ಶಾಲೆಯಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಶಿಕ್ಷಕಿಯರು- ಜಗಳ ಬಿಡಿಸಲು ಮಕ್ಕಳು ಹರಸಾಹಸ!
ಯಂಥಾ ಕಾಲ ಬಂತು ನೋಡಿ. ಒಂದು ಕಡೆ ಶಿಕ್ಷಕಿಯರೇ ಶಾಲೆಯಲ್ಲಿ ನಿಂತು ಮಕ್ಕಳ ಮುಂದೆ ಐಟಂ ಸಾಂಗ್‌ಗೆ ಕುಣಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ, ಮತ್ತೊಂದು ಕಡೆ ಮಕ್ಕಳೆದುರೇ ಶಿಕ್ಷಕರ ಲವ್ವಿಡವ್ವಿ. ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯರಿಬ್ಬರು ವಿದ್ಯಾರ್ಥಿಗಳ ಎದುರು ಚಪ್ಪಲಿಯಲ್ಲಿ ಹೊರೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಘಟನೆಗಳು ವಿದ್ಯಾರ್ಥಿಗಳಿಗೆ ಯಾವ ಸಂದೇಶವನ್ನು ನೀಡುತ್ತದೆ ಎನ್ನುವ ಸಣ್ಣ ಪರಿವು ಕೂಡ ಇಲ್ಲದೆ ಶಿಕ್ಷಕಿಯರು ಅಸಹ್ಯವಾಗಿ ಹೊಡೆದಾಡಿಕೊಂಡಿದ್ದಾರೆ.
ಮಕ್ಕಳು ಜಗಳ ಆಡಿದರೆ ಶಿಕ್ಷಕರು ಬುದ್ಧಿ ಹೇಳಬೇಕು. ಅಂಥದ್ರಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಎದುರು ಚಪ್ಪಲಿಯಿಂದ ಹೊಡೆದಾಡಿಕೊಂಡು ಜಗಳವಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಬಿಹಾರದ ರಾಜಧಾನಿ ಪಾಟ್ನಾದ ಕೊರಿಯಾ ಪಂಚಾಯತ್‌ನ ಬಿಹ್ತಾ ಮಿಡ್ಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ಇಬ್ಬರು ಮಹಿಳಾ ಶಿಕ್ಷಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಶಾಲೆಯ ಕಿಟಕಿಗಳನ್ನು ಮುಚ್ಚುವ ವಿಚಾರದಲ್ಲಿ ಮುಖ್ಯಗುರು ಹಾಗೂ ಶಿಕ್ಷಕಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ನಂತರ ವಿವಾದಕ್ಕೆ ತಿರುಗಿದೆ. ಮಾತು ಮಾತಿಗೆ ಬೆಳೆದು ಶಿಕ್ಷಕಿಯರು ಹೊಡೆದಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ತರಗತಿಯೊಳಗೆ ಮತ್ತು ನಂತರ ಮೈದಾನದಲ್ಲಿ ಶಿಕ್ಷಕಿಯರಿಬ್ಬರು ಪರಸ್ಪರ ಹಲ್ಲೆ ನಡೆಸುವುದನ್ನು ನೋಡುತ್ತಿದ್ದರು. ಕೆಲವರು ಹೊಡೆದಾಟವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಕ್ಕಳು ಜಗಳ ಬಿಡಿಸಲು ಮುಂದಾಗಲು ಧೈರ್ಯ ಮಾಡಿದರಾದರು ತಮಗೆ ಈ ಜಗಳ ಬಿಡಿಸಲು ಸಾಧ್ಯವಾಗಿಲ್ಲ. ಕೊನೆಗೆ ಈ ಜಗಳ ಬೀದಿಯಲ್ಲೂ ನಡೆದಿದೆ.
