ಬಿಜೆಪಿ ಬಿಆರ್‌ಎಸ್‌ಗೆ ಬೆಂಬಲ ನೀಡುತ್ತಿವೆ. ಆದ್ದರಿಂದ ನೀವು ದುರುಳ ನೀತಿ ಅನುಸರಿಸುತ್ತಿರುವ ಸರ್ಕಾರವನ್ನು ತೊಡೆದುಹಾಕಲು ಮತ್ತು ಜನಪರ ಸರ್ಕಾರವನ್ನು ಸ್ಥಾಪಿಸಲು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+