ಪತ್ನಿಯ ಸ್ನೇಹಿತೆ ಮೇಲೆ ಅತ್ಯಾಚಾರ: ಟೆಕ್ಕಿ ಬಂಧನ

Hyderabad Techie Katam Raju held for raping wife's friend a married woman
ಹೈದರಾಬಾದ್, ಅ.19: ಗೃಹಿಣಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸಾಫ್ಟ್ ವೇರ್ ಇಂಜಿನಿಯರನನ್ನು ಶುಕ್ರವಾರ ಬಂಧಿಸಲಾಗಿದ್ದು, ಈ ಕುಕೃತ್ಯಕ್ಕೆ ನೆರವು ನೀಡಿದ ಆರೋಪದ ಮೇಲೆ ಆತನ ಪತ್ನಿಯ ಬಂಧನಕ್ಕೆ ಬಲೆ ಬೀಸಿರುವುದಾಗಿ ಮಲ್ಕಾಗಿರಿ ಪೊಲೀಸರು ತಿಳಿಸಿದ್ದಾರೆ.

32 ವರ್ಷದ ಕಾತಂ ರಾಜು ಬಂಧಿತ ಟೆಕ್ಕಿ. ಮಿರ್ಜಾಲಗುಡದಲ್ಲಿ ಈತನ ಮನೆ 5ನೇ ಮಹಡಿಯಲ್ಲಿದ್ದು, ಬಾಧಿತ ಗೃಹಿಣಿಯ ಮನೆ 2ನೇಯ ಮಹಡಿಯಲ್ಲಿದೆರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 14ರಂದು ಈ ಘಟನೆ ನಡೆದಿದೆ. ರಾಜುನ ಪತ್ನಿ ಉಷಾ ಶ್ರೀ ಬಾಧಿತ ಗೃಹಿಣಿಯನ್ನು ತನ್ನ ಮನೆಗೆ ಆಮಂತ್ರಿಸಿದ್ದಳು. 24 ವರ್ಷದ ಬಾಧಿತಳು ಮನೆಗೆ ಬರುತ್ತಿದ್ದಂತೆ ಉಷಾ ಪೂರ್ವಯೋಜನೆಯಂತೆ ಹೊರಗಿನಿಂದ ತನ್ನ ಮನೆಗೆ ಬೀಗ ಹಾಕಿ ಹೊರಹೋಗಿದ್ದಳು.

ಸ್ನಾನದ ಕೋಣೆಯಲ್ಲಿದ್ದ ರಾಜು ಹೊರಬರುತ್ತಿದ್ದಂತೆ ಕೆಳಮನೆ ಗೃಹಿಣಿಯನ್ನು ತನ್ನ ಮನೆಯಲ್ಲಿ ನೋಡಿದ್ದಾನೆ. ಆಕೆಗೆ ತಂಪುಪಾನೀಯ ನೀಡಿ ಉಪಚರಿಸಿದ್ದಾನೆ. ಆದರೆ ಅದರಲ್ಲಿ ಮತ್ತುಬರಿಸುವ ಔಷಧ ಬೆರೆಸಿ, ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 (ಅತ್ಯಾಚಾರ) ಪ್ರಕಾರ ಸಾಫ್ಟ್ ವೇರ್ ಇಂಜಿನಿಯರ್ ಕಾತಂ ರಾಜು ವಿರುದ್ಧ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಲುಂಗಾರ್ ಹೌಸ್ ಬಳಿ ತನ್ನ ವಕೀಲ ಕಾಜಾ ಮೊಯಿನುದ್ದೀನ್ ತನ್ನ ಮೇಲೆ ಅತ್ಯಾಚಾಋವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆರು ತಿಂಗಳ ಹಿಂದೆ ತನ್ನ ಪತಿ ಶ್ರೀನಿವಾಸನಿಂದ ತನಗೆ ವಿಚ್ಛೇದನ ದೊರಕಿಸಿಕೊಡುವಂತೆ ಕೋರಲು ಕಾಜಾನನ್ನು ಭೇಟಿಯಾಗಿದ್ದಾಗಿ 23 ವರ್ಷದ ಬಾಧಿತ ವಿವಾಹಿತ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಆದರೆ ಮತ್ತೊಮ್ಮೆ ಪ್ರಕರಣದ ಸಂಬಂಧ ವಕೀಲ ಕಾಜಾನನ್ನು ಬೇಟಿಯಾಗಲು ಹೋಗಿದ್ದಾಗ ಆತ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಬಾಧಿತ ವಿವಾಹಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+