बिहार पटना बिहटा
— ऋषि रंजन 🇮🇳 (@rishiranja) May 25, 2023
महिला हेड मास्टर और शिक्षिका के बीच जमकर चले लात-घूसे: पटना में शिक्षा का मंदिर बना अखाड़ा, खेत में एक-दूसरे को पटककर पीटा।
पटना के बिहटा स्थित एक सरकारी स्कूल में महिला हेड मास्टर और शिक्षिका आपस में भिड़ गईं। इस दौरान दोनों के बीच जमकर लात-घूसे चले। आलम ऐसा था… pic.twitter.com/WhTTHZHLt3
ಒಂದು ಕಡೆ ತರಗತಿಯ ಕಿಟಕಿಗಳನ್ನು ಮುಚ್ಚುವಂತೆ ಮನವಿ ಮಾಡುತ್ತಿದ್ದು, ಇನ್ನೊಂದು ಕಡೆ ಅದನ್ನು ನಿರಾಕರಿಸುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಹಾಗೂ ಶಿಕ್ಷಕಿ ಅನಿತಾ ಕುಮಾರಿ ನಡುವೆ ಕಿಟಕಿ ವಿಚಾರವಾಗಿ ವಾಗ್ವಾದ ಆರಂಭವಾಯಿತು. ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ತರಗತಿಯಿಂದ ಹೊರಗೆ ಬಂದ ತಕ್ಷಣ. ಶಿಕ್ಷಕಿ ಅನಿತಾ ಕೈಯಲ್ಲಿ ಚಪ್ಪಲಿಯೊಂದಿಗೆ ಅವರ ಹಿಂದೆ ಓಡಿ ಅವರನ್ನು ಹೊಡೆಯಲು ಪ್ರಾರಂಭಿಸುತ್ತಾರೆ.
ಈ ಜಗಳದಲ್ಲಿ ಮತ್ತೊಬ್ಬ ಶಿಕ್ಷಕಿ ಸೇರಿಕೊಂಡರು ಮತ್ತು ಇಬ್ಬರೂ ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿಯನ್ನು ಮೈದಾನದಲ್ಲಿ ನೆಲದ ಮೇಲೆ ಕೂದಲು ಎಳೆದಾಡಿ ಹೊಡೆದಿದ್ದಾರೆ. ಒಬ್ಬರು ಚಪ್ಪಲಿಯಿಂದ ಹೊಡೆದರೆ, ಇನ್ನೊಬ್ಬರು ಕೋಲು ಬಳಸಿರುವುದು ಕಂಡು ಬಂದಿದೆ. ವೀಡಿಯೊದ ಕೊನೆಯಲ್ಲಿ ಕೆಲವು ಪುರುಷರು ಜಗಳವನ್ನು ನಿಲ್ಲಿಸುತ್ತಾರೆ. ಎನ್‌ಡಿಟಿವಿ ಪ್ರಕಾರ, ಶಾಲೆಯಲ್ಲಿ ಇಬ್ಬರು ಶಿಕ್ಷಕರ ನಡುವೆ ವೈಯಕ್ತಿಕ ವಿವಾದವಿದ್ದು ಅದು ಜಗಳಕ್ಕೆ ಕಾರಣವಾಯಿತು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನರೇಶ್ ತಿಳಿಸಿದರು.
ಘಟನೆ ಕುರಿತು ಬ್ಲಾಕ್ ಶಿಕ್ಷಣಾಧಿಕಾರಿ ಖಚಿತಪಡಿಸಿದ್ದಾರೆ. ಬಿಹ್ತಾ ಮಿಡಲ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಹಂಗಾಮಿ ಪ್ರಾಂಶುಪಾಲರು ಮತ್ತು ಸಹಾಯಕ ಶಿಕ್ಷಕರ ನಡುವಿನ ವೈಯುಕ್ತಿಕ ಕಲಹದಿಂದ ಇಡೀ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಇದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗಿದೆ. "ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರೂ ಶಿಕ್ಷಕರನ್ನು ಘಟನೆಯ ಬಗ್ಗೆ ವಿವರಿಸಲು ಕರೆಸಲಾಗಿದೆ ಮತ್ತು ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಅಧಿಕೃತ ಸೂಚನೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನರೇಶ್ ತಿಳಿಸಿದ್ದಾರೆ.












Click it and Unblock the Notifications