ದೇಶದ ಮೊದಲ ಖಾಸಗಿ ರೈಲು ತೇಜಸ್‌ಗೆ ಮೊದಲ ತಿಂಗಳೇ ಲಾಭ
ನವದೆಹಲಿ, ನವೆಂಬರ್ 11: ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ)ಯ ತೇಜಸ್ ಎಕ್ಸ್ ಪ್ರೆಸ್ ತನ್ನ ಮೊದಲ ತಿಂಗಳ ಕಾರ್ಯಾಚರಣೆಯಲ್ಲೇ ಬಂಪರ್ ಲಾಭ ಗಳಿಸಿದೆ.
ಅಕ್ಟೋಬರ್ 2019ರ ತನಕ ಸುಮಾರು 70 ಲಕ್ಷ ರು ತನಕ ಲಾಭ ಗಳಿಸಿದೆ ಎಂದು ಐಆರ್ ಸಿಟಿಸಿ ಪ್ರಕಟಿಸಿದೆ. ಒಟ್ಟಾರೆ, ಟಿಕೆಟ್ ಮಾರಾಟ ಆಧಾರದ ಮೇಲೆ 3.70 ಕೋಟಿ ರು ಆದಾಯ ಗಳಿಸಿದೆ ಎಂದು ತಿಳಿದು ಬಂದಿದೆ.
ವಿಶ್ವದರ್ಜೆಯ 50 ರೈಲು ನಿಲ್ದಾಣಗಳನ್ನು ನಿರ್ಮಿಸಿ ಸುಮಾರು 150 ರೈಲುಗಳನ್ನು ಆ ಜಾಲದಲ್ಲಿ ಸೇರಿಸುವುದು ರೈಲ್ವೆ ಇಲಾಖೆಯ ಯೋಜನೆಯಾಗಿದ್ದು, ಲಕ್ನೋ-ದೆಹಲಿ ತೇಜಸ್ ಎಕ್ಸ್ ಪ್ರೆಸ್ ಮೊದಲ ಖಾಸಗಿ ರೈಲು ಎಂದೆನಿಸಿದೆ.

ಅಕ್ಟೋಬರ್ 05ರಿಂದ ಆರಂಭಗೊಂಡು ಸರಾಸರಿ ಶೇ 80-85ರಷ್ಟು ಪ್ರಯಾಣಿಕರನ್ನು ರೈಲು ಹೊಂದಿತ್ತು ಎಂಬ ಮಾಹಿತಿ ಸಿಕ್ಕಿದೆ. ಅಕ್ಟೋಬರ್ 05 ರಿಂದ 28(21 ದಿನಗಳು, ವಾರಕ್ಕೆ 6 ದಿನ ಸಂಚರಿಸುವ ರೈಲು) ದಿನಗಳ ಅವಧಿಯ ಆದಾಯ, ಲಾಭ ಗಳಿಕೆ ಲೆಕ್ಕ ಸಿಕ್ಕಿದೆ. ಪ್ರತಿ ದಿನದ ಲೆಕ್ಕದಲ್ಲಿ 17.50 ಲಕ್ಷ ರು ಪ್ರಯಾಣಿಕರ ಟಿಕೆಟ್ ದರದಿಂದ ಗಳಿಸಿದೆ. ಈ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಐಆರ್ ಟಿಸಿಗೆ 3 ಕೋಟಿ ರು ವೆಚ್ಚವಾಗಲಿದೆ.












Click it and Unblock the Notifications